ಭಾನುವಾರ, ಏಪ್ರಿಲ್ 27, 2025
HomeBreakingಲಕ್ಷ್ಮೀಬಾರಮ್ಮ ಕವಿತಾ ಮನೆತುಂಬಿಸಿಕೊಂಡ ನಟ ಚಂದನ್….! ಮಾಸ್ಕ್ ಜೊತೆಯಲ್ಲೇ ಸರಳ ವಿವಾಹ…!!

ಲಕ್ಷ್ಮೀಬಾರಮ್ಮ ಕವಿತಾ ಮನೆತುಂಬಿಸಿಕೊಂಡ ನಟ ಚಂದನ್….! ಮಾಸ್ಕ್ ಜೊತೆಯಲ್ಲೇ ಸರಳ ವಿವಾಹ…!!

- Advertisement -

ಪರಸ್ಪರ ಪ್ರೀತಿಸಿದ ವರ್ಷಗಳ ಬಳಿಕ ಪ್ರೇಮಪಕ್ಷಿಗಳು ಅಧಿಕೃತವಾಗಿ ದಾಂಪತ್ಯಕ್ಕೆ ಕಾಲಿಟ್ಟಿದ್ದು, ಲಕ್ಷ್ಮೀಬಾರಮ್ಮ ಖ್ಯಾತಿಯ ಚಂದನ ಹಾಗೂ ಕವಿತಾ ಸಪ್ತಪದಿ ತುಳಿದಿದ್ದಾರೆ. ಕೊರೋನಾ ನಿಯಮಗಳ ಅಡಿಯಲ್ಲಿ ಚಂದನ ನಿವಾಸದಲ್ಲೇ ಸರಳ ವಿವಾಹ ನಡೆದಿದೆ.

https://kannada.newsnext.live/bangalore-corona-rulesbreak-fine-3-26cr-police/

ಬೆಂಗಳೂರಿನ ಸಹಕಾರ ನಗರದಲ್ಲಿರುವ ಚಂದನ ನಿವಾಸದಲ್ಲಿ ಲಕ್ಷ್ಮೀಬಾರಮ್ಮ ಖ್ಯಾತಿಯ ಚಂದನ ಹಾಗೂ ಕವಿತಾ ಗೌಡ ಹೊಸಬದುಕಿಗೆ ಕಾಲಿಟ್ಟಿದ್ದಾರೆ. ಕೊವೀಡ್ ಸರ್ಕಾರಿ ನಿಯಮಾವಳಿಗಳ ಪ್ರಕಾರ ಕೇವಲ 40 ಜನರು ಪಾತ್ರ ಮದುವೆಯಲ್ಲಿ ಭಾಗವಹಿಸಿದ್ದರು.

ಮಾಸ್ಕ್ ಧರಿಸಿದ್ದ ಚಂದನಾ ಕವಿತಾ ಕುತ್ತಿಗೆ ಮಾಂಗಲ್ಯ ತೊಡಿಸಿ ಹೊಸಬದುಕಿಗೆ ಕಾಲಿರಿಸಿದರು. ಈ ಪೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಚಂದನ್, ಮದುವೆ ಮನೆ –ಮನೆ ಮದುವೆ ಸರಳವಾದರೂ ಸಂಭ್ರಮ ಎಂಬರ್ಥದಲ್ಲಿ ಪೋಸ್ಟ್ ಹಾಕಿದ್ದಾರೆ.

https://www.instagram.com/p/CO2iRfDgl3x/?igshid=m16posukigy1

ಕೆಲವೇ ಕೆಲವು ಕಿರುತೆರೆಯ ನಟ-ನಟಿಯರು ಮದುವೆಯಲ್ಲಿ ಪಾಲ್ಗೊಂಡಿದ್ದರು. ಕಳೆದ ಏಪ್ರಿಲ್ 1 ರಂದು  ಕವಿತಾ ಹಾಗೂ ಚಂದನ್ ಎಂಗೇಜಮೆಂಟ್ ಮಾಡಿಕೊಂಡು ಮದುವೆಯ ವಿಚಾರವನ್ನು ಬಹಿರಂಗಪಡಿಸಿದ್ದರು.

https://kannada.newsnext.live/mysore-dc-rohini-sindoori-reactiin-about-oxigen-tragidy/

ಮೇ 14 ರಂದು ನಗರದ ಪ್ರತಿಷ್ಠಿತ ಹೊಟೇಲ್ ನಲ್ಲಿ ಅದ್ದೂರಿಯಾಗಿ ಮದುವೆಯಾಗುವುದಾಗಿ ಚಂದನ್ ಹಾಗೂ ಕವಿತಾ ಘೋಷಿಸಿದ್ದರು. ಆದರೆ ಕೊರೋನಾ ಲಾಕ್ ಡೌನ್ ಕಾರಣಕ್ಕೆ ಚಂದನ್ ಹಾಗೂ ಕವಿತಾ ಆಸೆ ನೆರವೇರಿಲ್ಲ.

https://kannada.newsnext.live/actress-nidhi-subbayya-who-has-revealed-the-divorce-facts-which-ended-10-months/

ಆದರೆ ಮೊದಲೆ ನಿರ್ಧರಿಸಿದ ಮುಹೂರ್ತಕ್ಕೆ ಮದುವೆಯಾಗೋ ಉದ್ದೇಶದಿಂದ ಚಂದನ್ ಹಾಗೂ ಕವಿತಾ ಸರಳವಾಗಿಯೇ ಹೊಸಬದುಕಿಗೆ ಕಾಲಿರಿಸಲು ನಿರ್ಧರಿಸಿ ಮದುವೆಯಾಗಿದ್ದಾರೆ. ಈ ಜೋಡಿಯ ಮದುವೆಗೆ ಸ್ಯಾಂಡಲ್ ವುಡ್ ಸೇರಿದಂತೆ ಕಿರುತೆರೆಯ ನಟ-ನಟಿಯರು,ಅಭಿಮಾನಿಗಳು ಶುಭಹಾರೈಸಿದ್ದಾರೆ.

RELATED ARTICLES

Most Popular