ಸೋಮವಾರ, ಏಪ್ರಿಲ್ 28, 2025
HomeBreakingRakshit shetty:ರಕ್ಷಿತ್ ಶೆಟ್ಟಿ ಅವಹೇಳನಕಾರಿ ಸುದ್ದಿ ವಿಚಾರ….! ವಾಹಿನಿಗೆ ಸಖತ್ ತಿರುಗೇಟು ಕೊಟ್ಟ ಪುಷ್ಕರ್ ಮಲ್ಲಿಕಾರ್ಜುನಯ್ಯ…..!!

Rakshit shetty:ರಕ್ಷಿತ್ ಶೆಟ್ಟಿ ಅವಹೇಳನಕಾರಿ ಸುದ್ದಿ ವಿಚಾರ….! ವಾಹಿನಿಗೆ ಸಖತ್ ತಿರುಗೇಟು ಕೊಟ್ಟ ಪುಷ್ಕರ್ ಮಲ್ಲಿಕಾರ್ಜುನಯ್ಯ…..!!

- Advertisement -

ಖಾಸಗಿ ವಾಹಿನಿಯೊಂದು ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ವಿರುದ್ಧ ಅವಹೇಳನಕಾರಿ ಸುದ್ದಿ ಪ್ರಕಟಿಸಿ ರಕ್ಷಿತ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನೊಂದೆಡೆ ರಕ್ಷಿತ್ ವಿರುದ್ಧದ ಆರೋಪಗಳ ಬಗ್ಗೆ ಸ್ನೇಹಿತ ಪುಷ್ಕರ್ ಮಲ್ಲಿಕಾರ್ಜುನಯ್ಯ ಮರ್ಯಾದಿ ಕೊಟ್ಟು ತೆಗೆದುಕೊಳ್ಳುವ ಸಂಗತಿ ಎಂಬ ತಲೆಬರಹದಡಿ ಪೋಸ್ಟ್ ಹಾಕಿದ್ದಾರೆ.

ರಕ್ಷಿತ್ ಶೆಟ್ಟಿ ವೈಯಕ್ತಿಕ ವಿಚಾರಗಳನ್ನು ಇಟ್ಟುಕೊಂಡು ಕನ್ನಡದ ಖಾಸಗಿ ಸುದ್ದಿವಾಹಿನಿ ಅವಹೇಳನಕಾರಿಯಾಗಿ ಸುದ್ದಿ ಮಾಡಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ವಾಹಿನಿಯೇ ಸತ್ಯವನ್ನು ಪ್ರಸಾರ ಮಾಡಬೇಕು. ಇಲ್ಲದಿದ್ದಲ್ಲಿ ಜುಲೈ 11 ರಂದು ಸತ್ಯವನ್ನು ನಾನೇ ಹೇಳುತ್ತೇನೆ ಎಂದು ರಕ್ಷಿತ್ ಶೆಟ್ಟಿ ಹೇಳಿದ್ದರು.

ಇದರ ಬೆನ್ನಲ್ಲೇ ರಕ್ಷಿತ್ ಬಗ್ಗೆ ಪ್ರಸಾರವಾಗಿರೋ ಸುದ್ದಿ  ನೋಡಿದ ಸ್ನೇಹಿತ ಪುಷ್ಕರ್ ಮಲ್ಲಿಕಾರ್ಜುನಯ್ಯ ಒಂದು ಸುದೀರ್ಘ ಪೋಸ್ಟ್ ಹಾಕಿದ್ದಾರೆ.

ನಮ್ಮ ಚಿತ್ರರಂಗಕ್ಕೆ ಇದು ಪರೀಕ್ಷೆ ಕಾಲ . ಇಂತಹ ಸಂದರ್ಭದಲ್ಲಿ  ಖಾಸಗಿ ವಾಹಿನಿ ರಕ್ಷಿತ್ ಬಗ್ಗೆ ಪ್ರಸಾರ ಮಾಡಿರೋ ಸುದ್ದಿ ಆಘಾತಕಾರಿಯಾಗಿದೆ. ತಮ್ಮ ಸ್ವಂತ ಪರಿಶ್ರಮದಿಂದ ಸ್ಯಾಂಡಲ್ ವುಡ್ ಗೆ ತಮ್ಮದೇ ಆದ ಕೊಡುಗೆ ನೀಡಿದ ರಕ್ಷಿತ್ ಶೆಟ್ಟಿ ಬಗ್ಗೆ ಈ ರೀತಿ ಸುದ್ದಿ ಮಾಡಿರುವುದು ಸರಿಯಲ್ಲ.

ಅಷ್ಟೇ ಅಲ್ಲ ಸುದ್ದಿವಾಹಿನಿ ಪ್ರಸಾರ ಮಾಡಿರುವ ಸಂಗತಿಗಳಲ್ಲಿ ಸತ್ಯ ಯಾವುದೆಂದು ಸ್ಪಷ್ಟ ಪಡಿಸಲು ಸೋಷಿಯಲ್ ಮೀಡಿಯಾ ಬಳಸುವಂತಾಗಿರುವುದು ದುರದೃಷ್ಟಕರ ಎಂದು ಪುಷ್ಕರ್ ಮಲ್ಲಿಕಾರ್ಜುನಯ್ಯ ಹೇಳಿದ್ದಾರೆ.

ಅಷ್ಟೇ ಅಲ್ಲ ಮಾಧ್ಯಮಗಳಿಗೂ ಸಾಕಷ್ಟು ಸಾಮಾಜಿಕ ಜವಾಬ್ದಾರಿ ಇದೆ. ನಾವು ಮರ್ಯಾದೆ ಕೊಟ್ಟರಷ್ಟೇ ನಮಗೆ ಮರ್ಯಾದೆ ಸಿಗುತ್ತದೆ ಎಂಬುದನ್ನು ನಾವು ಅರಿಯಬೇಕು ಎಂದು ಮಲ್ಲಿಕಾರ್ಜುನ್ ಪೋಸ್ಟ್ ನಲ್ಲಿ ಎಚ್ಚರಿಸಿದ್ದಾರೆ.

ಗೋಧಿಬಣ್ಣ ಸಾಧಾರಣ ಮೈಕಟ್ಟು ಯಿಂದ, ಶ್ರೀಮನ್ನಾರಾಯಣ ತನಕ ನಾವಿಬ್ಬರೂ ಒಟ್ಟಿಗೆ ಕೆಲಸ ಮಾಡಿದ್ದೇವೆ. ಲಾಭ-ನಷ್ಟದಾಚೆಗೆ ಸ್ನೇಹ ಬೇರೆಯದೇ ಬಂಧ. ರಕ್ಷಿತ್ ರಂತಹ ವ್ಯಕ್ತಿ ಬಗ್ಗೆ ಯಾವುದೇ ಸುದ್ದಿ ವಾಹಿನಿ ಇಂತಹ ಸುದ್ದಿ ಪ್ರಕಟಿಸಿದರೇ, ನಾನು ವಿರೋಧಿಸುತ್ತೇನೆ ಎಂದು ಪುಷ್ಕರ್ ಪೋಸ್ಟ್ ನಲ್ಲಿ ಬರೆದಿದ್ದಾರೆ.  ಸುಳ್ಳು  

RELATED ARTICLES

Most Popular