ಕಿರುತೆರೆಯಿಂದ ಹಿರಿತೆರೆಗೆ ಹಾರೋ ಸ್ಯಾಂಡಲ್ ವುಡ್ ಸಂಪ್ರದಾಯದಂತೆ ಕನ್ನಡದ ಖಾಸಗಿ ಮನೋರಂಜನಾ ವಾಹಿನಿಯ ಪಾರು ಧಾರಾವಾಹಿ ಖ್ಯಾತಿಯ ನಟಿ ಮೋಕ್ಷಿತಾ ಪೈ ಸ್ಯಾಂಡಲ್ ವುಡ್ ನಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ಬಟ್ಟಲುಕಣ್ಣಿನ, ಮನಸೆಳೆಯುವ ಕರಾವಳಿಯ ಈ ಚೆಲುವೆ ಇದೀಗ ಚಂದನವನದ ಹಿರಿತೆರೆಗೆ ಕಾಲಿಟ್ಟಿದ್ದು, ಮಂಗಳೂರು ಬೆಡಗಿ ದುನಿಯಾ ವಿಜಯ್ ನಿರ್ದೇಶನದಲ್ಲಿ ಚೊಚ್ಚಲ ಸಿನಿಮಾ ನಟನೆಗೆ ಜೈ ಎಂದಿದ್ದಾರೆ.

ಮಾಡೆಲಿಂಗ್ ಮೂಲಕ ಬಣ್ಣದ ಜಗತ್ತಿಗೆ ಕಾಲಿಟ್ಟ ಮೋಕ್ಷಿತಾ ಪೈ, ಸಧ್ಯ ಕನ್ನಡ ಕಿರುತೆರೆಯ ಪಾರೂ ಸೀರಿಯಲ್ ನಲ್ಲಿ ಪ್ರಸಿದ್ಧಿ ಪಡೆದುಕೊಂಡಿದ್ದರು. ಇದರ ಬಳಿಕ ಸಲಗ ಬಳಿಕ ದುನಿಯಾ ವಿಜಯ್ ನಿರ್ದೇಶಿಸಲಿರುವ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ದುನಿಯಾ ವಿಜಯ್, ಕಥೆ,ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಬಹುತೇಕ ಹೊಸ ಮುಖಗಳಿಗೆ ಅವಕಾಶ ಕಲ್ಪಿಸಲಾಗುತ್ತಿದ್ದು, ಲಕ್ಕಿ ಗೋಪಾಲ್ ನಾಯಕರಾಗಿರುವ ಚಿತ್ರದಲ್ಲಿ ಪಾರೂ ನಾಯಕಿಯಾಗಿದ್ದಾರೆ. ಆ ಮೂಲಕ ಲಕ್ಕಿ ಗೋಪಾಲ್ ಹಾಗೂ ಮೋಕ್ಷಿತಾ ಪೈ ಇಬ್ಬರೂ ಸ್ಯಾಂಡಲ್ ವುಡ್ ನಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಒಡ್ಡಲಿದ್ದಾರೆ.

ಇನ್ನೂ ಹೆಸರಿಡದ ಈ ಚಿತ್ರದ ಚಿತ್ರೀಕರಣ ಸಧ್ಯದಲ್ಲೇ ಆರಂಭವಾಗಲಿದ್ದು, ಮೋಕ್ಷಿತಾ ಪೈ ತಮ್ಮ ಚೊಚ್ಚಲ್ ಚಿತ್ರಕ್ಕಾಗಿ ಸಾಕಷ್ಟು ತಯಾರಿ ಕೂಡ ನಡೆಸಿದ್ದಾರಂತೆ.