ಮಂಗಳವಾರ, ಏಪ್ರಿಲ್ 29, 2025
HomeBreakingಸಿನಿಅಂಗಳದಲ್ಲಿ ಕೆಜಿಎಫ್-2 ಮತ್ತೊಂದು ಸಾಧನೆ…! ದಾಖಲೆಯ ಮೊತ್ತಕ್ಕೆ ಮಾರಾಟವಾದ ಹಿಂದಿ ರೈಟ್ಸ್…!!

ಸಿನಿಅಂಗಳದಲ್ಲಿ ಕೆಜಿಎಫ್-2 ಮತ್ತೊಂದು ಸಾಧನೆ…! ದಾಖಲೆಯ ಮೊತ್ತಕ್ಕೆ ಮಾರಾಟವಾದ ಹಿಂದಿ ರೈಟ್ಸ್…!!

- Advertisement -

ಟಾಲಿವುಡ್,ಬಾಲಿವುಡ್,ಸ್ಯಾಂಡಲ್ವುಡ್,ಕಾಲಿವುಡ್ ಹೀಗೆ ಎಲ್ಲ ಚಿತ್ರರಂಗದಲ್ಲೂ ಈಗ ಕೆಜಿಎಫ್-2 ಹವಾ ಜೋರಾಗಿದೆ. ಟೀಸರ್ ನಿಂದ ಆರಂಭಿಸಿ ಚಿತ್ರದ ಡಬ್ಬಿಂಗ್ ಹಕ್ಕಿನ ತನಕ ಎಲ್ಲವೂ ಹೊಸ ದಾಖಲೆ ಬರೆಯುತ್ತಿದೆ. ತೆಲುಗಿನ ಬಳಿಕ ಹಿಂದಿಯಲ್ಲೂ ದಾಖಲೆ ಬೆಲೆಗೆ ಕೆಜಿಎಫ್-2 ಡಬ್ಬಿಂಗ್ ರೈಟ್ಸ್ ಮಾರಾಟವಾಗಿದೆ ಎಂಬ ಸುದ್ದಿ ಕೆಜಿಎಫ್-2 ಅಂಗಳದಿಂದ ಹೊರಬಿದ್ದಿದೆ.

ಕೆಜಿಎಫ್ ಚಿತ್ರವೂ ಹಿಂದಿಯಲ್ಲಿ ಡಬ್ಬಿಂಗ್ ಆಗಿ ಒಳ್ಳೆಯ ವೀಕ್ಷಕರನ್ನು ಸಂಪಾದಿಸಿ ಲಾಭ ಪಡೆದಿತ್ತು. ಈಗ ಕೆಜಿಎಫ್-2 ಹಿಂದಿ ರೈಟ್ಸ್ ಖರೀದಿಗೂ ಸಾಕಷ್ಟು ನಿರ್ಮಾಪಕರು ಮುಂದೇ ಬಂದಿದ್ದು, ಕೊನೆಗೆ ಕೆಜಿಎಫ್ ರೈಟ್ಸ್ ಖರೀದಿಸಿದ್ದ ಎಕ್ಸೆಲ್ ಎಂಟರಟೈನಮೆಂಟ್ ಸಂಸ್ಥೆಯೇ ಕೆಜಿಎಫ್-2 ಹಿಂದಿ ಡಬ್ಬಿಂಗ್ ರೈಟ್ಸ್ ಖರೀದಿಸಿದೆ.

ಬಾಲಿವುಡ್ ನಟ ಹಾಗೂ ನಿರ್ಮಾಪಕ ಫರಾನ್ ಅಖ್ತರ್ ಕೆಜಿಎಫ್-2 ರೈಟ್ಸ್ ನ್ನು ಪಡೆದುಕೊಂಡಿದ್ದು, ಇದಕ್ಕಾಗಿ ಬರೋಬ್ಬರಿ 90 ಕೋಟಿ ರೂಪಾಯಿ ವ್ಯಯಿಸಿದ್ದಾರೆ. 90 ಕೋಟಿ ರೂಪಾಯಿ ವೆಚ್ಚದಲ್ಲಿ ಕೆಜಿಎಫ್-2 ಹಕ್ಕು ಮಾರಾಟವಾಗಿದ್ದನ್ನು ಚಿತ್ರತಂಡ ಖಚಿತಪಡಿಸಿಲ್ಲ.ಆದರೆ ಮಾಧ್ಯಮಗಳು ಈ ವ್ಯವಹಾರವನ್ನು ವರದಿ ಮಾಡಿವೆ.

ಕೆಜಿಎಫ್-2 ಹಿಂದಿ ರೈಟ್ಸ್ ಮಾರಾಟವಾದ ಮೊತ್ತ ಕೆಜಿಎಫ್ ಚಿತ್ರದ ಮೂಲ ಬಜೆಟ್ ಗಿಂತಲೂ ಆಧಿಕ ಮೊತ್ತ ಎಂದು ಹೇಳಲಾಗುತ್ತಿದೆ. 2018 ರಲ್ಲಿ ಎಕ್ಸೆಲ್ ಎಂಟ್ರಟೇನ್ಮೆಂಟ್ ಕೆಜಿಎಫ್ ಚಿತ್ರವನ್ನು ಖರೀದಿಸಿ ಹಿಂದಿ ಡಬ್ಬಿಂಗ್ ಬಿಡುಗಡೆ ಮಾಡಿದ್ದು, ದಾಖಲೆಯ ಮೊತ್ತಅಂದ್ರೆ ಅಂದಾಜು 40 ಕೋಟಿ ರೂಪಾಯಿ ಆದಾಯ ಗಳಿಸಿತ್ತು ಎನ್ನಲಾಗಿದೆ.

ಕೆಜಿಎಫ್ ನಲ್ಲಿ ಯಾವುದೇ ಹೊರಭಾಷೆಯ ನಟರೂ ಇಲ್ಲದೇ ಇದ್ದರೂ ಹಿಂದಿಯಲ್ಲಿ 40 ಕೋಟಿ ಗಳಿಸುವ ಮೂಲಕ ಕನ್ನಡ ಡಬ್ಬಿಂಗ್ ಚಿತ್ರವೊಂದರ ಸಾರ್ವಕಾಲಿಕ ದಾಖಲೆ ನಿರ್ಮಿಸಿತ್ತು. ಕೆಜಿಎಫ್-2 ಸಂಜಯ್ ದತ್ ಹಾಗೂ ರವೀನಾ ಟಂಡನ್ ಕೂಡ ಇರೋದರಿಂದ  ಚಿತ್ರದ ಗಳಿಕೆ ದುಪ್ಪಟ್ಟಾಗುವ ನೀರಿಕ್ಷೆಯಲ್ಲಿ ಎಕ್ಸಲ್ 90 ಕೋಟಿ ನೀಡಿ ಕೆಜಿಎಫ್-2 ಹಕ್ಕು ತನ್ನದಾಗಿಸಿಕೊಂಡಿದೆ.

ಹಿಂದಿಯಲ್ಲಿ ಮಾತ್ರವಲ್ಲ ತೆಲುಗಿನಲ್ಲೂ ಕೆಜಿಎಫ್-2 ದಾಖಲೆಯ ಹಣಕ್ಕೆ ಮಾರಾಟವಾಗಿದ್ದು, ಕೆಜಿಎಫ್ ಖರೀದಿಸಿದ್ದ ವಾರಾಹಿ ಸಂಸ್ಥೆ 60 ಕೋಟಿ ರೂಪಾಯಿಗೆ ಕೆಜಿಎಫ್-2 ಖರೀದಿಸಿದೆ.

RELATED ARTICLES

Most Popular