ಭಾನುವಾರ, ಏಪ್ರಿಲ್ 27, 2025
HomeBreakingವಿದೇಶದಲ್ಲಿ ಕನ್ನಡದ ಗಾಳಿಪಟ…! ಗೋಲ್ಡನ್ ಸ್ಟಾರ್ ಹಂಚಿಕೊಂಡ್ರು ಸ್ಪೆಶಲ್ ಪೋಟೋ..!

ವಿದೇಶದಲ್ಲಿ ಕನ್ನಡದ ಗಾಳಿಪಟ…! ಗೋಲ್ಡನ್ ಸ್ಟಾರ್ ಹಂಚಿಕೊಂಡ್ರು ಸ್ಪೆಶಲ್ ಪೋಟೋ..!

- Advertisement -

ಸ್ಯಾಂಡಲ್ ವುಡ್ ನಲ್ಲಿ ಗಾಳಿಪಟದಂತಹ ಸದಭಿರುಚಿಯ ಚಿತ್ರ ನೀಡಿದ ಗೋಲ್ಡನ್ ಸ್ಟಾರ್ ಗಣೇಶ ವಿದೇಶದಲ್ಲೂ ಗಾಳಿಪಟ ಹಾರಿಸಿ ಗಮನಸೆಳೆದಿದ್ದಾರೆ. ಸದ್ಯ ಕಜಕಿಸ್ತಾನದಲ್ಲಿ ಗಾಳಿಪಟ-2 ಚಿತ್ರದ ಶೂಟಿಂಗ್ ವೇಳೆ ಸ್ಪೆಶಲ್ ಗಾಳಿಪಟ ಹಾರಿಸಿದ ಗಣೇಶ್ ಪೋಟೋ ಶೇರ್ ಮಾಡಿದ್ದಾರೆ.

ಯೋಗರಾಜ್ ಭಟ್ ನಿರ್ದೇಶನದ ಗಾಳಿಪಟ-2 ಸಿನಿಮಾ ಶೂಟಿಂಗ್ ಗಾಗಿ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಚಿತ್ರತಂಡ ಕಜಕಿಸ್ತಾನದಲ್ಲಿ ಬೀಡುಬಿಟ್ಟಿದೆ. ಅಲ್ಲಿ ಶೂಟಿಂಗ್ ನಡುವಿನ ಬ್ರೇಕ್ ನಲ್ಲಿ ಗಣೇಶ್ ಗಾಳಿಪಟ ಉತ್ಸವದಲ್ಲಿ ಪಾಲ್ಗೊಂಡು ಕೈಟ್ ಹಾರಿಸಿ ಖುಷಿ ಪಟ್ಟಿದ್ದಾರೆ.

ಇಷ್ಟಕ್ಕೂ ಗಣೇಶ ವಿಶೇಷವಾದ ಗಾಳಿಪಟವೊಂದನ್ನು ಹಾರಿಸಿದ್ದಾರೆ. ತಮ್ಮ ಪುತ್ರನ ಪೋಟೋ ಇರುವ ಗಾಳಿಪಟ ಹಾರಿಸಿದ ಗಣೇಶ ಪೋಟೋವನ್ನು ಟ್ವೀಟರ್ ನಲ್ಲಿ ಶೇರ್ ಮಾಡಿದ್ದಾರೆ.

ಫೆಬ್ರವರಿ ಮೂರನೇ ವಾರ ಗಾಳಿಪಟ-2 ಚಿತ್ರತಂಡ ಕಜಕಿಸ್ತಾನಕ್ಕೆ ತೆರಳಿದ್ದು, ದೂದಪೇಡ್ ದಿಗಂತ, ಶರ್ಮಿಳಾ ಮಾಂಡ್ರೆ, ಸಂಯುಕ್ತಾ ಮೆನನ್, ವೈಭವಿ ಶಾಂಡಿಲ್ಯ ಕೂಡ ಜೊತೆಗಿದ್ದಾರೆ.

ಶೂಟಿಂಗ್ ಮಧ್ಯೆ ಅಲ್ಲಿನ ಪೋಟೋ ವಿಡಿಯೋಗಳನ್ನು ಹಂಚಿಕೊಳ್ಳುತ್ತ ಕಾಲ ಕಳೆಯುವ ಗಣೇಶ್ ಮೊನ್ನೆಯಷ್ಟೇ ಕಾರಿನಲ್ಲಿ ಸಾಗುವಾಗ ಹಿಮಾವೃತವಾದ ರಸ್ತೆಯೊಂದರ ವಿಡಿಯೋವನ್ನು ಅಭಿಮಾನಿಗಳ ಜೊತೆ ಶೇರ್ ಮಾಡಿದ್ದರು.

RELATED ARTICLES

Most Popular