ಸ್ಯಾಂಡಲ್ ವುಡ್ ನ ನವರಸ ನಾಯಕ ಜಗ್ಗೇಶ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಜಗ್ಗೇಶ್ ಹುಟ್ಟುಹಬ್ಬಕ್ಕೆ ಸ್ಪೆಶಲ್ ಗಿಫ್ಟ್ ನೀಡಿರೋ ತೋತಾಪುರಿ ಚಿತ್ರ ಪೋಸ್ಟರ್ ವೊಂದನ್ನು ರಿಲೀಸ್ ಮಾಡಿದೆ.

ಗಾಂಧಿನಗರದಲ್ಲಿ ವಿಭಿನ್ನ ಟೈಟಲ್ ಜೊತೆ ಸಖತ್ ಕ್ಯೂರಿಯಾಸಿಟಿ ಮೂಡಿಸಿರೋ ತೋತಾಪುರಿ ಚಿತ್ರ ಈಗಾಗಲೇ ಶೂಟಿಂಗ್ ಮುಗಿಸಿದ್ದು, ಜಗ್ಗೇಶ್ ಬರ್ತಡೇ ದಿನ ಪೋಸ್ಟರ್ ರಿಲೀಸ್ ಮಾಡೋ ಮೂಲಕ ಚಿತ್ರದ ಪ್ರಚಾರ ಆರಂಭಿಸಿದೆ.

ನೀರದೋಸೆ ಚಿತ್ರದ ಮೂಲಕ ವಿಭಿನ್ನ ಕಥಾನಕವೊಂದನ್ನು ಅಭಿಮಾನಿಗಳಿಗೆ ಉಣಬಡಿಸಿದ್ದ ನಿರ್ದೇಶಕ ವಿಜಯ್ ಪ್ರಸಾದ್ ಹಾಗೂ ಜಗ್ಗೇಶ್ ಜೋಡಿ ಮತ್ತೊಮ್ಮೆ ತೋತಾಪುರಿ ಮೂಲಕ ಒಂದಾಗಿದೆ.

ಹಾಸ್ಯ ರಸಾಯನದ ಜೊತೆ ಪ್ರೇಕ್ಷಕರಿಗೆ ಸಖತ್ ಕಚಗುಳಿ ಇಡಲಿದೆ ತೋತಾಪುರಿ ಅನ್ನೋ ನೀರಿಕ್ಷೆ ಇದೆ.

ತೋತಾಪುರಿ ಸಿನಿಮಾ ಎರಡು ಸಿಕ್ವೆಲ್ ಗಳಲ್ಲಿ ತೆರೆಗೆ ಬರಲಿದೆ ಎನ್ನಲಾಗಿದ್ದು, ಲಾಕ್ ಡೌನ್ ಗೂ ಮೊದಲೇ ಒಂದು ಹಂತದ ಶೂಟಿಂಗ್ ಪೂರ್ಣಗೊಂಡಿತ್ತು.

ಈಗ ಎರಡನೇ ಹಂತದ ಶೂಟಿಂಗ್ ಕೂಡ ಪೂರ್ಣಗೊಂಡಿದ್ದು, ಸಧ್ಯದಲ್ಲೇ ರಿಲೀಸ್ ಡೇಟ್ ಅನೌನ್ಸ್ ಆಗೋ ಸಾಧ್ಯತೆ ಇದೆ.

ಸುರೇಶ್ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಸುರೇಶ್ ಚಿತ್ರ ನಿರ್ಮಿಸಿದ್ದು, ಅನೂಪ್ ಸೀಳಿನ್ ಮ್ಯೂಸಿಕ್ ಮತ್ತು ನಿರಂಜನಬಾಬು ಕ್ಯಾಮರಾ ವರ್ಕ್ ಇದೆ. ಜಗ್ಗೇಶ್ ಗೆ ಮಾದಕ ಬೆಡಗಿ ಸುಮನ್ ರಂಗನಾಥ್,ಡಾಲಿ ಧನಂಜಯ್,ಅದಿತಿ ಪ್ರಭುದೇವ್, ವೀಣಾ ಸುಂದರ್, ದತ್ತಣ್ಣ ಸೇರಿದಂತೆ ಹಲವರು ಸಾಥ್ ನೀಡಿದ್ದಾರೆ. ಬಹಳ ವರ್ಷಗಳ ಬಳಿಕ ಮತ್ತೆ ಜಗ್ಗೇಶ್ ರೈತನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.