ಈಗಾಗಲೇ ಸ್ಯಾಂಡಲ್ ವುಡ್ ಅಭಿನಯ ಚಕ್ರವರ್ತಿ ಸುದೀಪ್ ಜೀವನ ಚರಿತ್ರೆ ಪುಸ್ತಕರೂಪದಲ್ಲಿ ಹೊರಬಂದಿದೆ. ಈ ಮಧ್ಯೆ ಸುದೀಪ್ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ಕಾದಿದ್ದು, ಕಿಚ್ಚ್ ನ ಕತೆ ಅಡಿಯೋ ರೂಪದಲ್ಲೂ ಹೊರಬರಲಿದೆ.

ಕಿಚ್ಚ ಸುದೀಪ್ ಬಯೋಗ್ರಫಿಗೆ ಡಿಜಿಟಲ್ ರೂಪ ನೀಡಲಾಗುತ್ತಿದ್ದು, ಇ ಬುಕ್ ಅಥವಾ ಆಡಿಯೋ ರೂಪದಲ್ಲಿ ಸುದೀಪ್ ಬಯೋಗ್ರಫಿಯನ್ನು ರೂಪಾಂತರಿಸಲಾಗುತ್ತಿದೆ. ಮೈಲಾಂಗ್ಸ್ ಬುಕ್ಸ್ ಸಂಸ್ಥೆ ಇಂತಹದೊಂದು ವಿಭಿನ್ನ ಪ್ರಯತ್ನಕ್ಕೆ ಮುನ್ನುಡಿ ಬರೆದಿದೆ.

ಸಿನಿಪತ್ರಕರ್ತ ಶರಣು ಹುಲ್ಲೂರು ರಚಿಸಿರುವ ಕಿಚ್ಚ ಬುಕ್ ಸಪ್ಟೆಂಬರ್ 2, 2020 ರಂದು ಬಿಡುಗಡೆಯಾಗಿತ್ತು. ಈಗ ಇದೇ ಪುಸ್ತಕವನ್ನು ಆಡಿಯೋ ರೂಪದಲ್ಲಿ ತರಲು ಸಿದ್ಧತೆ ನಡೆದಿದೆ.

ಇನ್ನು ಕಿಚ್ಚನ ಜೀವನಚರಿತ್ರೆಯನ್ನು ಆಡಿಯೋ ರೂಪಕ್ಕೆ ತರಲು ಸಿದ್ಧತೆ ನಡೆಸಿರುವ ಮೈಲಾಂಗ್ಸ್ ಬುಕ್ ಇದಕ್ಕಾಗಿ ಸುದೀಪ್ ಅಭಿಮಾನಿಗಳಿಗೆ ಒಂದೊಳ್ಳೆ ಅವಕಾಶ ನೀಡಿದೆ. ಸುದೀಪ್ ಕತೆಗೆ ನೀವು ಧ್ವನಿಯಾಗಬಹುದು.

ಸ್ಯಾಂಪಲ್ ಧ್ವನಿಮುದ್ರಿಕೆಯನ್ನು ಮೈಲಾಂಗ್ ಬುಕ್ಸ್ ಆಹ್ವಾನಿಸಿದೆ. ನಿಮ್ಮ ಧ್ವನಿ ಸುದೀಪ್ ಜೀವನಚರಿತ್ರೆಗೆ ಸೂಕ್ತ ಎಂದು ಆಯ್ಕೆ ಮಂಡಳಿಗೆ ಅನ್ನಿಸಿದರೇ, ಸಂಪೂರ್ಣ ಕಿಚ್ಚನ ಕತೆ ನಿಮ್ಮ ಧ್ವನಿಯಲ್ಲೇ ಮೂಡಿಬರಲಿದೆ.

25 ರಿಂದ 40 ವರ್ಷದೊಳಗಿನ, ಬೆಂಗಳೂರಿನಲ್ಲಿ ರೆಕಾರ್ಡಿಂಗ್ ಗೆ ಬರಲು ಸಿದ್ಧವಿರುವ, ಬೇಸ್ ವಾಯ್ಸ್ ಇರುವ ಯಾರು ಬೇಕಾದರೂ ತಮ್ಮ ಧ್ವನಿ ಮುದ್ರಿಕೆಯನ್ನು ಜನವರಿ 7 ರ ಳಗಾಗಿ ಮೈಲಾಂಗ್ ಸಂಸ್ಥೆಗೆ ಕಳುಹಿಸಬಹುದಾಗಿದ್ದು, ಈ ಬಗ್ಗೆ ಮೈಲಾಂಗ್ ಬುಕ್ಸ್ ಪ್ರಕಟಣೆ ಕೂಡ ಹೊರಡಿಸಿದೆ.

ನಿಮ್ಮ ಧ್ವನಿಯ ಸ್ಯಾಂಪಲ್ ನ್ನು contact@mylang.in ಕಳಿಸಬೇಕು. ಸುದೀಪ್ ಅಭಿಮಾನಿಗಳಿಗೆ ಇಂದೊಂದು ಸುವರ್ಣಅವಕಾಶವಾಗಿದ್ದು, ತಮ್ಮ ನೆಚ್ಚಿನ ನಟನ ಕತೆಯನ್ನು ತಾವೇ ತಮ್ಮ ಧ್ವನಿಯಲ್ಲೇ ಹೇಳುವ ಅವಕಾಶ ನಿಮ್ಮದಾಗಲಿದೆ.