ಮಂಗಳವಾರ, ಜೂನ್ 17, 2025
HomeBreakingಸ್ಯಾಂಡಲ್ ವುಡ್ ಗುಳಿಕೆನ್ನೆ ಬೆಡಗಿಯ ಹಾಟ್ ಪೋಟೋಸ್ ವೈರಲ್…!

ಸ್ಯಾಂಡಲ್ ವುಡ್ ಗುಳಿಕೆನ್ನೆ ಬೆಡಗಿಯ ಹಾಟ್ ಪೋಟೋಸ್ ವೈರಲ್…!

- Advertisement -

ರಚಿತಾ ರಾಮ್…. ಸ್ಯಾಂಡಲ್ ವುಡ್ ನ ಲಕ್ಕಿ ಸ್ಟಾರ್ ಖ್ಯಾತಿಯ ನಟಿ. ರಚಿತಾರಾಮ್ ಯಾವ ಚಿತ್ರದಲ್ಲಿ ನಟಿಸುತ್ತಾರೋ ಆ ಚಿತ್ರ ಸೂಪರ್ ಹಿಟ್ ಅನ್ನೋ ನಂಬಿಕೆ. ಅದಕ್ಕೆ ಸಾಕ್ಷಿ ಎಂಬಂತೆ ಸಾಲು-ಸಾಲು ಚಿತ್ರಗಳು ಗೆದ್ದಿವೆ. ಸದ್ಯ ಹಲವಾರು ಸಿನಿಮಾ, ಕಿರುತೆರೆ ರಿಯಾಲಿಟಿ ಶೋದಲ್ಲಿ ಬ್ಯುಸಿಯಾಗಿರೋ ಈ ಗುಳಿಕೆನ್ನೆ ಚೆಲುವೆ ಸಖತ್ ಪೋಟೋಶೂಟ್ ಮೂಲಕ ಮಿಂಚಿದ್ದಾರೆ.

Alvas1

ಹೌದು ನಕ್ಕಾಗೊಮ್ಮೆ ಗುಳಿಬೀಳೋ ಕೆನ್ನೆ, ಮುದ್ದಾದ ಅಭಿನಯದ ಮೂಲಕ ಕನ್ನಡಿಗರ ಮನೆಮಾತಾದ ನಟಿ ರಚಿತಾರಾಮ್. ಹಮ್ಮುಬಿಮ್ಮು ಇಲ್ಲದ ಅಪ್ಪಟ ಕನ್ನಡತಿಗೆ ಸ್ಯಾಂಡಲ್ ವುಡ್ ನಲ್ಲಿ ಅವಕಾಶಗಳ ಸುರಿಮಳೆಯೇ ಸುರಿದಿದೆ. ನಟಿಸಿದ ಒಂದೊಂದೆ ಚಿತ್ರ ಹಿಟ್ ಆಗ್ತಿದ್ದಂತೆ ಮತ್ತಷ್ಟು ಬೇಡಿಕೆ ಹೆಚ್ಚಿದೆ.

Rachitha New 1

ಇಂತಿಪ್ಪ ರಚಿತಾರಾಮ್ ಇದೀಗ ಕೊರೋನಾ ಕಾಲಘಟ್ಟದಲ್ಲೂ ಹಾಟ್ ಪೋಟೋಶೂಟ್ ಮೂಲಕ ಗಮನ ಸೆಳೆದಿದ್ದಾರೆ. ಬ್ಯಾಕ್ ಡ್ರೆಸ್ ನಲ್ಲಿ ಹಾಟ್ ಆಗಿ ಪೋಸ್ ನೀಡಿರುವ  ರಚಿತಾ ಪೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿವೆ.  ಮಂಡಿವರೆಗಿನ, ಡೀಪ್ ನೆಕ್ ಗೌನ್  ನಲ್ಲಿ ವಿವಿಧ ಪೋಸ್ ನಲ್ಲಿ ರಚಿತಾ ಪೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

Rachitha New 2

ತುಸು ದಪ್ಪಗಾದಂತೆ ಕಾಣ್ತಿರೋ ರಚಿತಾ ಈ ಪೋಟೋಶೂಟ್ ಯಾವ ಚಿತ್ರಕ್ಕಾಗಿ ಎಂಬ ಗುಟ್ಟು ಬಿಟ್ಟುಕೊಟ್ಟಿಲ್ಲ. ಸಧ್ಯ ನೀನಾಸಂ ಸತೀಶ್ ಜೊತೆಗಿನ ಚಿತ್ರ ಹಾಗೂ ಪ್ರೇಮ್ ನಿರ್ದೇಶನದ ಏಕ್ ಲವ್ ಯಾ ಸಿನಿಮಾದಲ್ಲಿ ಬ್ಯುಸಿಯಾಗಿರೋ ರಚಿತಾ ರಾಮ್ ಮತ್ಯಾವುದೋ ಚಿತ್ರಕ್ಕಾಗಿ ಈ ಪೋಟೋಶೂಟ್ ನಡೆಸಿದ್ದಾರೆ ಎನ್ನಲಾಗ್ತಿದೆ.

Rachitha New 3

ರಚಿತಾರಾಮ್ ಖುದ್ದು ಈ ಪೋಟೋಗಳನ್ನು ಹಂಚಿಕೊಂಡಿದ್ದು, ಅಭಿಮಾನಿಗಳು ತಮ್ಮ ಫೆವರಿಟ್ ನಟಿಯ ಪೋಟೋ ನೋಡಿ ಸಖತ್ ಎಂಜಾಯ್ ಮಾಡ್ತಿದ್ದು, ಫುಲ್ ಲೈಕ್ಸ್ ಕೊಟ್ಟು ಶೇರ್ ಮಾಡ್ತಿದ್ದಾರೆ.

RELATED ARTICLES

Most Popular