ಘಟಾನುಘಟಿ ನಾಯಕರು ತಮ್ಮ ಚಿತ್ರಗಳನ್ನು ಥಿಯೇಟರ್ ಬಿಡೋಕೆ ಮೀನಾ ಮೇಷ ಏಣಿಸುತ್ತಿರುವಾಗಲೇ ಯುವರತ್ನನ ಹವಾ ಜೋರಾಗಿದ್ದು, ಚಿತ್ರತಂಡ ರಿಲೀಸ್ ಡೇಟ್ ಅನೌನ್ಸ್ ಮಾಡಿದೆ.

ಹೊಂಬಾಳೆ ಫಿಲ್ಮ್ ಎಪ್ರಿಲ್ 1,2021 ರಂದು ಯುವ ರತ್ನ ಸಿನಿಮಾ ಪ್ರದರ್ಶನ ಆರಂಭವಾಗಲಿದೆ ಎಂದು ಘೋಷಿಸಿದ್ದು, ಸಿನಿಪ್ರಿಯರು ಹಾಗೂ ಪುನೀತ್ ಅಭಿಮಾನಿಗಳ ಹೊಸ ವರ್ಷದ ಸಂಭ್ರಮ ದುಪ್ಪಟ್ಟಾಗಿದೆ.ನಟ ಸಾರ್ವಭೌಮ ಬಳಿಕ ಪುನೀತ್ ಅಭಿನಯದ ಬಹುನೀರಿಕ್ಷಿತ ಚಿತ್ರ ಇದಾಗಿದ್ದು, ಯುವರತ್ನ ಏಕಕಾಲಕ್ಕೆ ಕನ್ನಡ ಮತ್ತು ತೆಲುಗಿನಲ್ಲಿ ರಿಲೀಸ್ ಆಗಲಿದೆ.

ಇಷ್ಟಕ್ಕೂ ಪುನೀತ್ ರಾಜಕುಮಾರ್ ಚಿತ್ರ ಎಪ್ರಿಲ್ ನಲ್ಲಿ ಅದರಲ್ಲೂ ಗುರುವಾರವೇ ಯಾಕೆ ರಿಲೀಸ್ ಆಗ್ತಿದೆ ಅಂತ ನೀವು ಕೇಳ್ತಿದ್ದರೇ ಅದಕ್ಕೊಂದು ಅದೃಷ್ಟದ ಲೆಕ್ಕಾಚಾರವಿದೆ.

ಪುನೀತ್ ರಾಜಕುಮಾರ್ ಗೆ ಸ್ಟಾರ್ ವ್ಯಾಲ್ಯೂ ತಂದುಕೊಟ್ಟ ಅಪ್ಪು ಸಿನಿಮಾದಿಂದ ಆರಂಭಿಸಿ ಇಲ್ಲಿಯವರೆಗಿನ ಬಹುತೇಕ ಪುನೀತ್ ರಾಜಕುಮಾರ್ ಸಿನಿಮಾಗಳು ಏಪ್ರಿಲ್ ಹಾಗೂ ಗುರುವಾರವೇ ನಲ್ಲೆ ತೆರೆ ಕಂಡಿವೆ.

ಹೀಗಾಗಿ ಪುನೀತ್ ಗೆ ಏಪ್ರಿಲ್ ಹಾಗೂ ಗುರುವಾರ ಅದೃಷ್ಟದ ವಿಚಾರ ಎನ್ನಲಾಗಿದೆ. ಹೀಗಾಗಿ ಕೊರೋನಾ ಸಂಕಷ್ಟದ ನಡುವೆಯೂ ಧೈರ್ಯ ಮಾಡಿರುವ ಚಿತ್ರತಂಡ ಏಪ್ರಿಲ್ 1 ರ ಗುರುವಾರ ಚಿತ್ರ ರಿಲೀಸ್ ಮಾಡಲು ಸಿದ್ಧವಾಗಿದೆ.

ಸಂತೋಷ್ ಆನಂದ ರಾಮ್ ನಿರ್ದೇಶನದ ಈ ಚಿತ್ರ ಪುನೀತ್ ಸಿನಿಕೆರಿಯರ್ ನ ಮಹತ್ವದ ಚಿತ್ರ ಎಂದೇ ಬಿಂಬಿಸಲಾಗಿದೆ.