ಕನ್ನಡ ಕಿರುತೆರೆಯಲ್ಲಿ ತಮ್ಮ ಮುಗ್ಧ ಮುಖ, ಶಾಂತವಾದ ಅಭಿನಯ ಹಾಗೂ ಸ್ಪಷ್ಟ ಕನ್ನಡದಿಂದ ಹೆಸರಾದ ನಟಿ ಭುವಿ ಅಲಿಯಾಸ್ ಭುವನೇಶ್ವರಿ ಅಲಿಯಾಸ್ ರಂಜನಿ ರಾಘವನ್ ಮೈಸೂರು ಮಹಾರಾಣಿಯಾಗಿ ಮಿಂಚಿದ್ದಾರೆ. ಇಷ್ಟಕ್ಕೂ ರಂಜನಿ ಮೈಸೂರು ಮಹಾರಾಣಿಯಾಗಿದ್ದು ಯಾವುದೋ ಸಿನಿಮಾಗಲ್ಲ ಬದಲಾಗಿ ಪೋಟೋಶೂಟ್ ಗಾಗಿ.

ಸದ್ಯ ಕನ್ನಡ ಕಿರುತೆರೆ ಲೋಕದಲ್ಲಿ ಸದ್ದು ಮಾಡ್ತಿರೋ ಸೀರಿಯಲ್ ಕನ್ನಡತಿ. ಇದರಲ್ಲಿ ಭುವಿ ಪಾತ್ರದಾರಿಯಾಗಿ ಮಿಂಚ್ತಿರೋ ರಂಜನಿ ರಾಘವನ್ ವಿಭಿನ್ನ ಗೆಟಪ್ ಜೊತೆ ಮೈಸೂರು ಮಹಾರಾಣಿ ಪೋಟೋಶೂಟ್ ಮಾಡಿಸಿ ಕನ್ನಡಿಗರ ಮನ ಗೆದ್ದಿದ್ದಾರೆ.

ಅಚ್ಚ ಕೆಂಪಿನ ಸೀರೆ, ಅದಕ್ಕೆ ಒಪ್ಪುವ ಅಲಂಕಾರ, ರಾಜಮನೆತನದ ಘನತೆ ಎತ್ತಿಹಿಡಿಯುವಂತಹ ಆಭರಣಗಳು, ಸ್ನಿಗ್ಧ ಸೌಂದರ್ಯ ತೋರುವ ಮುಖಭಾವದೊಂದಿಗೆ ರಂಜನಿ ರಾಘವನ್ ಪೋಟೋಗೆ ಪೋಸ್ ನೀಡಿದ್ದಾರೆ.

ರಂಜನಿ ರಾಘವನ್ ಪೋಟೋ ಶೂಟ್ ಸಖತ್ ವೈರಲ್ ಆಗಿದ್ದು, ಜನರು, ಅಭಿಮಾನಿಗಳು ಪ್ರೀತಿಯಿಂದ ಮೆಚ್ಚಿಕೊಳ್ತಿದ್ದಾರೆ. ಅಷ್ಟೇ ಅಲ್ಲ ಸ್ವತಃ ರಂಜನಿ ರಾಘವನ್ ಕೂಡ ಈ ಪೋಟೋಗಳನ್ನು ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, ಮೈಸೂರು ಮಹಾರಾಣಿಯರ ಗೌರವಾರ್ಥವಾಗಿ ಎಂದು ಕ್ಯಾಪ್ಸನ್ ನೀಡಿದ್ದಾರೆ.
https://m.facebook.com/story.php?story_fbid=369945854492793&id=100044321441867
ಅಲ್ಲದೇ ಮೈಸೂರಿನ ಮಹಾರಾಣಿ ಕೆಂಪನಂಜಮ್ಮಣ್ಣಿಯವರನ್ನು ನೆನೆದಿರುವ ರಂಜನಿ, ಅವರು ಮಾಡಿದ ತ್ಯಾಗವನ್ನು ನೆನಪಿಸಿಕೊಂಡು ಗೌರವಿಸೋಣ ಎಂದಿದ್ದಾರೆ.
https://www.instagram.com/p/CRBEtwXpmkj/?utm_medium=copy_link
ಪುಟ್ಟಗೌರಿ ಮದುವೆ ಸೀರಿಯಲ್ ನಿಂದ ಕನ್ನಡ ಕಿರುತೆರೆ ಲೋಕಕ್ಕೆ ಪರಿಚಯವಾದ ರಂಜನಿ ಹಲವು ಚಿತ್ರಗಳಲ್ಲಿ ನಟಿಸಿದ್ದು, ಸಾಹಿತ್ಯ ಹಾಗೂ ಕಲೆಯಲ್ಲಿ ಆಸಕ್ತಿ ಹೊಂದಿದ್ದಾರೆ. ಮಾತ್ರವಲ್ಲದೇ ಅವಧಿಯಲ್ಲಿ ಕತೆಗಾರರಾಗಿಗೂ ಗುರುತಿಸಿಕೊಂಡಿದ್ದಾರೆ.