ಬೆಕ್ಕು,ನಾಯಿ,ದನ,ಮೊಲಗಳನ್ನು ಪ್ರೀತಿಸಿ,ಅದಕ್ಕೊಂದು ಮುತ್ತಿಡೋರನ್ನು ನೋಡಿರ್ತಿರಾ…ಆದರೆ ಈ ಬೆಡಗಿ ಮಾತ್ರ ಲೊಚಕ್ ಅಂತ ಮುತ್ತಿಟ್ಟಿದ್ದು ಕತ್ತೆಗೆ. ಈ ಪೋಟೋ ನೋಡಿದ ನೆಟ್ಟಿಗರ ಕತ್ತೆಗೂ ಒಂದು ಕಾಲ ಬಿಡಿ ಅಂತ ಕಮೆಂಟ್ ಮಾಡ್ತಿದ್ದಾರೆ. ಸಾಕುಪ್ರಾಣಿಗಳ ಮೇಲೆ ಜೀವಾನೇ ಇಟ್ಕೊಂಡಿರೋ ಸ್ಯಾಂಡಲ್ ವುಡ್ ಟಾಪ್ ಬೆಡಗಿ ಅದಿತಿ ಪ್ರಭುದೇವ್ ಶೂಟಿಂಗ್ ಬಿಡುವಿನಲ್ಲಿ ಸಿಕ್ಕ ಕತ್ತೆಗೆ ಮುತ್ತಿಟ್ಟು ಸುದ್ದಿಯಾಗಿದ್ದಾರೆ.

ಸದ್ಯ ಆನ ಚಿತ್ರದಲ್ಲಿ ಬ್ಯುಸಿಯಾಗಿರೋ ಅದಿತಿ ಪ್ರಭುದೇವ ಕತ್ತೆ ಗೆ ಮುತ್ತಿಟ್ಟು ಪ್ರೀತಿ ಮಾಡ್ತಿರೋ ಪೋಟೋ ಸಖತ್ ವೈರಲ್ ಆಗಿದೆ. ಆನ ಶೂಟಿಂಗ್ ನ ಬಿಡುವಿನಲ್ಲಿ ಕೂತಿದ್ದ ಅದಿತಿ ಸೆಟ್ ಬಳಿಕ ಕಂಡ ಕತ್ತೆಯನ್ನು ಸಿಕ್ಕಾಪಟ್ಟೆ ಮುದ್ದಿಸಿದ್ದಾರಂತೆ. ಅಷ್ಟೇ ಅಲ್ಲ ಸೋ ಸ್ವೀಟ್ ಆಫ್ ಯೂ ಅಂತ ಮುತ್ತಿಕ್ಕಿ ಕಳಸಿದ್ದಾರಂತೆ.

ಶ್ಯಾನೆ ಟಾಪಾಗವ್ಳೇ ನಟಿಯ ಈ ಅವತಾರ ನೋಡಿದ ನೆಟ್ಟಿಗರು ಕತ್ತೆಗೂ ಒಂದು ಕಾಲ ಅನ್ನೋ ಮಾತು ಈಗ ನಿಜ ಆಯ್ತು ನೋಡಿ ಅಂತ ಕಮೆಂಟ್ ಮಾಡಿ ಅದಿತಿ ಕಾಲೆಳೆದಿದ್ದಾರೆ.

ಕತ್ತೆಗೊಂದು ಮುತ್ತು ಅಂತ ಅದಿತಿ ಪೋಟೋ ಸಖತ್ ವೈರಲ್ ಆಗ್ತಿದ್ದು, ಕೆಲವರು ನಟಿಮಣಿಯರು ಸುದ್ದಿಯಾಗೋಕೆ ಇಂಥವೆಲ್ಲ ಗಿಮಿಕ್ ಕೂಡ ಮಾಡ್ತಾರೆ ಅಂತ ಕುಟುಕಿದ್ದಾರೆ.