ದೇಶದ ಗಮನ ಸೆಳೆದಿದ್ದ ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿದ್ದ ತುಪ್ಪದ ಬೆಡಗಿ ರಾಗಿಣಿ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಹೀಗೆ ಬಂದ ರಾಗಿಣಿ ಖಾಕಿ ತೊಡಲು ಸಿದ್ಧವಾಗಿದ್ದು ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ.

ಜೈಲಿನಿಂದ ಹೊರ ಬರುತ್ತಿದ್ದಂತೆ ಮಠ,ಮಂದಿರ,ಮಸೀದಿ ಸುತ್ತಾಡಿದ ರಾಗಿಣಿ ಬಳಿಕ ಕೆಲಕಾಲ ಸೋಷಿಯಲ್ ಮೀಡಿಯಾದಿಂದ ದೂರ ಉಳಿದಿದ್ದರು. ಈಗ ಸೋಷಿಯಲ್ ಮೀಡಿಯಾಕ್ಕೂ ಮರಳಿದ್ದು ಜೊತೆಗೆ ನಟನೆಗೂ ಚಾಲನೆ ನೀಡಿದ್ದಾರೆ.

ಕರ್ವ-೩ ರಲ್ಲಿ ನಟಿಸ್ತಿರೋ ರಾಗಿಣಿ ಹೊಸ ಸಿನಿಮಾಗೆ ಸಹಿಮಾಡಿದ್ದು, ಈ ಚಿತ್ರದಲ್ಲಿ ರಾಗಿಣಿ ಸ್ವತಃ ಪ್ರಕರಣವೊಂದರ ತನಿಖಾಧಿಕಾರಿ ಪಾತ್ರಕ್ಕಾಗಿ ಖಾಕಿ ತೊಡಲಿದ್ದಾರಂತೆ.

ಮಫ್ತಿ ನಿರ್ದೇಶಕ ನರ್ತನ ಗರಡಿಯಲ್ಲಿ ಪಳಗಿದ ವೇಧಿಕ್ ವೀರ್ ಸ್ವತಂತ್ರ ನಡುವೆ ನಿರ್ದೇಶನಕ್ಕೆ ಸಜ್ಜಾಗಿದ್ದು ಮೊದಲ ಚಿತ್ರವೇ ಫ್ಯಾನ್ ಇಂಡಿಯಾ ಸಿನಿಮಾವಾಗಲಿದೆ.

ಜಾನಿವಾಕರ್ ಎಂದು ಹೆಸರಿಡಲಾದ ಈ ಚಿತ್ರದಲ್ಲಿ ರಾಗಿಣಿ ಲೀಡ್ ರೋಲ್ ನಲ್ಲಿ ಕಾಣಿಸಿಕೊಳ್ಳಲಿದ್ದು, ಚಿತ್ರತಂಡ ರಾಗಿಣಿಗೆ ಮಾಸ್ ಕ್ವೀನ್ ಎಂಬ ಪಟ್ಟವನ್ನು ನೀಡಲಿದೆಯಂತೆ.
ಕನ್ನಡದ ಜೊತೆಗೆ ತಮಿಳು,ತೆಲುಗು,ಹಿಂದಿ ಭಾಷೆಯಲ್ಲೂ ಸಿನಿಮಾ ರಿಲೀಸ್ ಆಗಲಿದೆ. ಈಗಾಗಲೇ ಚಿತ್ರತಂಡ ಫ್ರೀ ಪ್ರೊಡಕ್ಷನ್ ಕಾರ್ಯದಲ್ಲಿ ತೊಡಗಿದ್ದು ಸಧ್ಯದಲ್ಲೇ ಶೂಟಿಂಗ್ ಆರಂಭಿಸಲಿದೆಯಂತೆ.