ಚಿತ್ರನಿರ್ಮಾಣ,ನಿರ್ದೇಶನ,ರಾಜಕೀಯ ಹಾಗೂ ನಟನೆ ಹೀಗೆ ಎಲ್ಲ ಕ್ಷೇತ್ರದಲ್ಲೂ ಸಕ್ರಿಯವಾಗಿರುವ ನಟ ಉಪೇಂದ್ರ ಸದ್ಯ ಕೊರೋನಾ ಸಂತ್ರಸ್ಥರ ಸಹಾಯಕ್ಕೆ ಧಾವಿಸಿದ್ದಾರೆ. ಈ ಮಧ್ಯೆ ಸೋಷಿಯಲ್ ಮೀಡಿಯಾದಲ್ಲಿ ಹೊಸತೊಂದು ದಾಖಲೆಗೂ ಉಪೇಂದ್ರ ಪಾತ್ರರಾಗಿದ್ದಾರೆ.

ಸ್ಯಾಂಡಲ್ ವುಡ್ ನಲ್ಲಿ ಸೋಷಿಯಲ್ ಮೀಡಿಯಾವನ್ನು ಸಕ್ರಿಯವಾಗಿ ಬಳಸುವ ಕೆಲವೇ ಕೆಲವು ನಟರಲ್ಲಿ ಒಬ್ಬರಾಗಿರುವ ಉಪೇಂದ್ರ, ಟ್ವಿಟರ್ ನಲ್ಲಿ 1 ಮಿಲಿಯನ್ ಫಾಲೋವರ್ಸ್ ಗಳನ್ನು ಹೊಂದಿದ ಗೌರವಕ್ಕೆ ಪಾತ್ರರಾಗಿದ್ದಾರೆ.

ಟ್ವೀಟರ್ ನಲ್ಲಿ ಉಪೇಂದ್ರ 1 ಮಿಲಿಯನ್ ಫಾಲೋವರ್ಸ್ ಗಳನ್ನು ಹೊಂದಿದ್ದು, ಈ ಸಾಧನೆಗೆ ಕಾರಣವಾದ ಅಭಿಮಾನಿಗಳಿಗೆ ಉಪೇಂದ್ರ ಧನ್ಯವಾದ ಹೇಳಿದ್ದಾರೆ. ಸ್ಯಾಂಡಲವುಡ್ ನಲ್ಲಿ ಈ ಸಾಧನೆ ಗೈಯ್ದ ಎರಡನೇ ನಟ ಎಂಬ ಖ್ಯಾತಿಗೆ ಉಪೇಂದ್ರ ಭಾಜನರಾಗಿದ್ದಾರೆ.ಸ್ಯಾಂಡಲ್ ವುಡ್ ನಲ್ಲಿ ಅತಿ ಹೆಚ್ಚು ಹಿಂಬಾಲಕರನ್ನು ಹೊಂದಿರುವ ದಾಖಲೆ ಅಭಿನಯ ಚಕ್ರವರ್ತಿ ಸುದೀಪ್ ಹೆಸರಲ್ಲಿದೆ. ಎರಡನೇ ಸ್ಥಾನದಲ್ಲಿ ಉಪೇಂದ್ರ ಇದ್ದಾರೆ.

ಟ್ವೀಟರ್ ನಲ್ಲಿ ಸುದೀಪ್ 2.5 ಮಿಲಿಯನ್ ಪಾಲೋವರ್ಸ್ ಹೊಂದಿದ್ದರೇ, 1 ಮಿಲಿಯನ್ ಫಾಲೋವರ್ಸ್ ಜೊತೆ ಉಪೇಂದ್ರ ಎರಡನೇ ಸ್ಥಾನದಲ್ಲಿದ್ದಾರೆ. ಇನ್ನು 879 ಕೆ ಫಾಲೋವರ್ಸ್ ಹೊಂದಿರುವ ದರ್ಶನ್ ಮೂರನೇ ಸ್ಥಾನದಲ್ಲಿದ್ದಾರೆ.

ಕೊರೋನಾ ಎರಡನೇ ಅಲೆಯಲ್ಲಿ ಸಂಕಷ್ಟಕ್ಕಿಡಾಗಿರುವ ಸಿನಿ ಕಾರ್ಮಿಕರ ಸಹಾಯಕ್ಕೆ ಮುಂಧಾಗಿರುವ ನಟ ಉಪೇಂದ್ರ, ಉಪ್ಪಿ ಫೌಂಡೇಶನ್ ಮೂಲಕ ಸಿನಿ ಕಾರ್ಮಿಕರಿಗೆ ದಿನಸಿ ಪೊರೈಸುತ್ತಿದ್ದಾರೆ.

ಇದಲ್ಲದೇ ನಾಡಿನ ಹಲವು ನಟರು,ಉದ್ಯಮಿಗಳ ಸಹಾಯದಿಂದ ಕೊರೋನಾ ಸಂಕಷ್ಟದಲ್ಲಿ ನಲುಗಿದವರ ಸಹಾಯಕ್ಕೆ ಮುಂದಾಗಿದ್ದಾರೆ.