ಮಂಗಳವಾರ, ಜೂನ್ 17, 2025
HomeBreakingಮತ್ತೆ ಕೊರೋನಾ ಸೋಂಕಿನ ಭೀತಿಯಲ್ಲಿ ಮೇಘನಾರಾಜ್….! ತಮ್ಮ ಸ್ಥಿತಿ ಬಗ್ಗೆ ಕುಟ್ಟಿಮಾ ಹೇಳಿದ್ದೇನು ಗೊತ್ತಾ?!

ಮತ್ತೆ ಕೊರೋನಾ ಸೋಂಕಿನ ಭೀತಿಯಲ್ಲಿ ಮೇಘನಾರಾಜ್….! ತಮ್ಮ ಸ್ಥಿತಿ ಬಗ್ಗೆ ಕುಟ್ಟಿಮಾ ಹೇಳಿದ್ದೇನು ಗೊತ್ತಾ?!

- Advertisement -

ಕಳೆದ ಡಿಸೆಂಬರ್ ನಲ್ಲಿ ಕೊರೋನಾ ಮೊದಲ ಅಲೆಯಲ್ಲೇ ಸೋಂಕಿಗೆ ತುತ್ತಾಗಿದ್ದ ನಟಿ ಮೇಘನಾ ರಾಜ್ ಚೇತರಿಸಿಕೊಂಡಿದ್ದರು. ಆದರೆ ಇದೀಗ ಎರಡನೇ ಅಲೆಯಲ್ಲೂ ಮತ್ತೊಮ್ಮೆ ಕೊರೋನಾ ಸೋಂಕಿನ ಭೀತಿ ಎದುರಾಗಿದೆಯಂತೆ. ಈ ಸೋಂಕಿನ ಭೀತಿ ಹಾಗೂ ಮುಂಜಾಗ್ರತೆಗಳ ಬಗ್ಗೆ ನಟಿ ಮೇಘನಾರಾಜ್ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

Meghanaraj 1

ಸದ್ಯ ನಟನೆಯಿಂದ ದೂರ ಉಳಿದು ತಮ್ಮ 6 ತಿಂಗಳ ಮಗುವಿನ ಪಾಲನೆಯಲ್ಲಿ ತೊಡಗಿರುವ ಮೇಘನಾ ರಾಜ್, ಕೆಲ ದಿನಗಳ ಹಿಂದೆ ಸ್ನೇಹಿತರ ಜೊತೆ ಡೇ ಔಟ್ ಹೋಗಿ ಬಹುಕಾಲದ ನಂತರ ಒಂದಷ್ಟು ಸಮಯವನ್ನು ಸ್ನೇಹಿತರ ಜೊತೆ ಕಳೆದಿದ್ದರು. ಆದರೆ ಈ ಸ್ನೇಹಿತರ ಪೈಕಿ ಒಬ್ಬರಿಗೆ ಕೊರೋನಾ ತಗುಲಿದ್ದರಿಂದ ನಟಿ ಮೇಘನಾಗೆ ಮತ್ತೊಮ್ಮೆ ಕೊರೋನಾ ಸೋಂಕಿನ ಭೀತಿ ಎದುರಾಗಿದೆಯಂತೆ.

MeghanaRaj

ಹೀಗಾಗಿ ಮೇಘನಾರಾಜ್ ಕೆಲಕಾಲ ತಮ್ಮನ್ನು ಪ್ರತ್ಯೇಕಿಸಿಕೊಂಡು ಸೆಲ್ಪ್ ಕ್ವಾರಂಟೈನ್ ಆಗಿದ್ದರಂತೆ. ಅಲ್ಲದೇ ಕೊರೋನಾ ಪರೀಕ್ಷೆಗೂ ಒಳಗಾಗಿದ್ದಾರಂತೆ. ರಿಪೋರ್ಟ್ ನೆಗೆಟಿವ್ ಬಂದಿದೆ. ಆದರೆ ಕೊರೋನಾ ಮನಸ್ಸನ್ನು ಕುಗ್ಗಿಸುತ್ತದೆ. ನನಗಂತೂ ನನ್ನ ವಯಸ್ಸಾದ ತಂದೆ ತಾಯಿ ಹಾಗೂ ಮಗನನ್ನು ನೆನೆದು ಅಪರಾಧಿ ಭಾವ ಕಾಡಿತು ಎಂದು ಬರೆದುಕೊಂಡಿದ್ದಾರೆ ಮೇಘನಾ.

ರೋಗ ನಿರೋಧಕ ಶಕ್ತಿ ಇಲ್ಲದೇ ಇರುವವರಿಗೆ ನಾವು ರೋಗವನ್ನು ಹರಡುವ ಮಾಧ್ಯಮವಾಗುತ್ತಿರುವದೇ ದೊಡ್ಡ ತಪ್ಪು ಎಂದಿರುವ ಮೇಘನಾ, ಸೋಂಕಿತರ ಸಂಪರ್ಕಕ್ಕೆ ಬಂದರೆ ದಯವಿಟ್ಟು ಸುರಕ್ಷಿತವಾಗಿ ನಿಮ್ಮನ್ನು ನೀವು ಎಲ್ಲರಿಂದಲೂ ಬೇರ್ಪಡಿಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.

https://instagram.com/megsraj?igshid=1s621zxwl9sdz

ಕಳೆದ ಡಿಸೆಂಬರ್ ನಲ್ಲಿ ಮೇಘನಾ ರಾಜ್ ತಾವು ಹಾಗೂ ತಂದೆ ತಾಯಿ ಕೊರೋನಾ ಸೋಂಕಿಗೆ ಒಳಗಾದ ಸಂದರ್ಭವನ್ನು ನೆನಪಿಸಿಕೊಂಡಿರುವ ಮೇಘನಾ, ಕೊರೋನಾ ಸೋಂಕು ಎಲ್ಲರ ಮೇಲೂ ಒಂದೇ ರೀತಿಯ ಪ್ರಭಾವ ಬೀರುವುದಿಲ್ಲ.ಕೆಲವರನ್ನು ಮಾನಸಿಕವಾಗಿ ಕುಗ್ಗಿಸುತ್ತದೆ. ಹೀಗಾಗಿ ಸೂಕ್ತ ಮುನ್ನೆಚ್ಚರಿಕೆ ವಹಿಸಿ ಎಂದು ಪತ್ರ ಬರೆದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

Meghana Raj 1

ಅಲ್ಲದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಸ್ಯಾನಿಟೈಸರ್ ಬಳಸಿ ಈ ವಿಪತ್ತಿನಿಂದ ಎಲ್ಲರೂ ಸುರಕ್ಷಿತವಾಗಿರೋಣ ಎಂದು ಮೇಘನಾ ರಾಜ್ ಕೋರಿದ್ದಾರೆ.  

RELATED ARTICLES

Most Popular