ಮಂಗಳವಾರ, ಏಪ್ರಿಲ್ 29, 2025
HomeBreakingಪ್ರಭಾಸ್ ಗೆ ಸೌತ್ ಬೆಡಗಿ ಸಾಥ್…! ಸಲಾರ್ ಗೆ ಸುಂದರಿ ಶೃತಿ ಹಾಸನ್ ನಾಯಕಿ…!!

ಪ್ರಭಾಸ್ ಗೆ ಸೌತ್ ಬೆಡಗಿ ಸಾಥ್…! ಸಲಾರ್ ಗೆ ಸುಂದರಿ ಶೃತಿ ಹಾಸನ್ ನಾಯಕಿ…!!

- Advertisement -

ಕೆಜಿಎಫ್ ಮೂಲಕ ಸಂಚಲನ‌ ಮೂಡಿಸಿದ ನಿರ್ದೇಶಕ ಪ್ರಶಾಂತ್ ನೀಲ್ ಮುಂದಿನ ಪ್ರಾಜೆಕ್ಟ್ ಸಲಾರ್ ಸಖತ್ ನೀರಿಕ್ಷೆ ಮೂಡಿಸಿದೆ. ನಾಯಕಿ ಹುಡುಕಾಟದಲ್ಲಿದ್ದ ಚಿತ್ರತಂಡ ಈಗ ಸಿಹಿಸುದ್ದಿ‌ನೀಡಿದೆ.

ಪ್ರಶಾಂತ್ ನೀಲ್‌ ಹಾಗೂ ಪ್ರಭಾಸ್ ಒಂದಾಗಿರುವ ಸಲಾರ್ ಚಿತ್ರ ಮುಹೂರ್ತದ ವೇಳೆಗೆ ಸಾಕಷ್ಟು ಸದ್ದು ಮಾಡ್ತಿದೆ‌. ಸಲಾರ್ ಗೆ ನಾಯಕಿ ಯಾರು ಎಂಬ ಚರ್ಚೆಗೆ ಕೊನೆಗೂ ಉತ್ತರ ದಕ್ಕಿದ್ದು ಬೋಲ್ಡ್ ಆಂಡ್ ಬ್ಯೂಟಿಫುಲ್ ಶೃತಿ ಹಾಸನ್ ಪ್ರಭಾಸ್ ಜೊತೆ ಡ್ಯುಯೆಟ್ ಹಾಡಲಿದ್ದಾರೆ.

ಬಹುಭಾಷಾ ನಟ ಕಮಲ್‌ಹಾಸನ್ ಪುತ್ರಿ ಹಾಗೂ ಮ್ಯೂಸಿಯನ್ ಶೃತಿ ಹಾಸನ್ ಬರ್ತಡೇಯಂದು ಸ್ಪೆಶಲ್ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಚಿತ್ರತಂಡ ಸಿನಿಪ್ರಿಯರಿಗೆ ಸಪ್ರೈಸ್ ನೀಡಿದೆ.

ಸಲಾರ್ ಗೆ ಬಂಡವಾಳ ಹೂಡಿರುವ ಹೊಂಬಾಳೆ ಫಿಲ್ಮ್ ಸ್ ಟ್ವೀಟ್ ಮೂಲಕ ಶೃತಿ ಗೆ ಹುಟ್ಟುಹಬ್ಬದ ಶುಭಾಶಯ ಕೋರಿದೆ.

ಇನ್ನು ಸಲಾರ್ ನಾಯಕ ಪ್ರಭಾಸ್ ಕೂಡ ಶೃತಿ ಹಾಸನ್ ಹುಟ್ಟುಹಬ್ಬಕ್ಕೆ ಶುಭಕೋರಿದ್ದು, ನಿಮ್ಮೊಂದಿಗೆ ಕೆಲಸ ಮಾಡಲು ಉತ್ಸುಕನಾಗಿದ್ದೇನೆ ಎಂದಿದ್ದಾರೆ.

ಈಗಾಗಲೇ ಹೈದ್ರಾಬಾದ್ ನಲ್ಲಿ ಅದ್ದೂರಿಯಾಗಿ ಚಿತ್ರದ ಮುಹೂರ್ತ ಮುಗಿಸಿರುವ ಚಿತ್ರತಂಡ ಫೆಬ್ರವರಿ ಮೊದಲ ವಾರದಲ್ಲಿ ಶೂಟಿಂಗ್ ಆರಂಭಿಸುವ ಸಾಧ್ಯತೆ ಇದೆ.


ಸದ್ಯ ನಾಯಕ ಹಾಗೂ ನಾಯಕಿ ಬಿಟ್ಟು ಬೇರೆ ಯಾರು ನಟಿಸಲಿದ್ದಾರೆ ಎಂಬ ಕ್ಲೂ ಬಿಟ್ಟು ಕೊಟ್ಟಿಲ್ಲ ಚಿತ್ರತಂಡ. ಆದರೆ ಯಶ್ ಸೇರಿದಂತೆ ಅದ್ದೂರಿ ತಾರಾಗಣವಿರಲಿದೆ ಎನ್ನಲಾಗ್ತಿದೆ.

ಸ್ಯಾಂಡಲ್ ವುಡ್ ಗಾಯಕ ಸಂಚಿತ್ ಹೆಗ್ಡೆ ಜೊತೆ ತುಟಿಗೆ ತುಟಿ ಬೆಸೆದು ಸುದ್ದಿಯಾಗಿದ್ದ ನಟಿ ಶೃತಿ ಈಗ ನೀಲ್ ನಿರ್ದೇಶನದ ಸಲಾರ್ ತಂಡ ಸೇರ್ಪಡೆಗೊಂಡಿದ್ದು ಒಂದಾದ ಮೇಲೊಂದು ಹಿಟ್ ಚಿತ್ರದ ಮೂಲಕ ಬ್ಯುಸಿಯಾಗಿದ್ದಾರೆ.

RELATED ARTICLES

Most Popular