ನಿಧಾನಕ್ಕೆ ಬಿಗ್ ಬಾಸ್ ಮನೆಯಲ್ಲಿ ಅಸಲಿ ಆಟ ಶುರುವಾಗಿದ್ದು, ಟಾಸ್ಕ್ ಹೆಸರಿನಲ್ಲಿ ಒಬ್ಬರಿಗೊಬ್ಬರು ಬೈಯ್ದಾಡಿಕೊಳ್ಳುತ್ತ,ಅವಾಚ್ಯ ಶಬ್ದಗಳಿಂದ ನಿಂದಿಸಿಕೊಳ್ಳುತ್ತ ಪ್ರೇಕ್ಷಕರಿಗೆ ಕಿರಿ ಕಿರಿ ತರುತ್ತಿದ್ದಾರೆ.

ಬಿಗ್ ಬಾಸ್ ಹೊಸ ಟಾಸ್ಕ್ ನೀಡಿದ್ದು, ಸ್ಪರ್ಧಿಗಳ ಎರಡು ಗುಂಪುಗಳನ್ನು ಮಾಡಿ ಒಂದಕ್ಕೆ ಮನುಷ್ಯರು, ಇನ್ನೊಂದಕ್ಕೆ ವೈರಸ್ ಎಂದು ಹೆಸರಿಡಲಾಗಿದೆ. ವೈರಸ್ ತಂಡ ಮನುಷ್ಯರ ಮೇಲೆ ದಾಳಿ ಮಾಡಬೇಕು. ಮನುಷ್ಯ ತಪ್ಪಿಸಿಕೊಳ್ಳಬೇಕು. ಒಂದೊಮ್ಮೆ ಮನುಷ್ಯನ ಮೇಲೆ ವೈರಸ್ ಅಟ್ಯಾಕ್ ಆದರೇ ಮನುಷ್ಯರು ವೈರಸ್ ಕೊಡುವ ಕಾಟ ಸಹಿಸಿಕೊಳ್ಳಬೇಕು.

ವೈರಸ್ ತಂಡ ದಾಳಿಗೊಳಗಾದ ವ್ಯಕ್ತಿಯ ಮೇಲೆ ನೀರು ಸುರಿಯುವುದು, ಬಟ್ಟೆ ಎಸೆಯುವುದು, ಭಾರವಾದ ವಸ್ತು ಎಸೆಯುವುದು ಸೇರಿದಂತೆ ವಿಚಿತ್ರ ಟಾರ್ಚರ್ ನೀಡುತ್ತದೆ. ಇದನ್ನು ಎದುರಿಸಿ ಮನುಷ್ಯ ಗೆದ್ದರೆ ತಂಡಕ್ಕೆ ಪಾಯಿಂಟ್ಸ್. ಸೋತರೆ ವೈರಸ್ ತಂಡಕ್ಕೆ ಪಾಯಿಂಟ್ಸ್

ಈ ಆಟದಿಂದ ಸ್ಪರ್ಧಿಗಳ ಅಸಲಿ ಸ್ವಭಾವ ಬಯಲಿಗೆ ಬರುತ್ತಿದೆ. ಮೊದಲ ಬಾರಿಗೆ ವೈರಸ್ ಅಟ್ಯಾಕ್ ಗೆ ತುತ್ತಾದ ಚಂದ್ರಕಲಾ ಟಾಸ್ಕ್ ಗೆದ್ದು ತಮ್ಮ ತಂಡಕ್ಕೆ ಪಾಯಿಂಟ್ಸ್ ತಂದು ಕೊಟ್ಟರು. ಆದರೆ ಎರಡನೇ ಬಾರಿಗೆ ಮನುಷ್ಯರು ತಂಡದಿಂದ ದಾಳಿಗೆ ಒಳಗಾದ ಗೀತಾ ಮಾತ್ರ ಸೋತು ಹೋದರು.
https://www.instagram.com/p/CMMg57lIWC_/?utm_source=ig_web_copy_link
ಇನ್ನು ಈ ಟಾಸ್ಕ್ ವೇಳೆ ಅಟ್ಯಾಕ್ ಮಾಡುವ ವೇಳೆ ಮುಗಿಬಿದ್ದ ಪ್ರಶಾಂತ್ ಸಂಬರಗಿ ವಿರುದ್ಧ ಬ್ರೋ ಗೌಡ ಕೆಂಡಾಮಂಡಲವಾಗಿದ್ದು, ಥೂ ಏನು ಅಸಹ್ಯ. ಯಾಕೆ ಹೀಗೆ ಮುಗಿಬೀಳ್ತಿಯಾ..? ವಯಸ್ಸಾಗಿದೆ ಅಂತ ಸುಮ್ನೇ ಬಿಡ್ತಿದ್ದಿನಿ ಅಂತ ರೇಗಾಡಿದರು. ಈ ಜಗಳದ ನಡುವೆ ಅಸಹ್ಯ,ಅಶ್ಲೀಲ ಶಬ್ದಗಳ ಬಳಕೆಯೂ ಆಗಿದ್ದರಿಂದ ಬೀಪ್ ಸೌಂಡ್ ಬಳಸಲಾಯಿತು.