ಸೋಮವಾರ, ಏಪ್ರಿಲ್ 28, 2025
HomeBreakingಕೆಜಿಎಫ್-2 ಟೀಸರ್ ನಲ್ಲಿ ಅಧೀರನ ಅಭಿಮಾನಿಗಳಿಗೆ ನಿರಾಸೆ…! ಯಾಕೆ ಸಂಜಯ್ ದತ್ತ ಮುಖದರ್ಶನವಿಲ್ಲ ಗೊತ್ತಾ…?!

ಕೆಜಿಎಫ್-2 ಟೀಸರ್ ನಲ್ಲಿ ಅಧೀರನ ಅಭಿಮಾನಿಗಳಿಗೆ ನಿರಾಸೆ…! ಯಾಕೆ ಸಂಜಯ್ ದತ್ತ ಮುಖದರ್ಶನವಿಲ್ಲ ಗೊತ್ತಾ…?!

- Advertisement -

ಸಿನಿರಂಗ ಕಾತರದಿಂದ ಕಾಯುತ್ತಿದ್ದ ಬಹುನೀರಿಕ್ಷಿತ ಚಿತ್ರ ಕೆಜಿಎಫ್-2 ಟೀಸರ್ ರಿಲೀಸ್ ಆಗಿದೆ.  ನಿಗದಿಗಿಂತ ಮೊದಲೇ ಟೀಸರ್ ರಿಲೀಸ್ ಆಗಿದ್ದರೂ ಅಭಿಮಾನಿಗಳು ಮುಗಿಬಿದ್ದು ನೋಡ್ತಿದ್ದಾರೆ. ಈ ಮಧ್ಯೆ ಕೆಜಿಎಫ್-2 ದಲ್ಲಿ ಯಶ್ ಜೊತೆ ಕುತೂಹಲ ಹುಟ್ಟಿಸಿದ ಪಾತ್ರ ಅಧಿರಾ. ಆದರೆ ಅಧೀರನ ಲುಕ್ ನೋಡಲು ಕಾದಿದ್ದ ಪ್ರೇಕ್ಷಕರಿಗೆ ನಿರಾಸೆಯಾಗಿದೆ.

ಕೆಜಿಎಫ್-2 ಚಿತ್ರ ರಿಲೀಸ್ ಗೂ ಮುನ್ನವೇ ಸಾಕಷ್ಟು ಕುತೂಹಲ ಮೂಡಿಸಿದೆ. ಅದ್ದೂರಿ ಮೇಕಿಂಗ್, ಸ್ಟಾರ್ ತಾರಾಗಣ, ಕುತೂಹಲ ಹುಟ್ಟಿಸುವ ಸೆಟ್ ಗಳು ಹೀಗೆ ನಾನಾ ಕಾರಣಕ್ಕೆ ಕೆಜಿಎಫ್ ಸುದ್ದಿಯಾಗುತ್ತಿದ್ದು, ಶುಕ್ರವಾರ ಕೆಜಿಎಫ್-2 ಹಿರೋ ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಟೀಸರ್ ರಿಲೀಸ್ ಮಾಡಲಾಗಿದೆ.

ಚಿತ್ರದ ಬಗ್ಗೆ ಮತ್ತಷ್ಟು ಕುತೂಹಲ ಹೆಚ್ಚಿಸುವಂತೆ ರಾಯಲ್ ಆಗಿ ಮೂಡಿಬಂದಿರೋ ಕೆಜಿಎಫ್-2 ಟೀಸರ್ ನೋಡಿ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.  ಗನ್ ನಿಂದ ಜೀಪ್ ಉಡಾಯಿಸಿ ಸಿಗರೇಟ್ ಹೊತ್ತಿಸಿಕೊಳ್ಳುವ ಯಶ್ ಕಂಡು ಭಾರತದ ಚಿತ್ರರಂಗವೇ ಮನಸೋತಿದೆ.

