ಸೋಮವಾರ, ಏಪ್ರಿಲ್ 28, 2025
HomeBreakingHamsalekha:ಕನ್ನಡದ ಚಿತ್ರಸಾಹಿತಿ, ನಾದಬ್ರಹ್ಮ ಡಾ.ಹಂಸಲೇಖರಿಗೆ ಹುಟ್ಟುಹಬ್ಬದ ಸಂಭ್ರಮ….!

Hamsalekha:ಕನ್ನಡದ ಚಿತ್ರಸಾಹಿತಿ, ನಾದಬ್ರಹ್ಮ ಡಾ.ಹಂಸಲೇಖರಿಗೆ ಹುಟ್ಟುಹಬ್ಬದ ಸಂಭ್ರಮ….!

- Advertisement -

ಕನ್ನಡ ಸಿನಿಸಾಹಿತ್ಯಕ್ಕೆ, ಸಂಗೀತಲೋಕಕ್ಕೆ ತನ್ನದೇ ಆದ ವಿಶಿಷ್ಟ ಪ್ರತಿಭೆ ಧಾರೆ ಎರೆದು ಹಾಡುಗಳ ಮೂಲಕ ಕೋಟ್ಯಾಂತರ ಮನಸ್ಸುಗಳಿಗೆ ಮುದ ನೀಡಿದ ನಾದಬ್ರಹ್ಮ ಹಂಸಲೇಖ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಸುಖ,ದುಃಖ,ನೋವು,ನಲಿವು ಎಲ್ಲದಕ್ಕೂ ಒಂದೊಂದು ಹಾಡು ಸೃಷ್ಟಿಸಿದ ಮಾಂತ್ರಿಕನಿಗೆ ಕರುನಾಡು ಸಂಭ್ರಮದಿಂದ ಶುಭಹಾರೈಸಿದೆ.

ರಾಜ್ಯರಾಜಧಾನಿ ಬೆಂಗಳೂರಿನ ಅಕ್ಕಿಪೇಟೆಯಲ್ಲಿ  ಜನಿಸಿದ ಡಾ.ಹಂಸಲೇಖ ಅವರು, 1973 ರಲ್ಲಿ ತ್ರಿವೇಣಿ ಚಿತ್ರದ ನೀನಾ ಭಗವಂತ ಹಾಡಿನ ಗೀತೆರಚನೆಯ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮ ಪಯಣ ಆರಂಭಿಸಿದರು.

ಅಲ್ಲಿಂದಾಚೆಗೆ ಕನ್ನಡ ಸಂಗೀತ ಲೋಕದ ಮಾಂತ್ರಿಕರಾಗಿ, ಗೀತರಚನೆಕಾರರಾಗಿ, ಹಲವು ಹಾಡುಗಾರರಿಗೆ ಬ್ರೇಕ್ ನೀಡಿದ ಭಗವಂತನಾಗಿ ಮೆರೆಯುತ್ತಿದ್ದಾರೆ. ಕನ್ನಡ ಮಾತ್ರವಲ್ಲದೇ, ತೆಲುಗು,ತಮಿಳು,ಮಲೆಯಾಳಂ ಭಾಷಾ ಚಿತ್ರಗಳಿಗೂ ಸಂಗೀತ ನೀಡಿದ ಹೆಗ್ಗಳಿಕೆ ಹಂಸಲೇಖ ಅವರದ್ದು.

ಚಿತ್ರಸಂಗೀತ ಮಾತ್ರವಲ್ಲದೇ  ರಂಗಭೂಮಿ,ವಿಶ್ವಸಂಗೀತದಲ್ಲೂ ಪರಿಣಿತಿ ಹೊಂದಿರುವ ಹಂಸಲೇಖ, ಸಂಗೀತ ಶಾಲೆಯನ್ನು ನಡೆಸುತ್ತಿದ್ದಾರೆ. ಅಷ್ಟೇ ಅಲ್ಲ ಕಿಬೋರ್ಡ್,ಗಿಟಾರ್,ಪಿಯಾನೋ,ಹಾರ್ಮೋನಿಯಂ  ಹಾಗೂ ತಾಳವಾದ್ಯ ನುಡಿಸುತ್ತಾರೆ.

ಹಾಲುಂಡ ತವರು ಚಿತ್ರಕ್ಕಾಗಿ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ, ಅತ್ಯುತ್ತಮ ಸಾಹಿತ್ಯ ಪ್ರಶಸ್ತಿ ಶ್ರೀಮಂಜುನಾಥ ಸಿನಿಮಾಕ್ಕಾಗಿ, ರಾಮಾಚಾರಿ, ಓಂ ಹಾಗೂ ನೆನಪಿರಲಿ ಚಿತ್ರಕ್ಕಾಗಿ ಫಿಲ್ಮಫೇರ್ ಪ್ರಶಸ್ತಿ ಸೇರಿದಂತೆ ಹಲವು ಅತ್ಯುನ್ನತ ಗೌರವಗಳು ಹಂಸಲೇಖ ಅವರ ಮುಡಿಗೇರಿದೆ.

ರವಿಚಂದ್ರನ್ ಹಾಗೂ ಹಂಸಲೇಖ ಸೇರಿದಂತೆ ಕನ್ನಡದಲ್ಲಿ ಹಲವು ನಟರ ಜೊತೆ ಹಿಟ್ ಚಿತ್ರಗಳನ್ನು ನೀಡಿದ ಖ್ಯಾತಿ ಹಂಸಲೇಖ ಅವರದ್ದು, ಹಲವು ಕಿರುತೆರೆಯ ರಿಯಾಲಿಟಿ ಶೋಗಳಲ್ಲಿ ನಿರ್ಣಾಯಕರಾಗಿ ಹೆಸರು ಗಳಿಸಿರುವ ಹಂಸಲೇಖ 69 ವರ್ಷಕ್ಕೆ ಪದಾರ್ಪಣೆ ಮಾಡಿದ್ದು, ಇನ್ನಷ್ಟು ಹಾಡುಗಳ ಮೂಲಕ ಹಂಸಲೇಖ ಅವರು ಕನ್ನಡಿಗರ ಮನಗೆಲ್ಲುವಂತಾಗಲಿ ಎಂಬುದು ನಮ್ಮ ಹಾರೈಕೆ.

RELATED ARTICLES

Most Popular