ಸೋಮವಾರ, ಏಪ್ರಿಲ್ 28, 2025
HomeBreakingಅಶ್ವತ್ಥಾಮನಾಗಿ ಅಬ್ಬರಿಸಲಿದ್ದಾರಾ ಕಿಚ್ಚಸುದೀಪ್...! ಬಿಗ್ ಅಫರ್ ಬಿಟ್ಟಿದ್ದರ ಹಿಂದಿದ್ಯಾ ಬೊಂಬಾಟ್ ಪ್ಲ್ಯಾನ್...?!

ಅಶ್ವತ್ಥಾಮನಾಗಿ ಅಬ್ಬರಿಸಲಿದ್ದಾರಾ ಕಿಚ್ಚಸುದೀಪ್…! ಬಿಗ್ ಅಫರ್ ಬಿಟ್ಟಿದ್ದರ ಹಿಂದಿದ್ಯಾ ಬೊಂಬಾಟ್ ಪ್ಲ್ಯಾನ್…?!

- Advertisement -

ಸ್ಯಾಂಡಲ್ ವುಡ್ ನ ಬ್ಯುಸಿ ನಟ ಸುದೀಪ್. ‌ಸಾಲು ಸಾಲು ಚಿತ್ರಗಳು, ಬಹುಭಾಷೆಯ ಆಫರ್, ಕಿರುತೆರೆಯ ಆಂಕ್ಯರಿಂಗ್ ಹೀಗೆ ಸಖತ್ ಬ್ಯುಸಿಯಾಗಿರೋ ಸುದೀಪ್ ಮುಂದಿನ ಚಿತ್ರ ಯಾವುದು?

ನಿಮ್ಮ ಪ್ರಶ್ನೆಗೆ ಕಾದಿಗೆ ಅಷ್ಟೇ ಇಂಟ್ರಸ್ಟಿಂಗ್ ಉತ್ತರ. ಸದ್ಯ ಕೋಟಿಗೊಬ್ಬ-3 ಹಾಗೂ ಫ್ಯಾಂಟಮ್‌ ಚಿತ್ರ ಮುಗಿಯೋ ಹಂತದಲ್ಲಿರೋದರಿಂದ ಸುದೀಪ್ ಮುಂದಿನ ಚಿತ್ರ ಯಾವುದು ಅನ್ನೋದು ಕುತೂಹಲದ ಪ್ರಶ್ನೆ.

ಒಂದು ಸಿನಿಮಾ ಮುಗಿಯೋ ಮುನ್ನವೇ ಮತ್ತೊಂದು ಸಿನಿಮಾಗೆ ಸ್ಕೆಚ್ ಹಾಗೂ ಸ್ಕ್ರಿಪ್ಟ್ ರೆಡಿ ಇರೋ ತರ ನೋಡಿಕೊಳ್ಳೋ ಸುದೀಪ್ ಈ ಭಾರಿಯೂ ಇದರಲ್ಲಿ ಎಡವಿಲ್ಲ. ಸಧ್ಯ ಅನೂಪ ಭಂಡಾರಿ ಜೊತೆ ಸೇರಿರೋ ಸುದೀಪ್ ಅಶ್ವತ್ಥಾಮ ನಾಗಿ ಅಬ್ಬರಿಸೋ ಸಿದ್ಧತೆಯಲ್ಲಿದ್ದಾರೆ.

ಕಿಚ್ಚ್ ತಮ್ಮ ಸ್ವಂತ ಬ್ಯಾನರ್ ನಲ್ಲಿ ಇಂತಹದೊಂದು ಅದ್ದೂರಿ ಚಿತ್ರ ನಿರ್ಮಾಣಕ್ಕೆ ಸಿದ್ಧತೆ ನಡೆಸಿದ್ದು ಇದು ಬಿಗ್ ಬಜೆಟ್ ಚಿತ್ರ ಎನ್ನಲಾಗ್ತಿದೆ. ರಂಗಿತರಂಗ ಖ್ಯಾತಿಯ ಅನೂಪ ಭಂಡಾರಿ ಈ ವಿಭಿನ್ನ ಹಾಗೂ ಇಂಟ್ರಸ್ಟಿಂಗ್ ಕತೆಗೆ ಆಕ್ಷ್ಯನ್ ಕಟ್ ಹೇಳಲಿದ್ದಾರೆ.

ಮಹಾಭಾರತದಲ್ಲಿ ಬರುವ ದ್ರೋಣಾಚಾರ್ಯರ ಮಗ ಅಶ್ವತ್ಥಾಮನ ಕತೆಯನ್ನು ಆಧಾರವಾಗಿಟ್ಟುಕೊಂಡು ಕತೆ ಹೆಣೆಯಲಾಗಿದ್ದು, ಫ್ಯಾಂಟಮ್ ಸಿನಿಮಾ ಕೆಲಸದ ಬಳಿಕ ಈ ಚಿತ್ರ ಘೋಷಣೆಯಾಗೋ ಸಾಧ್ಯತೆ ಇದೆ.‌

ಇನ್ನೇನು ಕೆಲದಿನಗಳಲ್ಲೇ ಕಿಚ್ಚ ಸುದೀಪ್ ಕಿರುತೆರೆಯಲ್ಲಿ ಬ್ಯುಸಿಯಾಗಲಿದ್ದು, ಬಿಗ್ ಬಾಸ್ ಆರಂಭವಾಗಲಿದೆ. ಹೀಗಾಗಿ ಈ ಬಿಗ್ ಬಜೆಟ್ ಸಿನಿಮಾವನ್ನು ಸುದೀಪ್ ಬಿಗ್ ಬಾಸ್ ವೇದಿಕೆಯಲ್ಲೇ ಘೋಷಿಸಿದರೂ ಅಚ್ಚರಿಯಿಲ್ಲ.

RELATED ARTICLES

Most Popular