ಮಂಗಳವಾರ, ಏಪ್ರಿಲ್ 29, 2025
HomeBreakingಸಿಂಗಲ್ ಆಗಿಯೇ ಸಾಯುತ್ತೇನೆ…! ಇಷ್ಟಕ್ಕೂ ನನ್ನನ್ನು ಯಾರು ಮದುವೆಯಾಗ್ತಾರೆ..! ಕಿರಿಕ್ ಸಂಯುಕ್ತಾ ಹೊಸ ಅವತಾರ..!!

ಸಿಂಗಲ್ ಆಗಿಯೇ ಸಾಯುತ್ತೇನೆ…! ಇಷ್ಟಕ್ಕೂ ನನ್ನನ್ನು ಯಾರು ಮದುವೆಯಾಗ್ತಾರೆ..! ಕಿರಿಕ್ ಸಂಯುಕ್ತಾ ಹೊಸ ಅವತಾರ..!!

- Advertisement -

ಕಿರಿಕ್ ಪಾರ್ಟಿ…ಚಿತ್ರದ ಹೆಸರಿಗೆ ತಕ್ಕಂತೆ ಸ್ಯಾಂಡಲ್ ವುಡ್ ಗೆ ಕಾಲಿಟ್ಟಾಗಿನಿಂದ ಒಂದಿಲ್ಲೊಂದು ವಿವಾದದ ಮೂಲಕವೇ ಸುದ್ದಿಯಾಗುತ್ತಿರುವ ನಟಿ ಸಂಯುಕ್ತಾ ಹೆಗ್ಡೆ, ಈಗ ಇನ್ ಸ್ಟಾಗ್ರಾಂನಲ್ಲಿ ಅಭಿಮಾನಿಗಳ ಪ್ರಶ್ನೆಗೆ ಮನಬಂದಂತೆ ಉತ್ತರಿಸುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.

ಇನ್ ಸ್ಟಾಗ್ರಾಂನಲ್ಲಿ ಅಭಿಮಾನಿಗಳು ಕೇಳಿದ ಪ್ರಶ್ನೆಗೆ ತಮಗೆ ತೋಚಿದಂತೆ ಉತ್ತರ ನೀಡಿರುವ ಕಿರಿಕ್ ಪಾರ್ಟಿಸಂಯುಕ್ತಾ ಹೆಗ್ಡೆ, ಹಬ್ಬದ ಆಚರಣೆಯಿಂದ ವಾಯುಮಾಲಿನ್ಯವಾಗುತ್ತೆ ಎಂಬರ್ಥದಲ್ಲಿ ಉತ್ತರ ನೀಡಿದ್ದು, ಆಸ್ತಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ನೀವು ಮದುವೆಯಾಗುತ್ತೀರಾ? ಎಂಬ ಪ್ರಶ್ನೆಗೆ ಉತ್ತರಿಸಿರುವ ಸಂಯುಕ್ತಾ, ಇಲ್ಲ ನಾನು ಮದುವೆಯಾಗುವುದಿಲ್ಲ. ಸಿಂಗಲ್ ಆಗಿಯೇ ಸಾಯುತ್ತೇನೆ. ನನ್ನ ಮದುವೆಗೆ ಸಾವಿರಾರು ಜನರು ಬಂದು ಊಟ ಚೆನ್ನಾಗಿತ್ತಾ ಇಲ್ಲವಾ ಎಂಬುದನ್ನು ವಿಮರ್ಶೆ ಮಾಡೋದು ನನಗೆ ಇಷ್ಟವಿಲ್ಲ ಎಂದಿದ್ದಾರೆ.  ಅಷ್ಟೇ ಅಲ್ಲ ನನ್ನನ್ನು ನಾಳೆ ಯಾರು ಮದುವೆಯಾಗುತ್ತಾರೆ ಎಂದು ಪ್ರಶ್ನಿಸಿದ್ದಾರೆ.

ಇನ್ನು ನೃತ್ಯ ಅಥವಾ ಕೆಲಸ ಎರಡರಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತೀರಿ ಎಂಬ ಪ್ರಶ್ನೆಗೆ, ನೃತ್ಯ ನನ್ನ ಜೀವನ. ನನ್ನ ವೃತ್ತಿ, ನನ್ನ ಕೆಲಸವನ್ನು ನಾನು ಪ್ರೀತಿಸುತ್ತೇನೆ. ಆದರೆ ನನ್ನ ಜೀವನದಷ್ಟಲ್ಲ ಎಂದಿದ್ದಾರೆ.

