ಪೊಗರು…ರಿಲೀಸ್ ಗೂ ಮುನ್ನವೇ ಹಲವು ದಾಖಲೆ ಬರೆದ ಚಿತ್ರ. ಇದೀಗ ಈ ಚಿತ್ರದ ಹಾಡೊಂದಕ್ಕೆ ಕೋಲೆ ಬಸವ ತಲೆಯಾಡಿಸಿ ಅಚ್ಚರಿ ಮೂಡಿಸಿದ್ದು, ಈ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಧ್ರುವ್ ಸರ್ಜಾ ಹಾಗೂ ರಕ್ಷಿತಾ ಮಂದಣ್ಣ ನಟನೆಯ ಪೊಗರು ಸಿನಿಮಾ 2021 ರಲ್ಲಿ ತೆರೆಗೆ ಬರಲಿದ್ದು, ಪೋಸ್ಟರ್, ಟೀಸರ್, ಟ್ರೇಲರ್ ಬಿಡುಗಡೆಯಾಗಿ ಹೊಸ ಹೊಸ ದಾಖಲೆ ನಿರ್ಮಿಸಿದೆ. ಈ ಮಧ್ಯೆ ಪೊಗರು ಚಿತ್ರದ ಖರಾಬು ಹಾಡನ್ನು ಕೋಲೆಬಸವನೊಬ್ಬ ತನ್ನ ಶಹನಾಯಿ ಯಲ್ಲಿ ನುಡಿಸಿದ್ದು,ಅದಕ್ಕೆ ಕೋಲೆಬಸವ ಸರಿಯಾಗಿ ತಲೆ ಅಲ್ಲಾಡಿಸಿದೆ. ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ದೃಶ್ಯವನ್ನು ಸ್ವತಃ ಧ್ರುವ್ ಸರ್ಜಾ ಕೂಡ ಶೇರ್ ಮಾಡಿಕೊಂಡಿದ್ದು, ಪೊಗರು ಜೈಹನುಮಾನ್ ಎಂದು ಕಮೆಂಟ್ ಮಾಡ್ತಿದ್ದಾರೆ. ಪೊಗರು ಚಿತ್ರದ ಈ ಖರಾಬು ಹಾಡು ಈಗಾಗಲೇ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದು, 175 ಮಿಲಿಯನ್ ವೀಕ್ಷಣೆ ಪಡೆದುಕೊಂಡು ಭಾರತದ ಟಾಪ್ 50 ಹಾಡುಗಳ ಪೈಕಿ 8 ನೇ ಸ್ಥಾನ ಪಡೆದುಕೊಂಡಿದೆ.

ಚಂದನಶೆಟ್ಟಿ ರಾಗ ಸಂಯೋಜಿಸಿ ಹಾಡಿರುವ ಈ ಹಾಡು ಸಖತ್ ಹಿಟ್ ಆಗಿದ್ದು, ಈಗ ಕೋಲೆ ಬಸವನೂ ತಲೆದೂಗಿದ್ದು ಧ್ರುವ ಸರ್ಜಾ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ. ಕೋವಿಡ್ ಕಾರಣಕ್ಕೆ ಪೊಗರು ರಿಲೀಸ್ ಪೋಸ್ಟ್ ಪೋನ್ ಆಗಿದ್ದು 2021 ರಲ್ಲಿ ಆಗುವ ಸಾಧ್ಯತೆ ಇದೆ.

ಸಧ್ಯ ಪೊಗರು ಶೂಟಿಂಗ್ ಮುಗಿಸಿ ದುಬಾರಿ ಚಿತ್ರಕ್ಕೆ ಸಹಿ ಮಾಡಿರುವ ಧ್ರುವ್ ಸರ್ಜಾ ದುಬಾರಿಗಾಗಿ ತಮ್ಮ ಗೆಟ್ ಅಪ್ ಬದಲಾಯಿಸಿ ಕೊಂಡಿದ್ದು ಉದ್ದನೆಯ ಕೂದಲುಗಳನ್ನು ಕ್ಯಾನ್ಸರ್ ಪೀಡಿತ ಮಕ್ಕಳಿಗೆ ದಾನ ಮಾಡಿದ್ದಾರೆ.