ಆದರೆ ಕೆಜಿಎಫ್-2 ದಲ್ಲಿ ಸಾಕಷ್ಟು ಕುತೂಹಲ ಸೃಷ್ಟಿಸಿದ್ದ ಪಾತ್ರ ಅಧೀರ. ಬಾಲಿವುಡ್ ನ ಬಿಗ್ ಸ್ಟಾರ್ ಸಂಜಯ್ ದತ್ ಅಧೀರನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಇದು ಸಾಕಷ್ಟು ಅಭಿಮಾನಿಗಳನ್ನು ನಿದ್ದೆಗೆಡಿಸಿದ್ದ ಪಾತ್ರ. ಆದರೆ ಈಗ ರಿಲೀಸ್ ಆದ ಟೀಸರ್ ನಲ್ಲಿ ಅಧೀರನ ಮುಖದರ್ಶನವಾಗಿಲ್ಲ.

ಹೀಗಾಗಿ ಅಧೀರ್ ನ ಖಡಕ್,ಕ್ರೂಯಲ್ ಲುಕ್ ನೋಡೋ ಆಸೆಯಲ್ಲಿದ್ದ ಪ್ರೇಕ್ಷಕರಿಗೆ ನಿರಾಸೆಯಾಗಿದೆ. ಕ್ಯಾನ್ಸರ್ ನಿಂದ ಚೇತರಿಸಿಕೊಂಡು ಬಂದು ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದ ಸಂಜಯ್ ದತ್ ಕೆಜಿಎಫ್-2 ನಲ್ಲಿ ಹೇಗೆ ಮೂಡಿಬರ್ತಾರೆ ಅನ್ನೋದನ್ನು ನೋಡೋದಿಕ್ಕೆ ಬಾಲಿವುಡ್ ಕೂಡ ಕಾದಿತ್ತು.

ಆದರೆ ಈ ಟೀಸರ್ ನಲ್ಲಿ ಅಧೀರನ ಬೆನ್ನಿನ ದರ್ಶನ ಮಾತ್ರ ಆಗಿದೆ. ಮೂಲಗಳ ಪ್ರಕಾರ ಕೆಜಿಎಫ್-2 ಚಿತ್ರತಂಡ ಚಿತ್ರದ ಬಗ್ಗೆ ಸಾಕಷ್ಟು ಟೀಸರ್ ಹಾಗೂ ಕುತೂಹಲಕಾರಿ ಅಂಶವನ್ನು ಹಂತ-ಹಂತವಾಗಿ ಚಿತ್ರದ ಬಿಡುಗಡೆಯವರೆಗೂ ಹಂಚಿಕೊಳ್ಳೋ ಪ್ಲ್ಯಾನ್ ನಲ್ಲಿದ್ದು, ಇದಕ್ಕಾಗೇ ಅಧೀರನ ಮುಖದರ್ಶನವನ್ನು ಕಾದಿಟ್ಟಿದೆ ಎನ್ನಲಾಗಿದೆ.

ಸಧ್ಯದಲ್ಲೇ ಅಧೀರನ ಪಾತ್ರದ ಸುತ್ತವೇ ಮತ್ತೊಂದು ಟೀಸರ್ ಮೂಡಿಬರಲಿದ್ದು, ಅದಕ್ಕಾಗಿ ಸೂಕ್ತವಾದ ಸಮಯಕ್ಕೆ ಕಾಯ್ತಿದೆ ಎನ್ನಲಾಗಿದೆ. ಹೀಗಾಗಿ ಉದ್ದೇಶಪೂರ್ವಕವಾಗಿಯೇ ಮೊದಲ ಟೀಸರ್ ನಲ್ಲಿ ಅಧೀರನ ಮುಖದರ್ಶನ ನೀಡದೇ ಕುತೂಹಲವನ್ನು ಕಾಯ್ದಿಡುವ ಪ್ರಯತ್ನ ಮಾಡಲಾಗಿದೆ.

RELATED ARTICLES

Most Popular