ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡಿದ್ದ ಕಿರುತೆರೆಯ ಲವ್ ಸ್ಟೋರಿ ಕೊನೆಗೂ ಅಧಿಕೃತವಾಗಿದೆ. ಹಲವಾರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರೂ ಅಭಿಮಾನಿಗಳಿಗೆ ಗುಟ್ಟು ಬಿಟ್ಟುಕೊಡದ ಕಿರುತೆರೆಯ ನಟ ಚಂದನ್ ಹಾಗೂ ನಟಿ ಕವಿತಾ ಏಪ್ರಿಲ್ 1 ರಂದು ತಮ್ಮ ಪ್ರೀತಿಗೆ ಅಧಿಕೃತ ಮುದ್ರೆಯೊತ್ತಲು ಸಿದ್ಧವಾಗಿದ್ದಾರೆ.

ಸ್ವತಃ ಚಂದನ್ ಈ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, we are getting fooled on april first ಎಂದು ಪೋಸ್ಟ್ ಹಾಕಿದ್ದಾರೆ. ಲಕ್ಷ್ಮೀ ಬಾರಮ್ಮಾ ಸೀರಿಯಲ್ ನಲ್ಲಿ ಜೋಡಿಯಾಗಿ ನಟಿಸಿದ್ದ ಈ ಜೋಡಿ ನಿಜಜೀವನದಲ್ಲೂ ಒಂದಾಗುತ್ತಾರೆ ಎಂಬ ಸುದ್ದಿ ವರ್ಷಗಳಿಂದ ಕೇಳಿಬಂದಿತ್ತು.
ಆದರೆ ಚಂದನ್ ಹಾಗೂ ಕವಿತಾ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ. ಪ್ರಸ್ತುತ ಬೇರೆ-ಬೇರೆ ಭಾಷೆಯ ಸೀರಿಯಲ್ ನಲ್ಲೂ ಬ್ಯುಸಿಯಾಗಿರೋ ಚಂದನ್ ಮದುವೆಗಾಗಿ ಕೆಲ ಸೀರಿಯಲ್ ನಿಂದ ಹೊರಬಂದಿದ್ದಾರಂತೆ.
ಹಲವು ಮದುವೆ ಸಮಾರಂಭ ಸೇರಿದಂತೆ ಕಾರ್ಯಕ್ರಮಗಳಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದ ಜೋಡಿ ಪ್ರೀತಿಯ ವಿಷ್ಯ ಕೇಳಿದಾಗಲೆಲ್ಲ ಮಾತುಮರೆಸುತ್ತಿತ್ತು. ಈಗ ಅಧಿಕೃತವಾಗಿದ್ದು, ಏಪ್ರಿಲ್ 1 ರಂದು ಎಂಗೇಜಮೆಂಟ್ ನಡೆಯಲಿದ್ದು, ಮೇ ಅಂತ್ಯಕ್ಕೆ ಮದುವೆ ಎನ್ನಲಾಗುತ್ತಿದೆ.