ಕರುನಾಡ ಚಕ್ರವರ್ತಿ,ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸಿನಿಮಾ ಇಂಡಸ್ಟ್ರಿ ಗೆ ಕಾಲಿಟ್ಟು ೩೫ ವರ್ಷಗಳು ಸಂದ ಹಿನ್ನೆಲೆಯಲ್ಲಿ ಅಭಿಮಾನಿಗಳು ಕಾಮನ್ ಡಿಪಿ ಬಿಡುಗಡೆಗೊಳಿಸಿದ್ದಾರೆ.

The king of all timea ಡಾ.ಶಿವಣ್ಣ ಎಂಬ ಹೆಸರಿನಲ್ಲಿ ಡಿಪಿ ಬಿಡುಗಡೆ ಮಾಡಲಾಗಿದ್ದು ಶಿವಣ್ಣ, ಅವರ ಅಪ್ತ ಕೆ.ಪಿ.ಶ್ರೀಕಾಂತ್‌ಸೇರಿದಂತೆ ಹಲವರು ಈ ಕಾಮನ್ ಡಿಪಿ ಹಂಚಿಕೊಂಡಿದ್ದಾರೆ.

35 ವರ್ಷಗಳಲ್ಲಿ ೧೨೫ ಸಿನಿಮಾದಲ್ಲಿ ನಟಿಸಿದ ಶಿವಣ್ಣ ಹ್ಯಾಟ್ರಿಕ್ ಹೀರೋ ಎನ್ನಿಸಿಕೊಂಡಿದ್ದು ಇನ್ನೂ ಕೂಡ ಹಲವು ಚಿತ್ರಗಳು ರಿಲೀಸ್ ಗೆ ರೆಡಿ ಇದೆ.

ಶಿವಣ್ಣ ಸ್ಯಾಂಡಲ್ ವುಡ್ ನಲ್ಲಿ ೩೫ ವರ್ಷ ಪೊರೈಸಿರೋದನ್ನು ಅದ್ದೂರಿಯಾಗಿ ಸೆಲಿಬ್ರೇಟ್ ಮಾಡಲು ಸಿದ್ಧವಾಗಿರೋ ಅಭಿಮಾನಿಗಳು ಎಸ್.ಪಿ.ಎಲ್‌ಕ್ರಿಕೇಟ್ ಹಬ್ಬ ಹಮ್ಮಿಕೊಂಡಿದ್ದು, ಫೆ.೨೦ ಹಾಗೂ ೨೧ ರಂದು ಶಿವರಾಜ್ ಕುಮಾರ್ ಪ್ರಿಮಿಯರ್ ಲೀಗ್ ವಿಜಯನಗರದ ಬಿಜಿಎಸ್ ಗ್ರೌಂಡ್ ನಲ್ಲಿ ನಡೆಯಲಿದೆ.

ಎರಡು ದಿನಗಳ ಟೂರ್ನಮೆಂಟ್ ಗೆ ಶಿವಣ್ಣ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಶಿವಣ್ಣ ಅಭಿಮಾನಿಗಳ ಒಟ್ಟು ೧೨ ತಂಡಗಳು ಟೂರ್ನಮೆಂಟ್ ನಲ್ಲಿ ಪಾಲ್ಗೊಳ್ಳಲಿವೆ.

೧೯೬೮ ರಲ್ಲಿ ಆನಂದ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಪ್ರವೇಶಿಸಿದ ಶಿವಣ್ಣ ಸಿನಿ ಜರ್ನಿಯಲ್ಲಿ ಸೋಲು-ಗೆಲುವು ಎರಡನ್ನೂ ಕಂಡಿದ್ದು ಇತ್ತೀಚಿಗೆ ಶಿವಣ್ಣನಿಗೆ ಗೌರವ ಡಾಕ್ಟರೇಟ್ ಕೂಡ ಸಂದಿದೆ.

ಕೆಲದಿನಗಳ ಹಿಂದೆಯಷ್ಟೇ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸ್ಯಾಂಡಲ್ ವುಡ್ ನಲ್ಲಿ ಬೆಳ್ಳಿ ಹಬ್ಬ ಪೊರೈಸಿದ ಸಂಭ್ರಮವನ್ನು ಅಭಿಮಾನಿಗಳು ಆಚರಿಸಿದ್ದು ಈಗ ಶಿವಣ್ಣ ಅಭಿಮಾನಿಗಳ ಸರದಿ.ಶಿವಣ್ಣ ಕಾಮನ್ ಡಿಪಿ ಎಲ್ಲೆಡೆ ರಾರಾಜಿಸುತ್ತಿದ್ದು ಅಭಿಮಾನಿಗಳು ಸಖತ್ ಖುಷಿಯಿಂದ ಡಿಪಿ ಹಂಚಿಕೊಳ್ಳುತ್ತಿದ್ದಾರೆ.