ಮಂಗಳವಾರ, ಏಪ್ರಿಲ್ 29, 2025
HomeBreakingNikhil kumaraswamy:ಮತ್ತೊಂದು ಸಿಹಿಸುದ್ದಿ ಕೊಟ್ಟ ನಟ ನಿಖಿಲ್ ಕುಮಾರಸ್ವಾಮಿ…!ರೈಡರ್ ಬಿಡುಗಡೆ ಮುನ್ನವೇ ಸೆಟ್ಟೇರಿತು ಮತ್ತೊಂದು ಸಿನಿಮಾ….!!

Nikhil kumaraswamy:ಮತ್ತೊಂದು ಸಿಹಿಸುದ್ದಿ ಕೊಟ್ಟ ನಟ ನಿಖಿಲ್ ಕುಮಾರಸ್ವಾಮಿ…!ರೈಡರ್ ಬಿಡುಗಡೆ ಮುನ್ನವೇ ಸೆಟ್ಟೇರಿತು ಮತ್ತೊಂದು ಸಿನಿಮಾ….!!

- Advertisement -

ಸ್ಯಾಂಡಲ್ ವುಡ್ ಯುವ ನಟ ನಿಖಿಲ್ ಕುಮಾರಸ್ವಾಮಿ ಸದ್ಯ ತಂದೆಯಾಗೋ ಸಂಭ್ರಮದಲ್ಲಿದ್ದಾರೆ. ಕಳೆದ ವರ್ಷವಷ್ಟೇ ರೇವತಿಯವರೊಂದಿಗೆ ಮದುವೆಯಾಗಿದ್ದ ನಿಖಿಲ್ ಈ ವರ್ಷಾಂತ್ಯದಲ್ಲಿ ಮನೆಗೆ ಚೊಚ್ಚಲ ಮಗುವನ್ನು ಸ್ವಾಗತಿಸಲಿದ್ದಾರೆ. ಇದರೊಂದಿಗೆ ಅಭಿಮಾನಿಗಳಿಗೆ ನಿಖಿಲ್ ಮತ್ತೊಂದು ಸಿಹಿಸುದ್ದಿ  ನೀಡಿದ್ದಾರೆ.

ಲಾಕ್ ಡೌನ್ ಗೂ ಮುನ್ನವೇ ರೈಡರ್ ಶೂಟಿಂಗ್ ಪೂರ್ತಿಗೊಳಿಸಿರುವ ನಿಖಿಲ್ ಕುಮಾರಸ್ವಾಮಿ ರೈಡರ್ ತೆರೆಗೆ ಬರುವ ಮುನ್ನವೇ ಹೊಸ ಚಿತ್ರಕ್ಕೆ ಜೈ ಎಂದಿದ್ದು, ಚಿತ್ರ ಸೆಟ್ಟೇರುತ್ತಿರುವ ಮಾಹಿತಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

https://www.facebook.com/500260970080102/posts/3772525876186912/

ಮಂಜು ಅಥರ್ವ್ ಚೊಚ್ಚಲ ನಿರ್ದೇಶನದಲ್ಲಿ ನಿಖಿಲ್ ಕುಮಾರಸ್ವಾಮಿ ನಾಯಕರಾಗಿ ಮಿಂಚಲಿದ್ದು, ಕೆವಿಎನ್ ಸಂಸ್ಥೆ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದೆ. ಮಂಜು ಅಥರ್ವ್ ಈಗಾಗಲೇ ಮಂಜುಮಾಂಡವ್ಯ, ನರ್ತನ್ ಜೊತೆ ಕೆಲಸ ಮಾಡಿದ ಅನುಭವ ಹೊಂದಿದ್ದು, ಈ ಸಿನಿಮಾ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಭಡ್ತಿ ಪಡೆದಿದ್ದಾರೆ.

ಇದೊಂದು ಸಂಪೂರ್ಣ ಆಕ್ಷ್ಯನ್ ಚಿತ್ರ ಎನ್ನಲಾಗಿದ್ದು, ಚಿತ್ರಕ್ಕೆ ಇನ್ನೂ ಟೈಟಲ್ ಫಿಕ್ಸ್ ಆಗಿಲ್ಲ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತವಿದ್ದು, ಚಿತ್ರತಂಡ ಫ್ರಿ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ.

ಲಾಕ್ ಡೌನ್ ಸಂಪೂರ್ಣ ತೆರವಾದ ಬಳಿಕ ಅಗಸ್ಟ್ ನಲ್ಲಿ ಚಿತ್ರತಂಡ ಶೂಟಿಂಗ್ ಆರಂಭಿಸಲಿದೆ.

RELATED ARTICLES

Most Popular