ಬುಧವಾರ, ಜೂನ್ 18, 2025
HomeBreakingದುಬಾರಿ ಸಿನಿಮಾಗೂ ಮುನ್ನ ಬದಲಾಯ್ತು ಧ್ರುವ್ ಸರ್ಜಾ ಲುಕ್…! ಕ್ಯಾನ್ಸರ್ ರೋಗಿಗಳಿಗಾಗಿ ಕೂದಲು ಕೊಟ್ಟ...

ದುಬಾರಿ ಸಿನಿಮಾಗೂ ಮುನ್ನ ಬದಲಾಯ್ತು ಧ್ರುವ್ ಸರ್ಜಾ ಲುಕ್…! ಕ್ಯಾನ್ಸರ್ ರೋಗಿಗಳಿಗಾಗಿ ಕೂದಲು ಕೊಟ್ಟ ಹೀರೋ…!!

- Advertisement -

ಅಣ್ಣ ಚಿರಂಜೀವಿ ಸರ್ಜಾ ಕಳೆದುಕೊಂಡು ಅಕ್ಷರಷಃ ಮಗುವಿನಂತೆ ಅತ್ತಿದ್ದ ಜ್ಯೂನಿಯರ್ ಚಿರು ನೋಡಿ ಸ್ವಲ್ಪ ಸಮಾಧಾನಗೊಂಡಿದ್ದು ಸಧ್ಯ‌ ತಮ್ಮ ಸಿನಿಮಾ ವರ್ಕ್ ಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ದುಬಾರಿ ಸಿನಿಮಾಗಾಗಿ ತಮ್ಮ ಗೆಟಪ್ ಬದಲಾಯಿಸಿಕೊಂಡಿರೋ ಧ್ರುವ ಸರ್ಜಾ ಇಲ್ಲು ಒಂದು‌ ಮಾದರಿ ಕಾರ್ಯ ಮಾಡಿದ್ದಾರೆ.

Alvas1

ಬಿಡುಗಡೆಗೆ ಸಿದ್ಧವಾಗಿರೋ ಧ್ರುವ್ ಸರ್ಜಾ ಅಭಿನಯದ ಪೊಗರು ಸಿನಿಮಾಗಾಗಿ ಗೆಟಪ್ ಬದಲಾಯಿಸಿಕೊಂಡಿದ್ದರು. ಉದ್ದನೆಯ ಕೂದಲು-ಗಡ್ಡದ ಜೊತೆ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದರು‌.

Druvanew

ಇದೀಗ ಪೊಗರು ಸಿನಿಮಾ ಶೂಟಿಂಗ್ ಮುಗಿದಿದ್ದು ಚಿತ್ರ ರಿಲೀಸ್ ಗೆ ರೆಡಿಯಾಗಿದೆ. ಹೀಗಾಗಿ ತಮ್ಮ ಮುಂದಿನ ಚಿತ್ರ ದುಬಾರಿಗಾಗಿ ಧ್ರುವ ಸರ್ಜಾ ಲುಕ್ ಬದಲಾಯಿಸಿಕೊಂಡಿದ್ದಾರೆ.

DhruvaSarja 1594817131

ಲುಕ್ ಬದಲಾಯಿಸಿಕೊಳ್ಳಲು‌ತಮ್ಮ ಉದ್ದನೆಯ ಕೂದಲನ್ನು ಕಟ್ ಮಾಡಿಸಿ ಕೊಂಡಿರೋ ಧ್ರುವ್ ಸರ್ಜಾ ಅದನ್ನು ಕ್ಯಾನ್ಸರ್ ಪೀಡಿತ‌ ಮಕ್ಕಳಿಗಾಗಿ ದಾನ ಮಾಡಿದ್ದಾರೆ.

Rashmika Pogaru

ದುಬಾರಿ ಸುದ್ದಿಗೋಷ್ಟಿಯಲ್ಲೇ ಈ ತಿಂಗಳಾಂತ್ಯಕ್ಕೆ ಲುಕ್ ಬದಲಾಯಿಸಿಕೊಳ್ಳೋದಾಗಿ ಧ್ರುವ ಸರ್ಜಾ ಹೇಳಿಕೊಂಡಿದ್ದರು. ಈಗ ತಮ್ಮ ಕೂದಲನ್ನು ಕ್ಯಾನ್ಸರ್ ಪೀಡಿತ ಮಕ್ಕಳಿಗಾಗಿ ದಾನ‌ಮಾಡುವ ಮೂಲಕ ರಿಯಲ್ ಲೈಫ್ ನಲ್ಲೂ ತಾವೊಬ್ಬ ಸ್ಟಾರ್ ಅಂತ ಸಾಬೀತು ಮಾಡಿದ್ದಾರೆ.

RELATED ARTICLES

Most Popular