ಸೋಮವಾರ, ಏಪ್ರಿಲ್ 28, 2025
HomeBreakingಜ್ಯೂನಿಯರ್ ಚಿರುಗೆ ಮತ್ತೊಂದು ಸ್ಪೆಶಲ್ ಗಿಫ್ಟ್....! ಉಡುಗೊರೆ ನೋಡಿ ಮೇಘನಾ ಫುಲ್ ಖುಷ್...!!

ಜ್ಯೂನಿಯರ್ ಚಿರುಗೆ ಮತ್ತೊಂದು ಸ್ಪೆಶಲ್ ಗಿಫ್ಟ್….! ಉಡುಗೊರೆ ನೋಡಿ ಮೇಘನಾ ಫುಲ್ ಖುಷ್…!!

- Advertisement -

ಚಿರಂಜೀವಿ ಸರ್ಜಾ ಹಾಗೂ ಮೇಘನಾರಾಜ್ ಮಗ ಜ್ಯೂನಿಯರ್ ಚಿರು ಹುಟ್ಟುತ್ತಲೇ ಎಲ್ಲರ ಪ್ರೀತಿ-ವಿಶ್ವಾಸ ಗಳಿಸಿಕೊಂಡಿದ್ದಾನೆ. ಸ್ಯಾಂಡಲ್ ವುಡ್ ಸ್ಟಾರ್ ಗಳ ನಂತರ ಇದೀಗ ಅದೇಷ್ಟೋ ಜನರು ಚಿರುಗೆ ಗಿಫ್ಟ್ ನೀಡಿ ಶುಭಹಾರೈಸುತ್ತಿದ್ದಾರೆ.

ಉತ್ತರ ಕರ್ನಾಟಕದಿಂದ ಸುಂದರವಾದ ಕಲಘಟಗಿ ತೊಟ್ಟಿಲು ಉಡುಗೊರೆಯಾಗಿ ಬಂದ ಬಳಿಕ‌ ಇದೀಗ ಅನಿಲಾ ಇಂಪ್ರೆಶನ್ಸ್ ಆ್ಯಂಡ್ ಪ್ರೇಮ್ಸ್ ನವರು ಜ್ಯೂನಿಯರ್ ಚಿರುಗೆ ಸ್ಪೆಶಲ್ ಗಿಫ್ಟ್ ಒಂದನ್ನು ನೀಡಿದೆ.

ಜ್ಯೂನಿಯರ್ ಚಿರು ಕೈ ಹಾಗೂ ಕಾಲಿನ ಅಚ್ಚನ್ನು ಸುಂದರವಾಗಿ ಮುದ್ರಿಸಿ ಅದಕ್ಕೆ‌ ಪ್ರೇಮ್ ಹಾಕಿ ಮೇಘನಾರಾಜ್ ಗೆ ನೀಡಲಾಗಿದ್ದು ಈ ಗಿಫ್ಟ್ ನೋಡಿ ಮೇಘನಾ ಭಾವುಕರಾಗಿದ್ದಾರೆ.

ಸುಂದರ ಹಾಗೂ ಹೃದಯಸ್ಪರ್ಶಿ ಗಿಫ್ಟ್ ಜೊತೆ ಪೋಟೋ ಶೇರ್ ಮಾಡಿರುವ ಮೇಘನಾ, ಸಂತೋಷವನ್ನು ಪ್ರೇಮ್ ನಲ್ಲಿ ಹಿಡಿದಿಡುವ ಈ ನಿಮ್ಮ ಪ್ರಯತ್ನವನ್ನು ನಾನು ಮೆಚ್ಚುತ್ತೇನೆ. ನಿಮ್ಮ ಈ ಕೆಲಸದಿಂದ ಚಿರಂಜೀವಿ ಅವರನ್ನು ನೀವು ಅಮರವಾಗಿಸಿದ್ದೀರಿ. ಜ್ಯೂನಿಯರ್ ಚಿರು ಇದನ್ನು ನಿಜವಾಗಿಯೂ ಕಾಪಾಡಿಕೊಳ್ಳುತ್ತಾನೆ ಎಂದು ಬರೆದುಕೊಂಡಿದ್ದಾರೆ.

ಅನಿಲಾ‌ಇಂಪ್ರೇಶನ್ ಪುಟ್ಟ ಮಕ್ಕಳ ಕೈಕಾಲುಗಳ ಅಳತೆ ಪಡೆದು ಅದರಿಂದ ಮೋಲ್ಡ್ ತಯಾರಿಸಿ ಅದನ್ನು ಶೃಂಗರಿಸಿ ಕೊಡುವದರಲ್ಲಿ ಎಕ್ಸಪರ್ಟ್ ಆಗಿದ್ದು,ಈಗಾಗಲೆ ಹಲವರಿಗೆ ಈ ಸುಂದರ ಗಿಫ್ಟ್ ನೀಡಿದ್ದಾರೆ.

ಇನ್ನು ಜ್ಯೂನಿಯರ್ ಚಿರುಗೆ ಸಿಕ್ಕ ಈ ಗಿಫ್ಟ್ ಹಾಗೂ ಮೇಘನಾ ರಾಜ್ ಹಂಚಿಕೊಂಡ ಪೋಟೋಗೆ ಚಿರು ಹಾಗೂ ಮೇಘನಾ ಅಭಿಮಾನಿಗಳು ಫುಲ್ ಖುಷಿಯಾಗಿದ್ದು, ಶುಭಹಾರೈಸಿದ್ದಾರೆ.

RELATED ARTICLES

Most Popular