ಐದು ತಿಂಗಳ ಗರ್ಭೀಣಿಯಾಗಿದ್ದಾಗಲೇ ಪತಿಯನ್ನು ಕಳೆದುಕೊಂಡು ಕಂಗಾಲಾಗಿದ್ದ ನಟಿ ಮೇಘನಾರಾಜ್ ಸಧ್ಯ ತಮ್ಮ ಮಡಿಲಿಗೆ ಬಂದ ಥೇಟ್ ತಂದೆಯಂತೇ ಕಾಣೋ ಜ್ಯೂನಿಯರ್ ಚಿರು ಲಾಲನೆ-ಪಾಲನೆಯನ್ನು ತಮ್ಮ ದುಃಖ ಮರೆಯುತ್ತಿದ್ದಾರೆ. ಪುತ್ರನ ತೊಟ್ಟಿಲ ಶಾಸ್ತ್ರದಂದು ತಮ್ಮ ಮನಸ್ಸಿನ ಭಾವನೆಗಳನ್ನು ಮಾಧ್ಯಮದ ಜೊತೆ ಬಿಚ್ಚಿಟ್ಟ ಮೇಘನಾ ತಮ್ಮ ಕನಸೊಂದನ್ನು ಹಂಚಿಕೊಂಡ್ರು.

ಮೇಘನಾ ಮದುವೆಯಾದ ಎರಡು ವರ್ಷಗಳ ಬಳಿಕ ತಾಯ್ತನ ಸಂಭ್ರಮದಲ್ಲಿದ್ದರು. ಮಗುಗಾಗಿ ಪುಟ್ಟ ಪುಟ್ಟ ಕನಸು ನೇಯುತ್ತಿರುವಾಗಲೇ ಪತಿ ಚಿರು ಅಕಾಲಿಕವಾಗಿ ಅಗಲಿ ಹೋದರು. ಆ ನೋವಿನಲ್ಲಿ ಮೇಘನಾರನ್ನು ಸಂತೈಸಿದ್ದೇ ಒಡಲಿನಲ್ಲಿದ್ದ ಪುಟ್ಟ ಕಂದ. ಅಕ್ಟೋಬರ್ 22 ರಂದು ಭುವಿಗೆ ಈ ಬಂದ ಮಗನೇ ನನ್ನ ಸರ್ವಸ್ವ ಎನ್ನುತ್ತಿರೋ ಮೇಘನಾಗೆ ಅವಳಿ ಮಕ್ಕಳಾಗಬೇಕು ಎಂಬ ಆಸೆ ಇತ್ತಂತೆ.

ಅವಳಿ ಮಕ್ಕಳಾಗಬೇಕು ಎಂದು ಮೇಘನಾಗೆ ಯಾವಾಗಲೂ ಅನ್ನಿಸುತ್ತಿತ್ತಂತೆ. ಅದಕ್ಕಾಗಿ ಆಸೆಕೂಡ ಪಟ್ಟಿದ್ದರಂತೆ ಮೇಘನಾ. ವೈದ್ಯರ ಬಳಿಯೂ ಕೇಳಿದ್ದರಂತೆ. ಆದರೆ ವೈದ್ಯರು ನಿಮ್ಮ ಹೊಟ್ಟೆಯಲ್ಲಿ ಈಗ ಇರೋದು ಒಂದೇ ಮಗು ಎಂದಿದ್ದರಂತೆ. ಆದರೂ ಹೆರಿಗೆ ವೇಳೆಗೆ ನನಗೆ ಅವಳಿ ಮಕ್ಕಳಾಗಲಿ ಅಂತ ಮೇಘನಾ ಬಯಸುತ್ತಿದ್ದರಂತೆ.

ಮೇಘನಾ ಹೀಗೆ ಆಸೆ ಪಡೋದಕ್ಕು ಕಾರಣವಿದೆ. ಮೇಘನಾ ಅದೆಲ್ಲೋ ನಡೆದ ಘಟನೆಯೊಂದನ್ನು ಪತ್ರಿಕೆಯಲ್ಲಿ ಓದಿದ್ದರಂತೆ. ಗರ್ಭಿಣಿಗೆ ನಿನ್ನ ಹೊಟ್ಟೆಯಲ್ಲಿ ಒಂದು ಮಗು ಇದೆ ಎಂದು ವೈದ್ಯರು ಹೇಳಿ ಬಳಿಕವೂ ಹೆರಿಗೆ ವೇಳೆ ಅವಳಿ-ಜವಳಿ ಮಕ್ಕಳು ಜನಿಸಿದ್ದರಂತೆ. ಆ ವಿಚಾರವನ್ನು ಮನಸ್ಸಿನಲ್ಲಿಟ್ಟುಕೊಂಡ ಮೇಘನಾಗೆ ಹೆರಿಗೆವರೆಗೂ ತನಗೂ ಅವಳಿ ಮಕ್ಕಳಾಗಲಿ ಎಂಬ ಆಸೆ ಇತ್ತಂತೆ. ಮಿರಾಕಲ್ ನಡೆದ ತನಗೂ ಟ್ವಿನ್ಸ್ ಮಕ್ಕಳಾಗಲಿ ಎಂದು ಮೇಘನಾ ಬಯಸಿದ್ದರೂ ಒಂದೇ ಮಗು ಜನಿಸಿದೆ.


ಈ ವಿಚಾರವನ್ನು ಮಾಧ್ಯಮಗಳ ಜೊತೆ ಹಂಚಿಕೊಂಡ ಮೇಘನಾ ನಾನು ಮಿರಾಕಲ್ ಗಾಗಿ ಕಾದಿದ್ದೆ ಎಂದರು. ಆದರೆ ಈಗ ಚಿರುವಿನ ಪ್ರತಿರೂಪದಂತಿರುವ ಮಗ ಬಂದಿದ್ದು, ಅವನೇ ನನ್ನ ಸ್ಟ್ರೆಂತ್. ಅವನೇ ನನ್ನ ಸರ್ವಸ್ವ್ಎಂದಿದ್ದಾರೆ. ಅಷ್ಟೇ ಅಲ್ಲ ಜ್ಯೂನಿಯರ್ ಚಿರುವನ್ನು ಸಿನಿಮಾಗೆ ತರುತ್ತೀರಾ ಅನ್ನೋ ಪ್ರಶ್ನೆಗೆ ಖಂಡಿತಾ. ನಾನು ಈಗಲೇ ಬೇಕಿದ್ದರೂ ಅವನನ್ನು ಲಾಂಚ್ ಮಾಡಲು ಸಿದ್ಧ ಎಂದಿದ್ದಾರೆ.

ಬರುವಾಗಲೇ ಅದ್ದೂರಿ ವೆಲ್ ಕಂ ಸಿಕ್ಕಿದೆ ನನ್ನ ಮಗನಿಗೆ. ಹೀಗಾಗಿ ನಾನು ಖುಷಿಯಾಗಿದ್ದೇನೆ. ಸಧ್ಯ ಮಗನನ್ನು ಚಿರು ಕನಸಿನಂತೆ ಬೆಳೆಸೋದು ನನ್ನ ಜವಾಬ್ದಾರಿ ಎಂದು ಮೇಘನಾ ಹೇಳಿಕೊಂಡಿದ್ದಾರೆ.