ಅಕ್ಟೋಬರ್ ನಲ್ಲೇ ಧರೆಗೆ ಬರ್ತಾರೆ ಚಿರು ಸರ್ಜಾ ಉತ್ತರಾಧಿಕಾರಿ…!

0

 

ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಪರಸ್ಪರ ಪ್ರೀತಿಸಿ ಕೈಹಿಡಿದ ಯುವಜೋಡಿ. ಪ್ರೇಮದಾಂಪತ್ಯದ ಕುಡಿಯೊಂದು ಚಿಗುರುವಾಗಲೇ ಚಿರು ಅಕಾಲಿಕ ಸಾವಿಗೆ ತುತ್ತಾದರೇ ನಟಿ ಮೇಘನಾ ಸರ್ಜಾ ಮಾತ್ರ ಅಕ್ಷರಷಃ ಕುಸಿದು ಹೋಗಿದ್ದರು. ಆದರೆ ಆ ನೋವಿನಲ್ಲೂ ಅವರನ್ನು, ಅವರ ಬದುಕನ್ನು ಅಂದವಾಗಿಸಿದ್ದು ಒಡಲೊಳಗೆ ಆಗ ಮಾತ್ರ ಜೀವತಳೆಯುತ್ತಿದ್ದ ಆ ಪುಟ್ಟ ಜೀವ.

ಎಲ್ಲ ಚಿರಂಜೀವಿ ಸರ್ಜಾ ಅಂದುಕೊಂಡತೆ ಆಗಿದ್ದರೇ ಮೇಘನಾ ಸರ್ಜಾ ಹಾಗೂ ಚಿರು ಮಗು ಈ ಜಗತ್ತಿಗೆ ಬರೋ ಸುದ್ದಿಯನ್ನು ಅದ್ದೂರಿಯಾಗಿ ಅಭಿಮಾನಿಗಳಿಗೆ ನೀಡೋ ಪ್ಲ್ಯಾನ್ ನಲ್ಲಿದ್ದರು ಸ್ಟಾರ್ ಕಪಲ್ಸ್. ಆದರೆ ವಿಧಿಯಾಟದ ಮುಂದೇ ಅದು ನಡೆಯಲಿಲ್ಲ. ಚಿರು ನಿಧನದ ವೇಳೆ ತಾಯ್ತನದ ಸಂಭ್ರಮದಲ್ಲಿದ್ದ ಮೇಘನಾಗೆ ಎದುರಾದ ಆಘಾತದಿಂದ ಅವರು ಮಾನಸಿಕವಾಗಿ ನೊಂದುಕೊಳ್ಳದೇ ಮಗುವಿಗಾಗಿ ಎಲ್ಲವನ್ನು ಎದುರಿಸಿ ನಿಂತಿದ್ದೇ ಒಂದು ಮಾದರಿ ಸಂಗತಿ.

ಮೇಘನಾ ಡೆಲಿವರಿ ನವೆಂಬರ್ ನಲ್ಲಿ ನಿಗದಿಯಾಗಿತ್ತು. ಆದರೆ ಕೆಲವೊಮ್ಮೆ ಮಗುವಿನ ಬೆಳವಣಿಗೆ ಆಧರಿಸಿ ಈ ಸಮಯದಲ್ಲಿ ಬದಲಾವಣೆಯಾಗುತ್ತದೆ. ಇದನ್ನು ವೈದ್ಯರು ತಿಂಗಳು ತುಂಬುತ್ತ ಬಂದಂತೆ ಪರೀಕ್ಷಿಸಿ ಹೇಳುತ್ತಾರೆ. ಇದೀಗ ಮೇಘನಾ ವಿಚಾರದಲ್ಲೂ ಹೀಗೆ ಆಗಿದೆ. ನವೆಂಬರ್ ನಲ್ಲಿ ನಿಗದಿಯಾಗಿದ್ದ ಡೆಲಿವರಿ ಡೇಟ್ ಅಕ್ಟೋಬರ್ ಗೆ ಫ್ರೀಫೋನ್ ಆಗಿದೆ ಎನ್ನಲಾಗುತ್ತಿದೆ. ಮಗುವಿನ ಬೆಳವಣಿಗೆ ಆರೋಗ್ಯಕರವಾಗಿ ಆಗಿದ್ದು, ಹೀಗಾಗಿ ಅಕ್ಟೋಬರ್ ನಲ್ಲೇ ಹೆರಿಗೆಯಾಗೋ ಸಾಧ್ಯತೆ ಇದೆ ಎಂದು ಮೇಘನಾ ವೈದ್ಯರು ಹೇಳಿದ್ದಾರೆ ಎನ್ನಲಾಗಿದೆ.

ಹೀಗಾಗಿ ಕಾಕತಾಳಿಯದಂತೆ ಚಿರಂಜೀವಿ ಹುಟ್ಟಿದ್ದ ತಿಂಗಳಿನಲ್ಲೇ ಅವರ ಮಗುವು ಈ ಜಗತ್ತಿಗೆ ಬರುತ್ತಿದ್ದು,  ಈ ವಿಚಾರ ತಿಳಿದ ಮೇಘನಾ ಹಾಗೂ ಕುಟುಂಬಸ್ಥರು ನೋವಿನಲ್ಲೂ ಚಿಕ್ಕ ಖುಷಿ ಕಾಣುತ್ತಿದ್ದಾರೆ. ಇದೇ ಅಕ್ಟೋಬರ್ 17 ರಂದು ಚಿರಂಜೀವಿ ಸರ್ಜಾ ಹುಟ್ಟುಹಬ್ಬವಿತ್ತು. ಬದುಕಿದ್ದರೇ ಚಿರು 36 ವರ್ಷ ಮುಗಿಸಿ 37 ಕ್ಕೆ ಕಾಲಿಡುತ್ತಿದ್ದರು. ಆದರೆ ಚಿರಂಜೀವಿ ಎಂದು ಹೆಸರಿಟ್ಟುಕೊಂಡ ಚಿರು ಮಾತ್ರ ಸಾವು ಗೆಲ್ಲಲಿಲ್ಲ.

ಪ್ರೀತಿಸಿ ಒಂದಾದ ಜೋಡಿ ಜೀವಗಳು ಬೇರೆ ಆದರೂ ತನ್ನ ಪ್ರೀತಿಯ ಚಿರುವಿನ ಪುನರಾಗಮನದ ವಿಚಾರವೇ ಮೇಘನಾ ಬದುಕಿನ ಜೀವಸೆಲೆಯಾಗಿದೆ ಎಂದರೇ ತಪ್ಪಿಲ್ಲ. ಚಿರು ಪ್ರತಿರೂಪದಂತೆ ಬರೋ ಮಗುವನ್ನು ನೋಡಿ ಮೇಘನಾ ತನ್ನೆಲ್ಲ ದುಃಖವನ್ನು ಮರೆಯುವಂತಾಗಲಿ ಎಂದು ಎಲ್ಲರೂ ಹಾರೈಸಿದ್ದರು. ಈಗ  ಈ ಖುಷಿ ಚಿರು ಜನಿಸಿದ ತಿಂಗಳಿನಲ್ಲೇ ಮೇಘನಾಗೆ ಸಿಗ್ತಿರೋದು ಅಭಿಮಾನಿಗಳ ಪಾಲಿಗೆ ಮತ್ತಷ್ಟು ಸಂತೋಷ ತಂದಿದೆ.

Leave A Reply

Your email address will not be published.