ತನ್ನ ಹಾಡುಗಳ ಮೂಲಕವೇ ಹಲವು ದಾಖಲೆ ಬರೆದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಇದೀಗ ಮತ್ತೊಂದು ದಾಖಲೆ ಬರೆದಿದ್ದು, ಮ್ಯಾಜಿಕಲ್ ಮ್ಯೂಸಿಕ್ ಕಂಪೋಸರ್ ಅರ್ಜುನ್ ಜನ್ಯ ಹಾಡೊಂದು ಮತ್ತೊಮ್ಮೆ 100 ಮಿಲಿಯನ್ ವೀಕ್ಷಣೆಯ ಗೌರವಕ್ಕೆ ಪಾತ್ರವಾಗಿದೆ.

ರಾಬರ್ಟ್ ಸಿನಿಮಾದ ಕಣ್ಣು ಹೊಡಿಯಾಕ್ ಹಾಡು ಯೂಟ್ಯೂಬ್ ನಲ್ಲಿ 100 ಮಿಲಿಯನ್ ವೀಕ್ಷಣೆ ಕಂಡಿದ್ದು, ಆ ಮೂಲಕ ಮತ್ತೊಂದು ದಾಖಲೆ ಬರೆದಿದೆ. ಅಷ್ಟೇ ಅಲ್ಲ 100 ಮಿಲಿಯನ್ ವೀಕ್ಷಣೆ ಪಡೆಯುತ್ತಿರುವ ಅರ್ಜುನ್ ಜನ್ಯ ಅವರ ಮೂರನೇ ಹಾಡು ಇದಾಗಿದ್ದು, ಜನ್ಯ ಹೊಸ ದಾಖಲೆ ಬರೆದಿದ್ದಾರೆ.

ಈಗಾಗಲೇ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ ಮೂರು ಹಾಡುಗಳು 100 ಮಿಲಿಯನ್ ವೀಕ್ಷಣೆಯೊಂದಿಗೆ ದಾಖಲೆ ಪಡೆದಿವೆ. ಈ ಸಾಲಿಗೆ ಈಗ ಕಣ್ಣು ಹೊಡೆಯಾಕ್ ಕೂಡ ಸೇರ್ಪಡೆಗೊಂಡಿದೆ. ಈ ಖುಷಿಯನ್ನು ಸ್ವತಃ ಅರ್ಜುನ್ ಜನ್ಯ ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ.
ಇದಕ್ಕೂ ಮೊದಲು ನಾಲ್ಕು ವರ್ಷಗಳ ಹಿಂದೆ ರಿಲೀಸ್ ಆದ ಕಿರಿಕ್ ಪಾರ್ಟಿ ಸಿನಿಮಾದ ಬೆಳಗೆದ್ದು ಯಾರ್ ಮುಖವಾ ನಾನು ನೋಡಲಿ ಹಾಡು 100 ಮಿಲಿಯನ್ ವೀಕ್ಷಣೆ ಪಡೆದಿತ್ತು. ಸದ್ಯ ಈ ಹಾಡು 103 ಮಿಲಿಯನ್ ವೀಕ್ಷಣೆ ಪಡೆದು ಮುನ್ನುಗ್ಗುತ್ತಿದೆ. ಈ ಹಾಡಿಗೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದರು.
ಬಳಿಕ ಜನ್ಯ ಸಂಗೀತ ನೀಡಿದ ಶರಣ್ ಹಾಗೂ ಆಶಿಕಾ ರಂಗನಾಥ್ ಅಭಿನಯದ ಚುಟು ಚುಟು ಅಂತೈತಿ ಹಾಡು 100 ಮಿಲಿಯನ್ ವೀಕ್ಷಣೆ ಪಡೆದಿತ್ತು. ಈಗ ಈ ಹಾಡು 143 ಮಿಲಿಯನ್ ವೀಕ್ಷಣೆಯೊಂದಿಗೆ ಜನಮೆಚ್ಚುಗೆ ಪಡೆಯುತ್ತ ಸಾಗಿದೆ.
ಇದರೊಂದಿಗೆ ನೀನಾಸಂ ಸತೀಶ್ ನಟನೆಯ ಅಯೋಗ್ಯ ಸಿನಿಮಾದ ಯಾಕಮ್ಮಿ ಯಾಕಮ್ಮಿ ವಿಡಿಯೋ ಹಾಗೂ ಲಿರಿಕಲ್ ವಿಡಿಯೋ ಸಾಂಗ್ ಸೇರಿ 100 ಮಿಲಿಯನ್ ಕ್ಲಬ್ ಸೇರಿತ್ತು.
ಇದೀಗ ರಾಬರ್ಟ್ ಸಿನಿಮಾದ ಕಣ್ಣು ಹೊಡೆಯಾಕ್ ಸಾಂಗ್ ಮತ್ತೆ 100 ಮಿಲಿಯನ್ ವೀಕ್ಷಣೆಯ ಸಾಧನೆ ಗೈಯ್ದಿದೆ.
ರಾಬರ್ಟ್ ಸಿನಿಮಾದ ಎಲ್ಲ ಹಾಡುಗಳು ಮೋಡಿ ಮಾಡುವಂತಿದ್ದು, ತೆಲುಗಿನಲ್ಲಿ ಕಣ್ಣು ಹೊಡೆಯಾಕ್ ಹಾಡು ಮಂಗ್ಲಿ ಬಾಯಲ್ಲಿ ಕಣ್ಣೇ ಅದರಿಂದಿಯಾಗಿ ಮೂಡಿ ಬರುವ ಮೂಲಕ ಮತ್ತಷ್ಟು ಪ್ರಸಿದ್ಧಿ ಪಡೆದಿದೆ.