ಮಂಗಳವಾರ, ಏಪ್ರಿಲ್ 29, 2025
HomeBreakingತೆರೆಗೂ ಬರಲಿದೆ ಡ್ರೋನ್ ಪ್ರತಾಪ್ ನ ಕತೆ….! ಕಾಗೆ ಹಾರಿಸೋ ಪಾತ್ರದಲ್ಲಿ ನಟ ಭಯಂಕರ ಪ್ರಥಮ್…!!

ತೆರೆಗೂ ಬರಲಿದೆ ಡ್ರೋನ್ ಪ್ರತಾಪ್ ನ ಕತೆ….! ಕಾಗೆ ಹಾರಿಸೋ ಪಾತ್ರದಲ್ಲಿ ನಟ ಭಯಂಕರ ಪ್ರಥಮ್…!!

- Advertisement -

ಕೆಲ ದಿನಗಳ ಹಿಂದೆಯಷ್ಟೇ ಸೋಷಿಯಲ್ ಮೀಡಿಯಾ ಹಾಗೂ ಮಾಧ್ಯಮಗಳಲ್ಲಿ ತನ್ನ ಸುಳ್ಳುಗಳ ಮೂಲಕವೇ ಸಂಚಲನ ಸೃಷ್ಟಿಸಿದ್ದ ವ್ಯಕ್ತಿ ಡ್ರೋನ್ ಪ್ರತಾಪ್. ತಾನೇ ಸ್ವತಃ ಡ್ರೋನ್ ಗಳನ್ನು ಸಿದ್ಧಪಡಿಸಿದೆ ಎಂದಿದ್ದ ಈತ ಜನಸಾಮಾನ್ಯರಿಂದ ಆರಂಭಿಸಿ ಕೇಂದ್ರಸಚಿವರುಗಳನ್ನು ಯಾಮಾರಿಸಿದ್ದ. ಈ ಕತೆ ಈಗ ಸಿನಿಮಾ ರೂಪದಲ್ಲಿ ಬರಲಿದೆ.

 ಡ್ರೋನ್ ಪ್ರತಾಪ್ ಅಂದ್ರೇ ಯಾರಿಗೆ ಗೊತ್ತಿಲ್ಲ ಹೇಳಿ. ಡ್ರೋನ್ ಗೊತ್ತಿಲ್ಲದೇ ಇರೋರಿಗೂ ಪ್ರತಾಪ್ ಹಾರಿಸಿದ ಕಾಗೆ ಕತೆ ಗೊತ್ತು. ಇಂತಹ ಡ್ರೋನ್ ಪ್ರತಾಪ್ ನ ಕತೆ ಈಗ ಸಿನಿಮಾ ರೂಪದಲ್ಲಿ ತೆರೆಗೆ ಬರಲಿದೆಯಂತೆ. ಈ ಸಂಗತಿಯನ್ನು ನಟಭಯಂಕರ ಪ್ರಥಮ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಸುಳ್ಳಿನಲ್ಲೇ ಎಂಥೆಂಥವರನ್ನೋ ಯಾಮಾರಿಸಿದ ಡ್ರೋನ್ ಪ್ರತಾಪ್ ಪಾತ್ರದಲ್ಲಿ ಎಮ್ಎಲ್ಎ ಚಿತ್ರದ ನಾಯಕ, ನಟಭಯಂಕರ ಪ್ರಥಮ್ ಕಾಣಿಸಿಕೊಳ್ಳಲಿದ್ದಾರಂತೆ. ಇದಕ್ಕಾಗಿ ಪ್ರಥಮ್ ಬರೋಬ್ಬರಿ 15 ಕೆಜಿ ತೂಕವನ್ನು ಇಳಿಸಲಿದ್ದಾರಂತೆ.

ಪ್ರಖ್ಯಾತ ನಿರ್ದೇಶಕರೊಬ್ಬರು ಈ ಸಿನಿಮಾ ನಿರ್ದೇಶಿಸಲಿದ್ದಾರೆ ಎಂದಿರುವ ಪ್ರಥಮ್, ಕಾನೂನಾತ್ಮಕವಾಗಿ ಯಾವುದೇ ತೊಡಕಾಗದಂತೆ ವಿಡಂಬನಾತ್ಮಕವಾಗಿ ಸಿನಿಮಾ ತೆರೆಗೆ ಬರಲಿದೆ ಎಂದಿದ್ದಾರೆ. ದೇವರಂಥ ಮನುಷ್ಯ, ಎಮ್ಎಲ್ಎ ಚಿತ್ರಗಳಲ್ಲಿ ನಟಿಸಿರುವ ಪ್ರಥಮ್ ತಮ್ಮ ನಟಭಯಂಕರ ಚಿತ್ರ ರಿಲೀಸ್ ಗೆ ಕಾಯುತ್ತಿದ್ದಾರೆ.

ಬಿಗ್ ಬಾಸ್ ಮೂಲಕ ಬೆಳಕಿಗೆ ಬಂದ ಪ್ರತಿಭೆ ಒಳ್ಳೆಹುಡುಗ ಪ್ರಥಮ್, ಕೆಲ ತಿಂಗಳ ಹಿಂದೆಯಷ್ಟೇ ಬೆಂಗಳೂರಿನಿಂದ ಸ್ವಂತ ಊರಿಗೆ ಶಿಫ್ಟ್ ಆಗಿರೋದಾಗಿ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದರು.

RELATED ARTICLES

Most Popular