ಮಂಗಳವಾರ, ಜೂನ್ 17, 2025
HomeBreakingಎಲ್ಲದರಲ್ಲೂ ಡಿಫ್ರೆಂಟ್ ರಿಯಲ್ ಸ್ಟಾರ್….! ಸಿಟಿ ಬಿಟ್ಟು ಚುಂಚನಕೊಪ್ಪದಲ್ಲಿ ಹೊಸ ಮನೆಕಟ್ಟಿದ ಉಪ್ಪಿ…!!

ಎಲ್ಲದರಲ್ಲೂ ಡಿಫ್ರೆಂಟ್ ರಿಯಲ್ ಸ್ಟಾರ್….! ಸಿಟಿ ಬಿಟ್ಟು ಚುಂಚನಕೊಪ್ಪದಲ್ಲಿ ಹೊಸ ಮನೆಕಟ್ಟಿದ ಉಪ್ಪಿ…!!

- Advertisement -

ಸಾಲು ಸಾಲು ಸಿನಿಮಾ ಹಾಗೂ ರಾಜಕೀಯ ಎರಡರಲ್ಲೂ ಬುದ್ಧಿವಂತಿಕೆಯಿಂದ ಹೆಜ್ಜೆ ಇಡ್ತಿರೋ ರಿಯಲ್ ಸ್ಟಾರ್ ಉಪೇಂದ್ರ ಕೃಷಿಯತ್ತ ಮುಖಮಾಡಿದ್ದು ಎಲ್ಲರಿಗೂ ಗೊತ್ತಿರೋ ವಿಚಾರ. ಇದರ ಜೊತೆಗೆ ಉಪೇಂದ್ರ ಸಿಟಿಯಿಂದ ದೂರವಾಗಿ ನಗರದ ಹೊರವಲಯದಲ್ಲಿ ಅದ್ದೂರಿ ಮನೆ ಕಟ್ಟಿಸಿ ಅಲ್ಲೇ ವಾಸ್ತವ್ಯ ಹೂಡಲು ಸಿದ್ಧವಾಗಿದ್ದಾರೆ.

Upendra 1

ಎಲ್ಲರಿಗಿಂತ ಭೀನ್ನವಾಗಿ ಯೋಚಿಸಿ ಅದನ್ನು ಕಾರ್ಯರೂಪಕ್ಕೆ ತರೋ ಉಪೇಂದ್ರ ಮನೆ ಕಟ್ಟೋ ವಿಚಾರದಲ್ಲೂ ತಾವೇ ಬೇರೆ ತಮ್ಮ ಸ್ಟೈಲೇ ಬೇರೆ ಎಂದಿದ್ದಾರೆ. ಬೆಂಗಳೂರು ಹೊರವಲಯದ ತಾವರೆಕೆರೆಯ ಚುಂಚನಕೊಪ್ಪ ಬಳಿ ಉಪೇಂದ್ರ ಜಾಗ ಖರೀಸಿದ್ದು, ಅಲ್ಲೇ ನೂತನವಾಗಿ ಭರ್ಜರಿ ಬಂಗ್ಲೆ ನಿರ್ಮಿಸಿದ್ದಾರೆ.

ಉಳಿದೆಲ್ಲ ನಟ-ನಟಿಯರಿಗಿಂತ ಭಿನ್ನವಾಗಿ ಆರಂಭದಿಂದಲೂ ತನ್ನ ತಂದೆ-ತಾಯಿ ಜೊತೆಗೇ ವಾಸವಾಗಿರುವ ಉಪೇಂದ್ರ್ ಅದ್ದೂರಿಯಾಗಿ ಮನೆ ನಿರ್ಮಿಸಿ ಗ್ರ್ಯಾಂಡ್ ಗೃಹಪ್ರವೇಶ ಕೂಡ ಮಾಡಿದ್ದಾರೆ. ಇನ್ಮುಂದೆ ತಮ್ಮ ಸಂಪೂರ್ಣ ಕುಟುಂಬದ ಜೊತೆ ಇಲ್ಲೇ ವಾಸವಾಗಲಿದ್ದಾರಂತೆ.

ಮನೆಯನ್ನು ಉಪ್ಪಿ ಹಾಗೂ ಅವರ ಪತ್ನಿ ಪ್ರಿಯಾಂಕಾ ಆಯ್ಕೆಯಂತೇ ವಿಶಾಲವಾಗಿ ಹಾಗೂ ಸುಂದರವಾಗಿ ನಿರ್ಮಿಸಲಾಗಿದ್ದು, ಎಲ್ಲ ವ್ಯವಸ್ಥೆಗಳನ್ನು ಒಳಗೊಂಡ ಮನೆ ಇದಾಗಿದೆಯಂತೆ.

ಸಧ್ಯ ಕಬ್ಜ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಕೊಂಡಿರೋ ಉಪ್ಪಿ, ಇದೇ ಚಿತ್ರದಲ್ಲಿ ಸುದೀಪ್ ಕೂಡ ನಟಿಸಲಿದ್ದಾರೆ ಅನ್ನೋ ಸಿಹಿಸುದ್ದಿಯನ್ನು ಇತ್ತೀಚಿಗೆ ನೀಡಿದ್ದರು. ಅಷ್ಟೇ ಅಲ್ಲ ಕಬ್ಜದಲ್ಲಿ ಸ್ವತಃ ಉಪ್ಪಿ ಕೂಡ ನ್ಯೂ ಗೆಟಪ್ ನಲ್ಲಿ ಮಿಂಚುತ್ತಿದ್ದು, ಪೋಟೋ ವೈರಲ್ ಆಗಿದೆ. ‘

Upendra

ಇದರೊಂದಿಗೆ ಪ್ರಜಾಕೀಯ ಪಕ್ಷವನ್ನು ಮುನ್ನಡೆಸುತ್ತಿರುವ ಉಪೇಂದ್ರ, ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳನ್ನು ಅಭಿನಂದಿಸೋಕೆ ಹಳ್ಳಿಗಳಿಗೂ ತೆರಳಿ ಗಮನ ಸೆಳೆದಿದ್ದರು.  

RELATED ARTICLES

Most Popular