ಗರ್ಭಿಣಿಯಾಗಿದ್ದಾಗಲೇ ಪ್ರೀತಿಯ ಪತಿಯನ್ನು ಕಳೆದುಕೊಂಡು ಕಂಗಾಲಾದರೂ ಬದುಕನ್ನು ದಿಟ್ಟ ತನದಿಂದ ಎದುರಿಸಿದ ನಟಿ ಮೇಘನಾ ಮತ್ತೊಂದು ದಿಟ್ಟ ಹೆಜ್ಜೆ ಇಟ್ಟಿದ್ದಾರೆ.

ಚಿರಂಜೀವಿ ಸರ್ಜಾ ನಿಧನರಾದ ಬಳಿಕವೂ ಅವರ ನೆನಪುಗಳ ಜೊತೆ ಪಯಣ ಆರಂಭಿಸಿದ ನಟಿ ಮೇಘನಾ ಎಲ್ಲ ಸಂದರ್ಭದಲ್ಲೂ ಚಿರು ಆಸೆ,ಕನಸುಗಳಿಗೆ ಪೂರಕವಾಗಿಯೇ ನಡೆದುಕೊಳ್ಳುತ್ತ ಬಂದಿದ್ದಾರೆ.

ತಮಗೆ ಇಷ್ಟವಿಲ್ಲದಿದ್ದರೂ ಚಿರು ಆಸೆ ಈಡೇರಿಸಲು ಮೇಘನಾ ಅದ್ದೂರಿ ಸೀಮಂತ ಮಾಡಿಸಿ ಕೊಂಡಿದ್ದರು. ಅಕ್ಟೋಬರ್ ೨೨ ರಂದು ಗಂಡುಮಗುವಿಗೆ ಜನ್ಮ ನೀಡಿದ ಮೇಘನಾ ರಾಜ್, ಮಗುವನ್ನು ಚಿರು ಆಸೆಯಂತೆ ಬೆಳೆಸುವುದಾಗಿ ಘೋಷಿಸಿದ್ದಾರೆ.

ಸಧ್ಯ ಕೊರೋನಾ ಪಾಸಿಟಿವ್ ಆಗಿರುವ ಕಾರಣಕ್ಕೆ ಮನೆಯಲ್ಲೇ ಕ್ವಾರಂಟೈನ್ ಆಗಿ ಚಿಕಿತ್ಸೆ ಪಡೆಯುತ್ತಿರುವ ಮೇಘನಾರಾಜ್ ಪತಿಗಾಗಿ ಒಂದು ದಿಟ್ಟ ನಿರ್ಧಾರ ಮಾಡಿದ್ದಾರೆ.

ಮೇಘನಾರಾಜ್ ನಟನೆಯನ್ನು ಮುಂದುವರೆಸಲಿದ್ದು, ಸಧ್ಯದಲ್ಲೇ ಮತ್ತೆ ಆಕ್ಟಿಂಗ್ ಕೆರಿಯರ್ ಗೆ ಮರಳಲಿದ್ದಾರಂತೆ. ಸ್ವತಃ ಈ ವಿಚಾರವನ್ನು ಮೇಘನಾ ರಾಜ್ ಪ್ರಕಟಿಸಿದ್ದಾರೆ.

ನಟನೆ ನನ್ನ ರಕ್ತದಲ್ಲೇ ಇದೆ. ನಟನೆಯ ಎಂದರೇ ನನಗೆ ತುಂಬ ಇಷ್ಟ. ನಮಗೆ ಪ್ರಿಯವಾಗಿದ್ದನ್ನು, ನಾವು ಪ್ರೀತಿಸೋದನ್ನು ಯಾವಾಗಲೂ ಬಿಡಬಾರದು ಎಂದು ಚಿರು ಹೇಳುತ್ತಿದ್ದರು. ಹೀಗಾಗಿ ನಾನು ನಟನೆ ಬಿಡೋದಿಲ್ಲ. ಎಲ್ಲಿಯವರೆಗೆ ಸಾಧ್ಯವೋ ಅಲ್ಲಿಯವರೆಗೆ ನಟಿಸುತ್ತೇನೆ ಎಂದಿದ್ದಾರೆ.

ಸಧ್ಯ ಸೃಜನ್ ಲೋಕೇಶ್ ನಾಯಕರಾಗಿರುವ ಚಿತ್ರವೂ ಸೇರಿದಂತೆ ಎರಡು ಚಿತ್ರಗಳು ರಿಲೀಸ್ ಗೆ ಸಿದ್ಧವಿದ್ದು ಕೊರೋನಾ ಹಿನ್ನೆಲೆಯಲ್ಲಿ ಚಿತ್ರ ರಿಲೀಸ್ ಮುಂದಕ್ಕೆ ಹೋಗಿದೆ.