ಭಾನುವಾರ, ಏಪ್ರಿಲ್ 27, 2025
HomeBreakingSudeep: ಜುಲೈ 6 ಕಿಚ್ಚ ಹುಚ್ಚನಾದ ದಿನ….! 20 ವರ್ಷಗಳ ಹಿಂದಿನ ನೆನಪು ಹಂಚಿಕೊಂಡ ಸುದೀಪ್…!!

Sudeep: ಜುಲೈ 6 ಕಿಚ್ಚ ಹುಚ್ಚನಾದ ದಿನ….! 20 ವರ್ಷಗಳ ಹಿಂದಿನ ನೆನಪು ಹಂಚಿಕೊಂಡ ಸುದೀಪ್…!!

- Advertisement -

ಒಬ್ಬೊಬ್ಬ ನಟನ ಬದುಕಿನಲ್ಲೂ ಮರೆಯಲಾಗದ ದಿನ ಇದ್ದೇ ಇರುತ್ತೆ. ಸ್ಯಾಂಡಲ್ ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬದುಕಿನ ಅಂತಹ ಮರೆಯಲಾಗದ ದಿನಗಳಲ್ಲಿ ಜುಲೈ 6 ಕೂಡ ಒಂದು. 20 ವರ್ಷಗಳ ಹಿಂದೆ ಇದೇ ದಿನದಂದು ಸುದೀಪ್ ಬಣ್ಣದ ಬದುಕನ್ನೇ ಬದಲಾಯಿಸಿ ಹುಚ್ಚ ಸಿನಿಮಾ ರಿಲೀಸ್ ಆಗಿತ್ತು.

ತಾಯವ್ವ ಸಿನಿಮಾದ ಮೂಲಕ ಬಣ್ಣದ ಜಗತ್ತಿಗೆ ಕಾಲಿಟ್ಟ ಸುದೀಪ್ ಗೆ ತಕ್ಕಮಟ್ಟಿಗೆ ಬ್ರೇಕ್ ಕೊಟ್ಟಿದ್ದು, ಸ್ಪರ್ಶ ಸಿನಿಮಾ. ಆದರೆ 2001 ರ ಜುಲೈ 6 ರಂದು ರಿಲೀಸ್ ಆದ ಹುಚ್ಚ ಸಿನಿಮಾ ಸುದೀಪ್ ಬದುಕನ್ನೇ ಬದಲಾಯಿಸಿತು. ಸುದೀಪ್ ಒಳಗಿದ್ದ ಒಬ್ಬ ಶ್ರೇಷ್ಠ ನಟನನ್ನು ಸ್ಯಾಂಡಲ್ ವುಡ್ ಮೂಲಕ ಸಿನಿಪ್ರಿಯರಿಗೆ ತಲುಪಿಸಿದ್ದೇ ಹುಚ್ಚ ಸಿನಿಮಾ.

ಸರಿಯಾಗಿ 20 ವರ್ಷಗಳ ಹಿಂದೆ ಜುಲೈ 6 ರಂದು ಹುಚ್ಚ ಸಿನಿಮಾ ತೆರೆಕಂಡಿತ್ತು. ಅಷ್ಟೇ ಅಲ್ಲ ಸುದೀಪ್ ದೈತ್ಯ ಪ್ರತಿಭೆಯ ಅಭಿನಯ ಕಂಡ ಸಿನಿರಂಗ  ಮೆಚ್ಚಿಕೊಂಡಿತ್ತು. ಅಲ್ಲಿಯವರೆಗೆ ಕೇವಲ ಸುದೀಪ್ ಆಗಿದ್ದ ನಟ, ಬಳಿಕ ಕಿಚ್ಚ ಸುದೀಪ್ ಎಂದೇ ಖ್ಯಾತಿ ಗಳಿಸಿಕೊಂಡರು.

ತಮಿಳಿನಲ್ಲಿ ತೆರೆಕಂಡಿದ್ದ ಸೇತು ಸಿನಿಮಾವನ್ನು ಅಂದಿನ ಹಿಟ ನಿರ್ದೇಶಕ ಓಂ ಪ್ರಕಾಶ್ ರಾವ್ ಸುದೀಪ್ ಗಾಗಿ ಹುಚ್ಚ ಎಂದು ರಿಮೇಕ್ ಮಾಡಿದ್ದರು. ಸುದೀಪ್ ಗೆ ಸರಿಹೊಂದುವ ಪಾತ್ರದ ಮೂಲಕ  ಚಿತ್ರ ಗೆದ್ದರೇ, ರಾಜೇಶ್ ರಾಮನಾಥ ನೀಡಿದ ಸಂಗೀತ ಹಾಡುಗಳಿಗೆ ಜೀವತುಂಬಿತ್ತು.

ಈ ಸಿನಿಮಾಗೆ ನಟ ಸುದೀಪ್ ಸೌತ್ ಫಿಲ್ಮ ಫೇರ್ ಸಮಾರಂಭದಲ್ಲಿ ಸುದೀಪ್ ಉತ್ತಮ ನಟ ಅವಾರ್ಡ್ ಪಡೆದುಕೊಂಡರು.

ಕೇವಲ ಸುದೀಪ್ ಮಾತ್ರವಲ್ಲ ಈ ಸಿನಿಮಾ ನಟಿ ರೇಖಾಗೂ ಬ್ರೇಕ್ ನೀಡಿತ್ತು.

ಇನ್ನು ಹುಚ್ಚ ಮಾತ್ರವಲ್ಲ ಜುಲೈ 6, 2012 ರಂದು ರಿಲೀಸ್  ಆದ ಈಗ ಸಿನಿಮಾ ಕೂಡ ಸುದೀಪ್ ಗೆ ಹೆಸರು ತಂದುಕೊಟ್ಟಿದ್ದು, ಟಾಲಿವುಡ್ ಸೇರಿದಂತೆ ಈಗ ಬಹುಭಾಷಾ ಸ್ಟಾರ್ ನಟರಾಗಿ ಸುದೀಪ್ ಬೆಳೆದುನಿಂತಿದ್ದಾರೆ.

RELATED ARTICLES

Most Popular