ಮಂಗಳವಾರ, ಏಪ್ರಿಲ್ 29, 2025
HomeBreakingYash-Radhika: ಕನಸಿನ ಮನೆಗೆ ಕಾಲಿಟ್ಟ ಯಶ್-ರಾಧಿಕಾ ದಂಪತಿ…! ಸರಳವಾಗಿ ನಡೆಯಿತು ಗೃಹಪ್ರವೇಶ…!!

Yash-Radhika: ಕನಸಿನ ಮನೆಗೆ ಕಾಲಿಟ್ಟ ಯಶ್-ರಾಧಿಕಾ ದಂಪತಿ…! ಸರಳವಾಗಿ ನಡೆಯಿತು ಗೃಹಪ್ರವೇಶ…!!

- Advertisement -

ಕೆಜಿಎಫ್-2 ಡಬ್ಬಿಂಗ್ ಮುಗಿಸಿ ಫ್ರಿಯಾಗಿರುವ ನಟ ಯಶ್ ಹಾಗೂ ರಾಧಿಕಾ ದಂಪತಿ ತಮ್ಮ ಕನಸೊಂದನ್ನು ಪೊರೈಸಿಕೊಂಡ ಖುಷಿಯಲ್ಲಿದ್ದಾರೆ. ಹೌದು ಯಶ್ ಹಾಗೂ ರಾಧಿಕಾ ತಮ್ಮ ಕನಸಿನ ಮನೆಗೆ ಕಾಲಿರಿಸಿದ್ದಾರೆ.

ಈಗಾಗಲೇ ಹಾಸನದಲ್ಲಿ ಫಾರ್ಮ್ ಹೌಸ್ ನಿರ್ಮಿಸಿರುವ ಯಶ್ ಬೆಂಗಳೂರಿನಲ್ಲೂ ತಮಗಾಗಿ ಐಷಾರಾಮಿ ಪ್ಲ್ಯಾಟ್ ವೊಂದನ್ನು ಖರೀದಿಸಿದ್ದಾರೆ. ವಿಂಡ್ಸರ್ ಮ್ಯಾನರ್ ಬಳಿ ಇರೋ ಪ್ರೆಸ್ಟಿಜ್ ಅಪಾರ್ಟಮೆಂಟ್ ನಲ್ಲಿ ಯಶ್ ಪ್ಲ್ಯಾಟ್ ಖರೀದಿಸಿದ್ದಾರೆ.

ಆಶಾಢ ಮಾಸಕ್ಕೂ ಮುನ್ನ ಮನೆ ಪ್ರವೇಶ ಮಾಡೋ ಕನಸಿನಲ್ಲಿದ್ದ ರಾಧಿಕಾ ಹಾಗೂ ಯಶ್ ಇಂದು ಸರಳವಾಗಿ ತಮ್ಮ ಪ್ಲ್ಯಾಟ್ ನಲ್ಲಿ ಪೂಜೆ ನೆರವೇರಿಸಿ ಗೃಹಪ್ರವೇಶ ಶಾಸ್ತ್ರ ಮಾಡಿದ್ದಾರೆ.

ಕೊರೋನಾ ಕಾರಣಕ್ಕೆ ಅತ್ಯಂತ ಸರಳವಾಗಿ ನಡೆದ ಈ ಸಮಾರಂಭದಲ್ಲಿ ಯಶ್ ಹಾಗೂ ರಾಧಿಕಾ ಕುಟುಂಬ ಮಾತ್ರ ಪಾಲ್ಗೊಂಡಿತ್ತು ಎನ್ನಲಾಗಿದೆ. ಮಾಧ್ಯಮಗಳಿಂದಲೂ ಯಶ್-ರಾಧಿಕಾ ಈ ವಿಚಾರ ಹಂಚಿಕೊಂಡಿರಲಿಲ್ಲ.

ಪ್ರೆಸ್ಟಿಜ್ ನಲ್ಲಿ ಪ್ಲ್ಯಾಟ್ ಖರೀದಿಸಿದ್ದ ಯಶ್ –ರಾಧಿಕಾ ತಮ್ಮ ಆಸೆಯಂತೆ ಇಂಟೀರಿಯರ್ ಮಾಡಿಸಿಕೊಳ್ಳಲು ಸಾಕಷ್ಟು ಸಮಯ ವ್ಯಯಿಸಿದ್ದು ಕೊನೆಗೂ  ಮನೆಯನ್ನು ತಮ್ಮಾಸೆಯಂತೆ ಶೃಂಗರಿಸಿಕೊಂಡ ಬಳಿಕ ಗೃಹಪ್ರವೇಶ ಮಾಡಿದ್ದಾರೆ.  

RELATED ARTICLES

Most Popular