ತಣ್ಣನೆಯ ಐಸ್ ಕ್ರೀಂನಂತೆ ಸವಿಯಾದ ಗಾಯನದಿಂದ ರಿಯಾಲಿಟಿ ಶೋ ಗೆದ್ದು ಸ್ಯಾಂಡಲ್ ವುಡ್ ಸ್ಟಾರ್ ನಟರ ರೋಮ್ಯಾನ್ಸ್ ಗೆ ಧ್ವನಿಯಾದ ಯುವಗಾಯಕ ಸಂಚಿತ್ ಹೆಗ್ಡೆ, ಬಹುಭಾಷಾ ನಟ ಕಮಲ್ ಹಾಸನ್ ಪುತ್ರಿ ಹಾಗೂ ನಟಿ ಶೃತಿ ಹಾಸನ್ ಜೊತೆ ಲಿಪ್ ಲಾಕ್ ಮಾಡಿ ಸ್ಯಾಂಡಲ್ ವುಡ್ ಗೆ, ಕನ್ನಡಗರಿಗೆ ಶಾಕ್ ನೀಡಿದ್ದಾರೆ.

ಚಾಕ್ಲೆಟ್ ಬಾಯ್ ಸಂಚಿತ್ ಹೆಗ್ಡೆ ಶೃತಿ ಜೊತೆ ಲವ್ವಾ ಅಂತ ಕೇಳಬೇಡಿ. ಇಷ್ಟಕ್ಕೂ ಸಂಚಿತ್ ಶೃತಿ ಜೊತೆ ಲಿಪ್ ಲಾಕ್ ಮಾಡಿರೋದು ರಿಯಲ್ ನಲ್ಲಿ ಅಲ್ಲ ರೀಲ್ ನಲ್ಲಿ. ಹೌದು ಗಾಯಕ ಸಂಚಿತ್ ಹೆಗ್ಡೆ ನಟರಾಗಿ ಬಡ್ತಿ ಪಡೆದಿದ್ದು, ತೆಲುಗು ಸಿನಿಮಾದ ಮೂಲಕ ನಟನೆಯಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
ಪಿಟ್ಟ ಕತಲು ಅನ್ನೋ ತೆಲುಗು ಸಿನಿಮಾದಲ್ಲಿ ಸಂಚಿತ್ ಹೆಗ್ಡೆ ಬಣ್ಣ ಹಚ್ಚಿದ್ದು, ನಾಲ್ವರು ನಿರ್ದೇಶಕರು ಈ ಚಿತ್ರಕ್ಕೆ ಆಕ್ಷ್ಯನ್ ಕಟ್ ಹೇಳಿದ್ದಾರೆ.

ಸಂಚಿತ್ ನಟನೆಯ ಟೀಸರ್ ಬಿಡುಗಡೆಯಾಗಿದ್ದು, ಮೊದಲ ಸಿನಿಮಾದಲ್ಲಿ ಶೃತಿ ಹಾಸನ್ ಜೊತೆ ಲಿಪ್ ಲಾಕ್ ಮಾಡಿರೋ ಸಂಚಿತ್ ಅಭಿಮಾನಿಗಳಿಗೆ ಹಾಗೂ ಸ್ಯಾಂಡಲ್ ವುಡ್ ಮಂದಿಗೆ ಶಾಕ್ ನೀಡಿದ್ದಾರೆ.

ಮಹಾನಟಿ ಸಿನಿಮಾದ ನಿರ್ದೇಶಕ ನಾಗ್ ಅಶ್ವಿನ್ ಸಂಚಿತ್ ನಟನೆಗೆ ನಿರ್ದೇಶಕರಾಗಿದ್ದು, ಸಾಕಷ್ಟು ರೋಮ್ಯಾಂಟಿಕ್ ಸೀನ್ ಗಳಲ್ಲಿ ಸಂಚಿತ್ ನಟಿಸಿದ್ದಾರೆ. ಜಗಪತಿ ಬಾಬು, ಶೃತಿ ಹಾಸನ್, ಅಮೌಲಾ ಪೌಲ್ ಹಾಗೂ ಲಕ್ಷ್ಮೀ ಮಂಚು ಅಭಿನಯದ ಈ ಚಿತ್ರ ಫೆ.19 ರಂದು ಒಟಿಟಿಯಲ್ಲಿ ರಿಲೀಸ್ ಆಗಲಿದೆ.

ಇದುವರೆಗೂ ಮಧುರ ಗಾಯನದ ಮೂಲಕ ಮನತಟ್ಟಿದ್ದ ಸಂಚಿತ್ ಹೆಗ್ಡೆ ಈಗ ನಟನೆಯಿಂದ ಹೊಸ ಸಾಹಸ ಆರಂಭಿಸಿದ್ದು, ಯಶಸ್ವಿಯಾಗಲಿ ಅಂತ ನಾವೆಲ್ಲ ಹಾರೈಸೋಣ.