ಮಂಗಳವಾರ, ಜೂನ್ 17, 2025
HomeBreakingಪುರುಷೋತ್ತಮನಾದ ಜಿಮ್ ರವಿ…! ಟ್ಯಾಲೆಂಟೆಡ್ ಬಾಡಿಬಿಲ್ಡರ್ ಇನ್ಮುಂದೆ ಸ್ಯಾಂಡಲ್ ವುಡ್ ಹೀರೋ…!

ಪುರುಷೋತ್ತಮನಾದ ಜಿಮ್ ರವಿ…! ಟ್ಯಾಲೆಂಟೆಡ್ ಬಾಡಿಬಿಲ್ಡರ್ ಇನ್ಮುಂದೆ ಸ್ಯಾಂಡಲ್ ವುಡ್ ಹೀರೋ…!

- Advertisement -

ಅಂತಾರಾಷ್ಟ್ರೀಯಬಾಡಿ ಬಿಲ್ಡರ್ ಆಗಿ ಹೆಸರು ಗಳಿಸಿ ಸ್ಯಾಂಡಲ್ ವುಡ್ ನಲ್ಲಿ ಹಲವು ವರ್ಷಗಳಿಂದ ಪೋಷಕ ಪಾತ್ರದಲ್ಲಿ ಮಿಂಚಿದ್ದ ಜಿಮ್ ರವಿ ಇನ್ಮುಂದೆ ಹೀರೋ ಜಿಮ್ ರವಿ. ಹೌದು ಪುರುಷೋತ್ತಮ ಚಿತ್ರದ ಮೂಲಕ ಬಾಡಿ ಬಿಲ್ಡರ್ ರವಿ ನಾಯಕನಟನಾಗಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ಅಮರನಾಥ್ ಎಸ್.ವಿ. ನಿರ್ದೇಶನದಲ್ಲಿ ಸ್ವತಃ ಜಿಮ್ ರವಿ ಈ ಚಿತ್ರ ನಿರ್ಮಿಸುತ್ತಿದ್ದು, ಚಿತ್ರಕ್ಕೆ ಪುರುಷೋತ್ತಮ ಎಂದು ಹೆಸರಿಡಲಾಗಿದೆ. ಕತೆ,ಚಿತ್ರಕಥೆ, ಸಂಭಾಷಣೆಯನ್ನು ಅಮರನಾಥ್ ಅವರೇ ಬರೆದಿದ್ದು, ಫೆ.14 ಪ್ರೇಮಿಗಳ ದಿನದಂದು ಚಿತ್ರದ ಮುಹೂರ್ತ ನೆರವೇರಲಿದೆ.

ಇದುವರೆಗೂ ಸ್ಯಾಂಡಲ್ ವುಡ್ ನ 130 ಕ್ಕೂ ಹೆಚ್ಚು ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದ ಜಿಮ್ ರವಿ ಸ್ವತಃ ಹೀರೋ ಆಗುವ ಕನಸಿನಲ್ಲಿ ಈ ಚಿತ್ರ ನಿರ್ಮಿಸುತ್ತಿದ್ದಾರೆ. ಪುರುಷೋತ್ತಮ ಚಿತ್ರದ ಚಿತ್ರೀಕರಣ ಮೈಸೂರಿನ ಸುತ್ತಮುತ್ತ ನಡೆಯಲಿದ್ದು, ಶ್ರೀಧರ್ ವಿ.ಸಂಭ್ರಮ್ ಚಿತ್ರಕ್ಕೆ ಸಂಗೀತ ನೀಡಲಿದ್ದಾರೆ.

ಕುಮಾರ್ ಎಂ ಛಾಯಾಗ್ರಹಣವಿರುವ ಸಿನಿಮಾದ ಪಾತ್ರವರ್ಗವನ್ನು ಫೆ.14 ರ ಮುಹೂರ್ತದಂದು ಚಿತ್ರತಂಡ ರಿವೀಲ್ ಮಾಡಲಿದೆ. ದೇಹಧಾರ್ಡ್ಯ ವಿಭಾಗದಲ್ಲಿ ಸತತ 15 ಸಲ ಭಾರತವನ್ನು ಪ್ರತಿನಿಧಿಸಿರುವ ಜಿಮ್ ರವಿ, ನಾಲ್ಕು ಬಾರಿ ಭಾರತ ತಂಡದ ನಾಯಕರಾಗಿ ಕಾರ್ಯ ನಿರ್ವಹಿಸಿದ್ದಾರೆ.

ರಾಜ್ಯ ಸರ್ಕಾರದಿಂದ ಏಕಲವ್ಯ ಪ್ರಶಸ್ತಿ ಪಡೆದಿರುವ ಜಿಮ್ ರವಿ, ಮಿಸ್ಟರ್ ಇಂಡಿಯಾ, ಭಾರತಶ್ರೀ,ಕರ್ನಾಟಕಶ್ರೀ,ಕರ್ನಾಟಕ ಶ್ರೇಷ್ಠ ಸೇರಿದಂತೆ ಹಲವು ಗೌರವಕ್ಕೂ ಪಾತ್ರರಾಗಿದ್ದಾರೆ.

RELATED ARTICLES

Most Popular