ಕೆಜಿಎಫ್-2 ಭಾರತೀಯ ಚಿತ್ರರಂಗದಲ್ಲೇ ಅತ್ಯಂತ ಹೆಚ್ಚು ಕುತೂಹಲ ಮೂಡಿಸಿದ ಸಿನಿಮಾ. ತೆರೆಗೆ ಬರೋ ಮುನ್ನವೇ ಹಲವಾರು ದಾಖಲೆ ಬರೆದಿರೋ ಸಿನಿಮಾ ಇದೀಗ ಎಲ್ಲ ಹಾಡುಗಳ ಹಕ್ಕನ್ನು ದಾಖಲೆಯ ಮೊತ್ತಕ್ಕೆ ಮಾರಾಟ ಮಾಡಿದ್ದು, ಕನ್ನಡದ ಲಹರಿ ಸಂಸ್ಥೆ ಹಾಡುಗಳ ಒಡೆತನವನ್ನು ತನ್ನದಾಗಿಸಿಕೊಂಡಿದೆ.

ರಾಕಿಂಗ್ ಸ್ಟಾರ್ ಯಶ್, ರವೀನಾ ಟಂಡನ್, ಸಂಜಯ್ ದತ್ ಸೇರಿದಂತೆ ಹಲವು ಖ್ಯಾತನಾಮರು ನಟಿಸಿರುವ ಕೆಜಿಎಫ್-2 ರಿಲೀಸ್ ಗೂ ಮುನ್ನವೇ ಹಲವು ದಾಖಲೆ ಬರೆದಿದೆ. ಇದೀಗ ಚಿತ್ರದಲ್ಲಿರುವ ಒಟ್ಟು 6 ಹಾಡುಗಳ ಹಕ್ಕು ಮಾರಾಟವಾಗಿದ್ದು, ಇದನ್ನು ಲಹರಿ ಸಂಸ್ಥೆ ಖರೀದಿಸಿದೆ.

ಕೆಜಿಎಫ್ -2 ಇಂಗ್ಲೀಷ್ , ಹಿಂದಿ ಸೇರಿದಂತೆ ಒಟ್ಟು ಐದು ಭಾಷೆಗಳಲ್ಲಿ ರಿಲೀಸ್ ಆಗಲಿದ್ದು, ಐದು ಭಾಷೆಗಳಲ್ಲೂ ಹಾಡುಗಳ ಹಕ್ಕನ್ನು ಲಹರಿ ಸಂಸ್ಥೆ ಖರೀದಿಸಿದೆ. ಕೆಜಿಎಫ್ ಹಾಡುಗಳನ್ನು ಲಹರಿ ಸಂಸ್ಥೆಯೇ ಖರೀದಿಸಿತ್ತು.

ಎಲ್ಲ ಅಂದುಕೊಂಡಂತೆ ಆಗಿದ್ದರೇ ಕೆಜಿಎಫ್ -2 ಜುಲೈನಲ್ಲಿ ತೆರೆ ಬರಬೇಕಿತ್ತು. ಆದರೆ ಬಾಗಿಲು ಮುಚ್ಚಿದ ಥಿಯೇಟರ್ ಗಳು ಹಾಗೂ ಸ್ಥಗಿತಗೊಂಡ ಚಿತ್ರರಂಗದ ಚಟುವಟಿಕೆಗಳಿಂದ ಕೆಜಿಎಫ್-2 ರಿಲೀಸ್ ವಿಳಂಬವಾಗಲಿದೆ. ಯಾವಾಗ ರಿಲೀಸ್ ಆಗಲಿದೆ ಅನ್ನೋದನ್ನು ಚಿತ್ರತಂಡವೇ ಹೇಳಬೇಕಿದೆ.

ಈ ಮಧ್ಯೆ ಸದ್ಯದಲ್ಲೇ ಕೆಜಿಎಫ್-2 ಹಾಡುಗಳನ್ನು ರಿಲೀಸ್ ಮಾಡಲು ಚಿತ್ರತಂಡ ಸಿದ್ಧತೆ ನಡೆಸಿದ್ದು, ಅದಕ್ಕು ಮೊದಲು ಲಹರಿ ಸಂಸ್ಥೆ ಕೋಟ್ಯಾಂತರ ರೂಪಾಯಿಗೆ ಕೆಜಿಎಫ್-2 ಸುಮಧುರ ಹಾಡುಗಳ ಹಕ್ಕನ್ನು ತನ್ನದಾಗಿಸಿಕೊಂಡಿದೆ.