ಸ್ಯಾಂಡಲ್ ವುಡ್ ನ ಸಿಂಪಲ್ ಸ್ಟಾರ್ ರಕ್ಷಿತ್ ಹಾಗೂ ಹೊಂಬಾಳೆ ಫಿಲ್ಮ್ಸಂನ ಹೊಸ ಪ್ರಯತ್ನಕ್ಕೆ ಪ್ರೇಕ್ಷಕರು ಸಖತ್ ರೆಸ್ಪಾನ್ಸ್ ನೀಡಿದ್ದು, ರಿಚರ್ಡ್ ಆಂಟನಿ ಚಿತ್ರದ ಟೀಸರ್ ಒಂದು ಕೋಟಿ ವಿವ್ಸ್ ಪಡೆದು ದಾಖಲೆಯತ್ತ ಮುನ್ನುಗ್ಗುತ್ತಿದೆ.

ತಮ್ಮ ವಿರುದ್ಧ ಕೆಲವು ಮಾಧ್ಯಮಗಳಲ್ಲಿ ಮಾಡಲಾದ ಆರೋಪಗಳಿಗೆ ಜುಲೈ 11 ರಂದು ಉತ್ತರಿಸುವುದಾಗಿ ಸಿಂಪಲ್ ಸ್ಟಾರ್ ಘೋಷಿಸಿದ್ದರು. ಇದಕ್ಕೆ ಪೂರಕ ಎಂಬಂತೆ ಹೊಂಬಾಳೆ ಫಿಲ್ಸ್ಮಂ ಕೂಡ ತಮ್ಮ ಮುಂದಿನ ಚಿತ್ರ ಹಾಗೂ ಹೀರೋನ ಬಗ್ಗೆ ಜುಲೈ 11 ರಂದು ಘೋಷಿಸುವುದಾಗಿ ಹೇಳಿಕೊಂಡಿತ್ತು.
ಕೊನೆಗೆ ಹೊಂಬಾಳೆ ಫಿಲ್ಸ್ಮಂ ಹಾಗೂ ರಕ್ಷಿತ್ ಶೆಟ್ಟಿ ಜಂಟಿಯಾಗಿ ತಮ್ಮ ಮುಂದಿನ ಚಿತ್ರ ರಿಚರ್ಡ್ ಆಂಟನಿ ಎಂದು ಘೋಷಿಸಿದ್ದು, ಟೀಸರ್ ಕೂಡ ರೀಲಿಸ್ ಮಾಡಲಾಗಿತ್ತು. ಇದರೊಂದಿಗೆ ರಕ್ಷಿತ್ ಶೆಟ್ಟಿ ಮತ್ತೊಮ್ಮೆ ನಿರ್ದೇಶನಕ್ಕಿಳಿಯುವುದಾಗಿಯೂ ಘೋಷಿಸಿದ್ದರು.
ಸಿಂಪಲ್ ಶೆಟ್ಟಿ ನಟರಾಗಿ ಹಾಗೂ ನಿರ್ದೇಶಕರಾಗಿ ತೆರೆಗೆ ತರುತ್ತಿರೋ ರಿಚರ್ಡ್ ಆಂಟನಿ, ಉಳಿದವರು ಕಂಡಂತೆ ಸಿನಿಮಾದ ಪೂರ್ವ ಭಾಗ ಹಾಗೂ ಮುಂದಿನ ಭಾಗದ ಕಥಾಹಂದರವುಳ್ಳ ಸಿನಿಮಾ ಎನ್ನಲಾಗಿದ್ದು, ಚಿತ್ರದ ಬಗ್ಗೆ ರಕ್ಷಿತ್ ಶೆಟ್ಟಿ ವಿವರಣೆ ನೀಡಿದ್ದಾರೆ.

ಚಿತ್ರಕತೆ ಕುರಿತು ಪ್ರತಿಕ್ರಿಯೆ ನೀಡಿರುವ ರಕ್ಷಿತ್ ಶೆಟ್ಟಿ, ಉಳಿದವರು ಕಂಡಂತೆ ಚಿತ್ರಕಥೆ ಬರೆದಾಗ ಅದಕ್ಕೊಂದು ಮುಂದಿನ ಕತೆ ಹುಟ್ಟಿಕೊಳ್ಳಲಿದೆ ಎಂಬ ಕಲ್ಪನೆ ನನಗೆ ಇರಲಿಲ್ಲ. ಈಗ ಈ ಕತೆಯ ಎರಡನೇ ಅಧ್ಯಾಯ ಶುರು ಮಾಡುವ ಸಮಯ ಬಂದಾಗಿದೆ. ಅದುವೆ ಮರುಬಂದನು ಅಲೆಗಳ ಜೊತೆ,ಕೆಂಪಾದವು ಕಡಲ ತೀರದ ಕತೆ ಎಂದಿದ್ದಾರೆ.