ಮಂಗಳವಾರ, ಏಪ್ರಿಲ್ 29, 2025
HomeBreakingಸ್ಯಾಂಡಲ್ ವುಡ್ ನಟನ ಪುತ್ರಿಗೆ ಬಾಲಿವುಡ್ ಸ್ಟಾರ್ ಮೇಲೆ ಕ್ರಶ್....! ಸಾನ್ವಿ ಸುದೀಪ್...

ಸ್ಯಾಂಡಲ್ ವುಡ್ ನಟನ ಪುತ್ರಿಗೆ ಬಾಲಿವುಡ್ ಸ್ಟಾರ್ ಮೇಲೆ ಕ್ರಶ್….! ಸಾನ್ವಿ ಸುದೀಪ್ ಬಾಯಿಬಿಟ್ರು ಸತ್ಯ…!!

- Advertisement -

ಹದಿವಯಸ್ಸಿನಲ್ಲಿ ಎಲ್ಲರಿಗೂ ಒಬ್ಬರಲ್ಲ ಮೇಲೆ ಒಬ್ಬರ ಮೇಲೆ ಕ್ರಶ್ ಆಗೋದು ಸಹಜ. ಇಲ್ಲೊಬ್ಬ ಸ್ಯಾಂಡಲ್ ವುಡ್ ಸ್ಟಾರ್ ಪ್ರೀತಿಯ ಪುತ್ರಿ ತನ್ನ ಮೊದಲ ಕ್ರಶ್ ಬಗ್ಗೆ ಮುಕ್ತವಾಗಿ ಹೇಳಿಕೊಂಡಿದ್ದು, ಸ್ಯಾಂಡಲ್ ವುಡ್ ಸ್ಟಾರ್ ಪುತ್ರಿಗೆ ಕ್ರಶ್ ಆಗಿದ್ದು ಮತ್ಯಾರ ಮೇಲೂ ಅಲ್ಲ ಬದಲಾಗಿ ಬಾಲಿವುಡ್ ಸ್ಟಾರ್ ಮೇಲೆ ಅನ್ನೋದು ಗಮನಿಸೋ ಸಂಗತಿ.


ಸ್ಯಾಂಡಲ್ ವುಡ್ ನ ಅಭಿನಯ ಚಕ್ರವರ್ತಿ ಸುದೀಪ್ ಪ್ರೀತಿಯ ಪುತ್ರಿ ಸಾನ್ವಿ ಇತ್ತೀಚಿಗೆ ಸೋಷಿಯಲ್ ಮೀಡಿಯಾ ಮೂಲಕ ಸಾಕಷ್ಟು ಸುದ್ದಿಯಾಗ್ತಿದ್ದಾರೆ. ಇತ್ತೀಚಿಗಷ್ಟೇ, ಪಾಪ್ ಸಾಂಗ್ ವೊಂದನ್ನು ಹಾಡಿ ಯೂಟ್ಯೂಬ್ ಗೆ ಅಪ್ಲೋಡ್ ಮಾಡೋ ಮೂಲಕ ಅಭಿಮಾನಿಗಳಿಗೆ ಸಪ್ರೈಸ್ ನೀಡಿದ್ದ ಸಾನ್ವಿ ಈಗ ಪ್ರೇಮಿಗಳ ದಿನಾಚರಣೆಯಂದು ತಮ್ಮ ಮೊದಲ ಕ್ರಶ್ ಯಾರು ಎಂಬುದನ್ನು ರಿವೀಲ್ ಮಾಡಿದ್ದಾರೆ.

ಪ್ರೇಮಿಗಳ ದಿನಾಚರಣೆಯಂದು ಇನ್ ಸ್ಟಾಗ್ರಾಂನಲ್ಲಿ ತಮ್ಮ ಮೊದಲ ಕ್ರಶ್ ಯಾರು ಎಂಬ ಪ್ರಶ್ನೆಗೆ ಬೋಲ್ಡ್ ಆಗಿ ಉತ್ತರ ನೀಡಿದ್ದಾರೆ ಸಾನ್ವಿ ಸುದೀಪ್. ಸಧ್ಯ ಹೈದ್ರಾಬಾದ್ ನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಸಾನ್ವಿ ಮೊನ್ನೆಯಷ್ಟೇ ತನ್ನ ಸಹೋದರನೇ ತನ್ನ ಬದುಕಿನ ವಿಶೇಷ ವ್ಯಕ್ತಿ ಎಂಬ ಸಂಗತಿಯನ್ನು ಪೋಸ್ಟ್ ಮೂಲಕ ರಿವೀಲ್ ಮಾಡಿದ್ದರು.

ಈಗ ಸ್ಯಾಂಡಲ್ ವುಡ್ ಹೀರೋ ಸುದೀಪ್ ಪುತ್ರಿ ತನ್ನ ಮೊದಲ ಕ್ರಶ್ ಯಾರು ಎಂಬುದನ್ನು ಮುಕ್ತವಾಗಿ ಹೇಳಿಕೊಂಡಿದ್ದು, ಇಷ್ಟಕ್ಕೂ ಸಾನ್ವಿ ಯ ಕ್ರಶ್ ಬೇರೆ ಯಾರೂ ಅಲ್ಲ ಬದಲಾಗಿ ಬಾಲಿವುಡ್ ನಲ್ಲಿ ಹೆಸರು ಮಾಡಿದ ಚಾಕ್ಲೆಟ್ ಹೀರೋ ಸಿದ್ಧಾರ್ಥ್ ಮಲ್ಹೋತ್ರಾ. 

ಸ್ಟುಡೆಂಟ್ ಆಫ್ ದಿ ಇಯರ್ ಸಿನಿಮಾ ಮೂಲಕ ನಟನೆಗೆ ಕಾಲಿಟ್ಟ ಚಾಕ್ಲೆಟ್ ಹೀರೋ ಸಿದ್ದಾರ್ಥ್ ಮಲ್ಹೋತ್ರಾ ನನ್ನ ಮೊದಲ ಕ್ರಶ್ ಎಂದಿದ್ದಾರೆ.

 ಕೇವಲ ಸಿದ್ಧಾರ್ಥ್ ಮಲ್ಹೋತ್ರಾ ತಮ್ಮ ಕ್ರಶ್ ಎಂಬ ಸಂಗತಿಯನ್ನು ಬಯಲುಗೊಳಿಸಿದ್ದು ಮಾತ್ರವಲ್ಲದೇ ಪ್ರೇಮಿಗಳ ದಿನಾಚರಣೆಯಂದೇ ತನಗೆ ಯಾರು ಬಾಯ್ ಪ್ರೆಂಡ್ ಇಲ್ಲ ಎಂಬ ಸಂಗತಿಯನ್ನು ಬಹಿರಂಗಗೊಳಿಸಿದ್ದಾರೆ. ಅಲ್ಲದೇ ತಮ್ಮ ಮುದ್ದಿನ ನಾಯಿಗೆ ವಿಶ್ ಮಾಡುವ ಮೂಲಕ ಪ್ರೇಮಿಗಳ ದಿನಾಚರಣೆ ಆಚರಿಸಿದ್ದಾರೆ.

RELATED ARTICLES

Most Popular