ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಪ್ರತಿಯೊಂದು ಚಿತ್ರದಲ್ಲೂ ಒಂದಿಲ್ಲೊಂದು ಹೊಸತೊಂದು ಕಾದಿರುತ್ತೆ. ಈಗಲೂ ಪುನೀತ್ ರಾಜಕುಮಾರ್ ಅಭಿಮಾನಿಗಳಿಗೆ ಸಿಹಿಸುದ್ದಿ ಕಾದಿದ್ದು, ತಿಂಗಳ ಹಿಂದೆ ಅನೌನ್ಸ್ ಆಗಿದ್ದ ಪುನೀತ್ ಹಾಗೂ ಪವನ್ ಕುಮಾರ್ ಸಿನಿಮಾಗೆ ನಾಳೆ ಟೈಟಲ್ ಅನಾವರಣ ನಡೆಯಲಿದೆ.

ಲೂಸಿಯಾ, ಯೂ ಟರ್ನ್ ನಂತಹ ವಿಭಿನ್ನ ಚಿತ್ರಗಳನ್ನು ನೀಡಿದ ಪ್ರತಿಭಾನ್ವಿತ ನಿರ್ದೇಶಕ ಪವನ್ ಕುಮಾರ್ ಇದೇ ಮೊದಲ ಬಾರಿಗೆ ಪುನೀತ್ ರಾಜಕುಮಾರ್ ಗೆ ಆಕ್ಷ್ಯನ್ ಕಟ್ ಹೇಳಲಿದ್ದಾರೆ.

ಚಿತ್ರ ಘೋಷಿಸಿದ ಬಹುದಿನಗಳ ಬಳಿಕ ಹೊಸ ಅಪ್ಟೇಟ್ ಸಿಕ್ಕಿದ್ದು, ಜುಲೈ 1 ರಂದು ಚಿತ್ರದ ಟೈಟಲ್ ಅನೌನ್ಸ್ ಆಗಲಿದೆ.
ಹೊಂಬಾಳೆ ಫಿಲ್ಸ್ಮಂ ಪುನೀತ್ ಚಿತ್ರ ನಿರ್ಮಿಸಲಿದ್ದು, ನಾಳೆ ಬೆಳಗ್ಗೆ 11.46 ಕ್ಕೆ ಚಿತ್ರದ ಅಪ್ಡೇಟ್, ಟೈಟಲ್ ಘೋಷಿಸುವುದಾಗಿ ಹೊಂಬಾಳೆ ಫಿಲ್ಸ್ಮಂ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದೆ.

ಈಗಾಗಲೇ ಪುನೀತ್ ಗಾಗಿ ಯುವರತ್ನ ಸಿನಿಮಾ ನಿರ್ಮಿಸಿ ಗೆದ್ದಿರುವ ಹೊಂಬಾಳೆ ಫಿಲ್ಸ್ಮಂ ಎರಡನೇ ಚಿತ್ರಕ್ಕೆ ಪುನೀತ್ ಜೊತೆಯಾಗಲಿದೆ.

ಸದ್ಯ ಜೇಮ್ಸ್ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಪುನೀತ್ ರಾಜಕುಮಾರ್ ಜೇಮ್ಸ್ ಬಳಿಕ ಹೆಸರಿಡದ ಪವನ್ ಕುಮಾರ ನಿರ್ದೇಶನದ ಸಿನಿಮಾದಲ್ಲಿ ತೊಡಗಿಕೊಳ್ಳಲಿದ್ದಾರೆ. ಪುನೀತ್ ಹೊಸ ಚಿತ್ರದ ಟೈಟಲ್ ಅಭಿಮಾನಿಗಳಿಗೆ ಕುತೂಹಲ ಮೂಡಿಸಿದ್ದು, ನಾಳೆ ಕುತೂಹಲಕ್ಕೆ ತೆರೆ ಬೀಳಲಿದೆ.