ಭಾನುವಾರ, ಏಪ್ರಿಲ್ 27, 2025
HomeBreakingKabza Movie: ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾಗೆ ಸಜ್ಜಾದ ಸ್ಯಾಂಡಲ್ ವುಡ್….! ಕಬ್ಜಾ ಜೊತೆ ಸಿದ್ಧವಾಗುತ್ತಿದ್ದಾರೆ...

Kabza Movie: ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾಗೆ ಸಜ್ಜಾದ ಸ್ಯಾಂಡಲ್ ವುಡ್….! ಕಬ್ಜಾ ಜೊತೆ ಸಿದ್ಧವಾಗುತ್ತಿದ್ದಾರೆ ಚಂದ್ರು…!!

- Advertisement -

ಲಾಕ್ ಡೌನ್ ಯಾರ ಯಾರೋ ಹೇಗೆಗೋ ಟೈಂ ಪಾಸ್ ಮಾಡಿದ್ರೇ ನಿರ್ದೇಶಕ ಚಂದ್ರು ಕಬ್ಜ ಕಥೆ ಹೆಣೆಯುತ್ತ  ಪ್ಯಾನ್ ಇಂಡಿಯಾ ಸಿನಿಮಾಗೆ ಸಿದ್ಧವಾಗಿದ್ದರು. ಅದರ ಫಲವಾಗಿಯೇ ಇಬ್ಬರೂ ಸ್ಟಾರ್ ಗಳಾದ ಉಪೇಂದ್ರ ಹಾಗೂ ಸುದೀಪ್ ಜೊತೆ ಕಜ್ಬ ವಿಶ್ವ ಮಟ್ಟದಲ್ಲಿ ಸದ್ದು ಮಾಡಲು ಸಿದ್ಧವಾಗುತ್ತಿದೆ.

ಕನ್ನಡ ಸೇರಿದಂತೆ ಒಟ್ಟು 7 ಭಾಷೆಗಳಲ್ಲಿ ಈ ಸಿನಿಮಾ ರಿಲೀಸ್ ಆಗಲಿದ್ದು, ಈಗಾಗಲೇ ಸಾಕಷ್ಟು ಕುತೂಹಲಮೂಡಿಸಿದೆ. ಕಬ್ಜ ಪೋಸ್ಟರ್ ಕೂಡ ಸಾಕಷ್ಟು ಕುತೂಹಲ ಮೂಡಿಸಿದ್ದು, ಭಾರ್ಗವ್ ಭಕ್ಷಿ ಎಂಬ ವಿಶೇಷ ಪಾತ್ರದಲ್ಲಿ ಅಭಿನಯ ಚಕ್ರವರ್ತಿ ಸುದೀಪ್ ಕಾಣಿಸಿಕೊಳ್ಳಲಿದ್ದಾರೆ.

ಇಂತಹದೊಂದು ಪ್ಯಾನ್ ಇಂಡಿಯಾ ಸಿದ್ಧಪಡಿಸಲು ತಮಗೆ ಕೆಜಿಎಫ್ ಸ್ಪೂರ್ತಿ ಎಂದಿರುವ ನಿರ್ದೇಶಕ ಚಂದ್ರು, ನಾವು ನಮಗೆ ಚೌಕಟ್ಟು ಹಾಕಿಕೊಂಡು ಚಿತ್ರ ಸಿದ್ಧಪಡಿಸುತ್ತಿದ್ದೇವು. ಆದರೆ ಕೆಜಿಎಫ್ ಬಳಿಕ ಪ್ರಶಾಂತ್ ನೀಲ್ ನಾವು ರಾಕೆಟ್ ಉಡಾಯಿಸಬಹುದೆಂಬುದನ್ನು ತೋರಿಸಿಕೊಟ್ಟರು.

ಪ್ರಶಾಂತ್ ನೀಲ್ ಕೆಲಸವನ್ನು ಸ್ಪೂರ್ತಿಯಾಗಿ ತೆಗೆದುಕೊಂಡು ನಾವು ಪ್ಯಾನ್ ಇಂಡಿಯಾ ಸಿನಿಮಾಗೆ ಸಿದ್ಧವಾಗಿದ್ದೇವೆ. ಉಪೇಂದ್ರ ಹಾಗೂ ಸುದೀಪ್ ಇಬ್ಬರೂ ಚಿತ್ರಕತೆ ಹಾಗೂ ಮೇಕಿಂಗ್ ಇಷ್ಟಪಟ್ಟಿದ್ದಾರೆ ಎಂದು ಚಂದ್ರು ಮಾಹಿತಿ ನೀಡಿದ್ದಾರೆ.

ಬೆಂಗಳೂರು-ಹೈದ್ರಾಬಾದ್ ಸೇರಿದಂತೆ ಹಲವೆಡೆ ಅದ್ದೂರಿ ಸೆಟ್ ಹಾಕಿ ಕಬ್ಜ ಶೂಟಿಂಗ್ ಮಾಡಲಾಗಿದ್ದು, ಲಾಕ್ ಡೌನ್ ನಲ್ಲಿಯೇ ಚಂದ್ರು ಕಬ್ಜ-2 ಸಿಕ್ವೆನ್ಸ್ ಕತೆಯನ್ನು ಸಿದ್ಧಪಡಿಸಿದ್ದಾರಂತೆ.

ಈಗಾಗಲೇ ಕಬ್ಜ ಶೇಕಡಾ 70 ರಷ್ಟು ಶೂಟಿಂಗ್ ಮುಗಿಸಿದ್ದು, ಕಬ್ಜ ತೆರೆಗೆ ಬಂದ ಮೇಲಷ್ಟೇ ಎರಡನೇ ಭಾಗದ ಶೂಟಿಂಗ್ ಆರಂಭಿಸಲು ಚಂದ್ರು ನಿರ್ಧರಿಸಿದ್ದಾರೆ.  

RELATED ARTICLES

Most Popular