ಇನ್ನು ಹಬ್ಬಗಳ ಆಚರಣೆ ಬಗ್ಗೆ ಮಾತನಾಡಿದ ಸಂಯುಕ್ತಾ, ದೀಪಾವಳಿ ಎಂದ್ರೆ ವಾಯುಮಾಲಿನ್ಯ, ಗಣೇಶ್ ಚತುರ್ಥಿ ಎಂದ್ರೇ ಜಲಮಾಲಿನ್ಯ. ಹೀಗಾಗಿ ಈ ಹಬ್ಬಗಳಿಗಿಂತ ನನಗೆ ಈ ಹಬ್ಬಕ್ಕೆ ನೀಡುವ ರಜೆಯೇ ಇಷ್ಟ ಎನ್ನುವ ಮೂಲಕ ಹಿಂದೂ ಹಬ್ಬಗಳ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ.

ನನ್ನ ಪಾಲಕರು ಅಂತರ ಧರ್ಮಿಯ ಮದುವೆಯಾಗಿದ್ದಾರೆ. ಇಷ್ಟು ವರ್ಷಗಳ ಕಾಲ ನಾನು ಅವರು ಒಟ್ಟಿಗೆ ಹಬ್ಬ ಮಾಡುವುದನ್ನು ನೋಡಿದ್ದೇನೆ. ಅದರ ಬಗ್ಗೆ ತಿಳಿದುಕೊಂಡಿದ್ದೇನೆ.  ಎಲ್ಲರೂ ಒಟ್ಟಾಗಿ ಹಬ್ಬಗಳನ್ನು ಆಚರಿಸುವುದು ಖುಷಿಕೊಡುತ್ತದೆ. ಆದರೆ ಮಾಲಿನ್ಯಮಾಡುವುದು ಸರಿಯಲ್ಲ. ಬಹುಷಃ ಯಾವ ದೇವರು ಈ ರೀತಿ ಮಾಲಿನ್ಯ ಮಾಡಿ ಎಂದು ಹೇಳುವುದಿಲ್ಲ ಎಂದಿದ್ದಾರೆ.

ಆದರೆ ಸಂಯುಕ್ತಾ ಈ ಹೇಳಿಕೆಗೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದು, ನಿಮಗೆ ಇವೆಲ್ಲಾ ವಿವಾದ ಬೇಕಾ ಅಂತ ಪ್ರಶ್ನಿಸುತ್ತಿದ್ದಾರೆ. ಸದಾ ವಿವಾದಗಳಿಂದಲೇ ಗುರುತಿಸಿಕೊಂಡಿರೋ ಸಂಯುಕ್ತಾ, ಕೆಲದಿನಗಳ ಹಿಂದೆಯಷ್ಟೇ ಪಾರ್ಕ್ ನಲ್ಲಿ ಅರೆಬರೆ ಬಟ್ಟೆತೊಟ್ಟು ವ್ಯಾಯಾಮ ಮಾಡಲು ಹೋಗಿ ಕಾಂಗ್ರೆಸ್ ವಕ್ತಾರೆ ಕವಿತಾ ರೆಡ್ಡಿಯಿಂದ ಹಲ್ಲೆಗೊಳಗಾಗಿದ್ದರು.

ರಾಜ್ಯದಾದ್ಯಂತ   ಈ ವಿಚಾರ ತೀವ್ರ ಚರ್ಚೆಗೆ ಗುರಿಯಾಗಿತ್ತು. ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದ  ಈ ಪ್ರಕರಣದಲ್ಲಿ  ಕವಿತಾ ರೆಡ್ಡಿ ಸಂಯುಕ್ತಾ ಕ್ಷಮೆ ಕೋರಿದ್ದರು. ಆದರೂ ಅವರನ್ನು ಬಂಧಿಸಿ ಬಳಿಕ ಬಿಡುಗಡೆ ಮಾಡಲಾಗಿತ್ತು.

RELATED ARTICLES

Most Popular