ಮಂಗಳವಾರ, ಏಪ್ರಿಲ್ 29, 2025
HomeBreakingನನ್ನ ಅಣ್ಣನೇ ನನ್ನ ಗುರು…! ಚಿರು ಪೋಟೋ ಜೊತೆ ಕಣ್ತುಂಬಿ ಬರುವಂತೆ ಧ್ರುವ್ ಸರ್ಜಾ...

ನನ್ನ ಅಣ್ಣನೇ ನನ್ನ ಗುರು…! ಚಿರು ಪೋಟೋ ಜೊತೆ ಕಣ್ತುಂಬಿ ಬರುವಂತೆ ಧ್ರುವ್ ಸರ್ಜಾ ಬರೆದ್ರು ಸಂದೇಶ…!

- Advertisement -

ಯುವಸಾಮ್ರಾಟ್ ಚಿರಂಜೀವಿ ಸರ್ಜಾ ಇನ್ನಿಲ್ಲವಾಗಿ ದಿನಗಳು ಉರುಳುತ್ತಿವೆ. ಆದರೆ ಸರ್ಜಾ ಕುಟುಂಬ ಮಾತ್ರ ಪ್ರತಿನಿತ್ಯವೂ ಚಿರು ನೆನಪನ್ನು ಹಸಿರಾಗಿರುವ ಪ್ರಯತ್ನವನ್ನು ಮುಂದುವರೆಸಿದೆ. ಸಿನಿಚಾಲೆಂಜ್ ವೊಂದಕ್ಕೆ ಅಣ್ಣನನ್ನು ನೆನಪಿಸಿಕೊಂಡಿರೋ ಧ್ರುವ್ ಸರ್ಜಾ ಅಣ್ಣನೇ ನನ್ನ ಗುರು ಎಂದಿದ್ದಾನೆ.

ಇತ್ತೀಚಿಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಸಿನಿಮಾದ ಪಾಠಶಾಲಾ ಹಾಡು ರಿಲೀಸ್ ಆಗಿತ್ತು. ಈ ಹಾಡಿನ ಜೊತೆಯೇ ಸೋಷಿಯಲ್ ಮೀಡಿಯಾದಲ್ಲಿ #MyGuruChallenge ಆರಂಭಿಸಲಾಗಿತ್ತು.  ಚಿತ್ರತಂಡ ಆರಂಭಿಸಿದ್ದ  ಈ ಅಭಿಯಾನದಲ್ಲಿ ಪವರ್ ಸ್ಟಾರ್ ಪುನೀತ್ ವಿಜಯಲಕ್ಷ್ಮೀ ಎಂಬುವವರ ಜೊತೆಗಿನ ತಮ್ಮ ಪೋಟೋ ಜೊತೆ ಅಭಿಯಾನ ಬೆಂಬಲಿಸಿದ್ದರು.

ಈ ಚಾಲೆಂಜ್ ಗೆ ಹೊಂಬಾಳೆ ಫಿಲ್ಮ್ಸ್ ಕಾರ್ಯಕಾರಿ ನಿರ್ದೇಶಕ ಕಾರ್ತೀಕ್ ಗೌಡ್ ಧ್ರುವ್ ಸರ್ಜಾರನ್ನು ಟ್ಯಾಗ್ ಮಾಡಿದ್ದರು. ಈ ಚಾಲೆಂಜ್ ಸ್ವೀಕರಿಸಿದ ಧ್ರುವ್ ಸರ್ಜಾ, ನನ್ನ ಅಣ್ಣನೇ ನನ್ನ ಗುರು ಎನ್ನುತ್ತ ಚಿರು ಜೊತೆಗಿನ ಪೋಟೋ ಅಪ್ಲೋಡ್ ಮಾಡಿದ್ದಾರೆ.

ಅಲ್ಲದೇ ಬಾಳೆಂಬ ಚಿಗುರು ಮೊಳಕೆಯೊಡೆಯಲು ಮಳೆಯಾದೆ, ಹೂವಾಗಿ ಅರಳಲು ಸ್ಪೂರ್ತಿಯಸೂರ್ಯನಾದೆ, ವೃಕ್ಷವಾಗಿ ಬೆಳೆಯಲು ಆಸರೆಯ ಭೂಮಿಯಾದ ನನ್ನ ಅಣ್ಣ. ನನ್ನ ಅಣ್ಣನೇ ನನ್ನ ಗುರು ಎಂದಿದ್ದಾರೆ. ಧ್ರುವ್ ಭಾವುಕ ನುಡಿಗೆ ಅಭಿಮಾನಿಗಳು ಕಣ್ಣಿರಾಗಿದ್ದಾರೆ.

ಇನ್ನು ಧ್ರುವ್ ಸರ್ಜಾ ತಾವು ಪೋಟೋ ಅಪ್ಲೋಡ್ ಮಾಡೋದರ ಜೊತೆಗೆ ಹ್ಯಾಟ್ರಿಕ್ ಹೀರೋ ಶಿವಣ್ಣ ಅವರನ್ನು ಚಾಲೆಂಜ್ ಗೆನಾಮಿನೇಟ್ ಮಾಡಿದ್ದಾರೆ. ಸಧ್ಯ ಸೋಷಿಯಲ್ ಮೀಡಿಯಾದಲ್ಲಿ ಈ ಚಾಲೆಂಜ್ ಹವಾ ಜೋರಾಗಿದ್ದು, ಸೆಲಿಬ್ರೆಟಿಗಳು ತಮ್ಮ ಗುರು ಸಮಾನರ ಜೊತೆ ಪೋಟೋ ಶೇರ್ ಮಾಡ್ತಿದ್ದಾರೆ.  

RELATED ARTICLES

Most Popular