ಆಕ್ಷ್ಯನ್ ಪ್ರಿನ್ಸ್ ಧ್ರುವ್ ಸರ್ಜಾ ಇಮೇಜ್ ಬದಲಿಸಿದ ಪೊಗರು ಸಿನಿಮಾ ರಿಲೀಸ್ ಆಗುತ್ತಿದ್ದಂತೆ ಧ್ರುವ್ ಹಾಗೂ ನಂದಕಿಶೋರ್ ಕಾಮಿನೇಶನ್ ನಲ್ಲಿ ದುಬಾರಿ ಸಿನಿಮಾ ಘೋಷಣೆಯಾಗಿತ್ತು. ಅಷ್ಟೇ ಅಲ್ಲ ಅದ್ದೂರಿ ಮುಹೂರ್ತ ಕೂಡ ನೆರವೇರಿತ್ತು. ಆದರೆ ಈಗ ಚಿತ್ರತಂಡದಿಂದ ಶಾಕಿಂಗ್ ಸುದ್ದಿ ಹೊರಬಿದ್ದಿದೆ.

ನಂದಕಿಶೋರ್ ನಿರ್ದೇಶನದಲ್ಲಿ ಮೂಡಿ ಬಂದ ಧ್ರುವ್ ಸರ್ಜಾ ಅಭಿನಯದ ಪೊಗರು ಸಿನಿಮಾ ಸಾಕಷ್ಟು ನೀರಿಕ್ಷೆ ಮೂಡಿಸಿತ್ತು. ಈ ಚಿತ್ರದ ಯಶಸ್ಸಿನ ಬಳಿಕ ಧ್ರುವ್ ಸರ್ಜಾ ಹಾಗೂ ನಂದಕಿಶೋರ್ ಮತ್ತೆ ಒಂದಾಗಿ ದುಬಾರಿ ಚಿತ್ರ ತೆರೆಗೆ ತರಲು ಸಿದ್ಧವಾಗಿದ್ದರು.

ಆದರೆ ಅಚ್ಚರಿಯ ಬೆಳವಣಿಗೆಯೊಂದರಲ್ಲಿ ನಿರ್ದೇಶಕ ನಂದಕಿಶೋರ್ ರನ್ನು ದುಬಾರಿ ನಿರ್ದೇಶನದಿಂದ ದೂರವಿಡಲು ನಿರ್ಮಾಪಕ ಉದಯ್ ಮೆಹ್ತಾ ನಿರ್ಧರಿಸಿದ್ದಾರಂತೆ. ಅಷ್ಟೇ ಅಲ್ಲ ಅವರ ಸ್ಥಾನಕ್ಕೆ ತಮಿಳಿನಿ ನಿರ್ದೇಶಕರೊಬ್ಬರನ್ನು ತರಲಾಗುತ್ತಿದೆ ಎನ್ನಲಾಗಿದೆ. ತಮಿಳು ನಿರ್ದೇಶಕರಿಂದ ಹೊಸತಾಗಿ ಕತೆ ಕೂಡ ಬರೆಸಿದ್ದು, ಚಿತ್ರದ ಸಂಪೂರ್ಣ ಸ್ವರೂಪವೇ ಬದಲಾಗಲಿದೆ ಎನ್ನಲಾಗಿದೆ.

ಪೊಗರು ಸಿನಿಮಾ ಅದ್ದೂರಿ ಆರಂಭವನ್ನು ಪಡೆದುಕೊಂಡರೂ, ಬ್ರಾಹ್ಮಣ ಅವಹೇಳನದ ಕಾರಣಕ್ಕೆ ವಿವಾದಕ್ಕೆ ಸಿಲುಕಿತ್ತು. ಅಲ್ಲದೇ ಚಿತ್ರದ ವಿರುದ್ಧ ದೂರು ಕೂಡ ದಾಖಲಾಗಿತ್ತು. ಬಳಿಕ ನಿರ್ದೇಶಕ ಹಾಗೂ ನಟ ಕ್ಷಮೆಯಾಚಿಸಿದ ಬಳಿಕ ವಿವಾದ ತಣ್ಣಗಾಗಿತ್ತು.

ಈ ಎಲ್ಲ ಕಾರಣಕ್ಕೆ ನಂದಕಿಶೋರ್ ರನ್ನು ನಿರ್ದೇಶನದಿಂದ ಹೊರಗಿಡಲಾಗಿದೆ ಎನ್ನಲಾಗಿದ್ದು, ಇದರಿಂದ ಚಿತ್ರದ ಸಂಪೂರ್ಣ ಸ್ವರೂಪವೇ ಬದಲಾಗುವ ಸಾಧ್ಯತೆ ಇದೆ. ಆದರೆ ಈ ಬದಲಾವಣೆಯ ಬಗ್ಗೆ ಚಿತ್ರತಂಡ ಇದುವರೆಗೂ ಯಾವುದೇ ಅಧಿಕೃತ ಮಾಹಿತಿ ಪ್ರಕಟಿಸಿಲ್ಲ.