ಸೋಮವಾರ, ಏಪ್ರಿಲ್ 28, 2025
HomeBreakingಸ್ಯಾಂಡಲ್ ವುಡ್ ಗೆ ದೊಡ್ಮನೆ ಕುಡಿ ಎಂಟ್ರಿ…! ಡಾ.ರಾಜ್ ಮೊಮ್ಮಗನ ಸ್ವಾಗತಕ್ಕೆ ಭರ್ಜರಿ ಸಿದ್ಧತೆ..!!

ಸ್ಯಾಂಡಲ್ ವುಡ್ ಗೆ ದೊಡ್ಮನೆ ಕುಡಿ ಎಂಟ್ರಿ…! ಡಾ.ರಾಜ್ ಮೊಮ್ಮಗನ ಸ್ವಾಗತಕ್ಕೆ ಭರ್ಜರಿ ಸಿದ್ಧತೆ..!!

- Advertisement -

ಡಾ.ರಾಜ್ ಕುಮಾರ್. ಚಂದನವನದ ಹೆಮ್ಮೆಯ ನಾಯಕ. ನಟ ಸಾರ್ವಭೌಮ. ಹೆಸರಿಗೆ ತಕ್ಕಂತೆ ರಾಜನಾಗಿ ಮೆರೆದ ಡಾ.ರಾಜ್ ಕುಮಾರ್ ಬಳಿಕ ಅವರ ಪುತ್ರರು ಇಂಡಸ್ಟ್ರಿಯಲ್ಲಿ ರಾಜರಂತೆ ಮೆರೆದರು. ಈಗ ದೊಡ್ಮನೆಯ ಮೂರನೇ ತಲೆಮಾರಿನ ಎರಡನೇ ಕುಡಿ ಕಲಾಸೇವೆಗೆ ಅಣಿಯಾಗಿದ್ದು, ಯುವರಾಜ್ ನ ಸ್ವಾಗತಕ್ಕೆ ಸ್ಯಾಂಡಲ್ ವುಡ್ ಸಿದ್ಧವಾಗಿದೆ.

ರಾಜ್ ಕುಮಾರ್ ಅವರ ಬಳಿಕ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಹಾಗೂ ಪುನಿತ್ ರಾಜಕುಮಾರ್ ಚಲನಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ಈಗ ಮೂರನೇ ತಲೆಮಾರಿನ ಸರದಿ. ರಾಘವೇಂದ್ರ ರಾಜ್ ಕುಮಾರ್ ಎರಡನೇ ಪುತ್ರ ಯುವ ರಾಜ್ ಕುಮಾರ್ ಸ್ಯಾಂಡಲ್ ವುಡ್ ಎಂಟ್ರಿಗೆ ಸಿದ್ಧವಾಗಿದ್ದು, ಇನ್ನು ಹೆಸರಿಡದ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಯುವರಾಜ್ ನನ್ನು ಲಾಂಚ್ ಮಾಡಲು ಚಿತ್ರತಂಡ ಭರ್ಜರಿ ಸಿದ್ಧತೆ ನಡೆಸಿದ್ದು, ಯುವ01 ಎಂಬ ವರ್ಕಿಂಗ್ ಟೈಟಲ್ ಅಡಿಯಲ್ಲಿ ಫರ್ಸ್ಟ್ ಲುಕ್ ರಿಲೀಸ್ ಮಾಡಲಾಗಿದೆ. ಈಗ ಅಧಿಕೃತವಾಗಿ ಯುವರಾಜ್ ಲಾಂಚ್ ಗೂ ಮುಹೂರ್ತ ಸಿದ್ಧವಾಗಿದ್ದು, ಕರುನಾಡಿನ ಹಬ್ಬ  ಕನ್ನಡ ರಾಜ್ಯೋತ್ಸವದಂದು ಡಾ.ರಾಜ್ ಮೊಮ್ಮಗ ಚಂದನವನಕ್ಕೆ ಅಧಿಕೃತವಾಗಿ ಎಂಟ್ರಿ ಕೊಡಲಿದ್ದಾರೆ.

ಯುವರಾಜ್ ಕುಮಾರ್ ಲಾಂಚ್ ಗೆ ಸ್ಪೆಶಲ್ ವಿಡಿಯೋವೊಂದನ್ನು ಚಿತ್ರತಂಡ ಸಿದ್ಧಗೊಳಿಸುತ್ತಿದೆ. ನವೆಂಬರ್ 1 ರಂದು ವಿಡಿಯೋ ರಿಲೀಸ್ ಆಗಲಿದೆ. ಯುವರಾಜ್ ಮೊದಲ ಚಿತ್ರಕ್ಕೆ  ಪುನೀತ್ ರುದ್ರನಾಗ್ ಆಕ್ಷ್ಯನ್ ಕಟ್ ಹೇಳಲಿದ್ದು, ಉಗ್ರಂ ಹಾಗೂ ಕೆಜಿಎಫ್ ಖ್ಯಾತಿಯ ಸಂಗೀತ ನಿರ್ದೇಶಕ ರವಿ ಬಸ್ರೂರು ಸಂಗೀತವಿದೆ.

ರಾಘವೇಂದ್ರ ರಾಜಕುಮಾರ್ ಮೊದಲ ಪುತ್ರ ವಿನಯ್ ರಾಜಕುಮಾರ್ ಈಗಾಗಲೇ ಚಿತ್ರರಂಗದಲ್ಲಿ ಹೆಸರುಗಳಿಸಿದ್ದು, ಯುವನಾಯಕರಾಗೋ ಭರವಸೆ ಮೂಡಿಸಿದ್ದಾರೆ. ಅಣ್ಣನ ಹಾದಿಯನ್ನೇ ತುಳಿದಿರುವ ಯುವರಾಜ್ ಕೂಡ  ಈಗ ಸ್ಯಾಂಡಲ್ ವುಡ್ ನಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

RELATED ARTICLES

Most Popular