ಸೋಮವಾರ, ಏಪ್ರಿಲ್ 28, 2025
HomeBreakingಸಪ್ತಪದಿ ತುಳಿದ ಸರಿಗಮಪ ಗಾಯಕ…! ಗೌತಮಿ ಬಾಳಿಗೆ ಜೊತೆಯಾದ ಶ್ರೀಹರ್ಷ…!!

ಸಪ್ತಪದಿ ತುಳಿದ ಸರಿಗಮಪ ಗಾಯಕ…! ಗೌತಮಿ ಬಾಳಿಗೆ ಜೊತೆಯಾದ ಶ್ರೀಹರ್ಷ…!!

- Advertisement -

ಮೈಸೂರು: ಸರಿಗಮಪ ಖ್ಯಾತಿಯ ಗಾಯಕ ಹಾಗೂ ಅಸಿಸ್ಟೆಂಟ್ ಪ್ರೊಫೆಸರ್ ಶ್ರೀಹರ್ಷ ಕೊರೋನಾ ಲಾಕ್ ಡೌನ್ ಸಂಕಷ್ಟದ ನಡುವೆಯೂ ಸರಳವಾಗಿ ಸಪ್ತಪದಿ ತುಳಿದಿದ್ದಾರೆ.

https://kannada.newsnext.live/lpg-price-down-good-news/

ಮೈಸೂರು ಮೂಲದ ಶ್ರೀಹರ್ಷ ಶೃಂಗೇರಿ ಮೂಲದ ಗೌತಮಿಯೊಂದಿಗೆ ವಿವಾಹ ಬಂಧನಕ್ಕೆ ಕಾಲಿರಿಸಿದ್ದು, ಕೊರೋನಾ ಲಾಕ್ ಡೌನ್ ಹಾಗೂ ಸರ್ಕಾರಿ ನಿಯಮಗಳ ಹಿನ್ನೆಲೆಯಲ್ಲಿ ಅವರ ಹಳ್ಳಿಯಲ್ಲೇ ಸರಳವಾಗಿ ವಿವಾಹ ನಡೆದಿದೆ.

https://kannada.newsnext.live/minister-ramesh-pokriwal-admited-hospital/

ಬಿಇ ಎಂಟೆಕ್ ಪದವೀಧರರಾಗಿರುವ ಶ್ರೀಹರ್ಷ ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಖಾಸಗಿ ವಾಹಿನಿಯ ಸರಿಗಮಪ ರಿಯಾಲಿಟಿ ಶೋ ಮೂಲಕ ಬೆಳಕಿಗೆ ಬಂದಿದ್ದ ಶ್ರೀಹರ್ಷ ವಾಯ್ಸ್ ಆಫ್ ಬೆಂಗಳೂರು ಸೇರಿದಂತೆ ಹಲವು ಗೌರವಕ್ಕೆ ಪಾತ್ರರಾಗಿದ್ದಾರೆ.

ಕರ್ನಾಟಕ ಶಾಸ್ತ್ರೀಯ, ಲಘುಸಂಗೀತ,ಭಕ್ತಿಗೀತೆಗಳು,ಗಜಲ್ಸ್,ಗಮಕ,ಜಾನಪದ ಹಾಡುಗಳು,ವೇದಪಠಣ ಸೇರಿದಂತೆ ಹಲವು ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಶ್ರೀಹರ್ಷ ನಾಡಿನಾದ್ಯಂತ ತಮ್ಮ ಕಂಠಸಿರಿಯಿಂದಲೇ ಅಪಾರ ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ.  

RELATED ARTICLES

Most Popular