ಭಾನುವಾರ, ಏಪ್ರಿಲ್ 27, 2025
HomeBreakingSindhu menon:ಚರ್ತುಭಾಷಾ ನಟಿಗೆ ಹುಟ್ಟುಹಬ್ಬದ ಸಂಭ್ರಮ….! ಸಿಂಧೂ ಮೆನನ್ ನೆನೆದ ಸ್ಯಾಂಡಲ್ ವುಡ್…!!

Sindhu menon:ಚರ್ತುಭಾಷಾ ನಟಿಗೆ ಹುಟ್ಟುಹಬ್ಬದ ಸಂಭ್ರಮ….! ಸಿಂಧೂ ಮೆನನ್ ನೆನೆದ ಸ್ಯಾಂಡಲ್ ವುಡ್…!!

- Advertisement -

ಪಕ್ಕಾ ಹಳ್ಳಿ ಹುಡುಗಿಯಂತೆ ಕಾಣೋ ಚುರುಕು ಕಣ್ಣಿನ ಬೆಡಗಿ ಸಿಂಧೂ ಮೆನನ್ ಗೆ ಇಂದು ಹುಟ್ಟಿದ ಹಬ್ಬದ ಸಂಭ್ರಮ. ಕನ್ನಡ,ತೆಲುಗು,ತಮಿಳು,ಮಲೆಯಾಳಂ  ಚಿತ್ರಗಳಲ್ಲಿ ನಟಿಸಿದ ಸಿಂಧೂಗೆ ಅಭಿಮಾನಿಗಳು ಸೆಲೆಬ್ರೆಟಿಗಳು ಶುಭ ಹಾರೈಸಿದ್ದಾರೆ.

ಬೆಂಗಳೂರಿನಲ್ಲಿ ಹುಟ್ಟಿಬೆಳೆದ ನಟಿ ಸಿಂಧೂ ಮೆನನ್ ಪ್ರಸ್ತುತ ಸ್ಯಾಂಡಲ್ ವುಡ್ ನಿಂದ ಬ್ರೇಕ್ ಪಡೆದು ಅಮೇರಿಕಾದಲ್ಲಿ ವಾಸವಾಗಿದ್ದಾರೆ. ಮೂರು ಮಕ್ಕಳ ತಾಯಿಯಾಗಿರುವ ಸಿಂಧು ಮೆನನ್ ನಟನೆಯಿಂದ ದೂರ ಉಳಿದಿದ್ದಾರೆ.

1994 ರಲ್ಲಿ ಮಲೆಯಾಳಂ  ಚಿತ್ರದಲ್ಲಿ ನಟಿಸುವ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಸಿಂಧು ಮೆನನ್ 2012 ರಲ್ಲಿ ಕೊನೆಯದಾಗಿ ಪ್ರೇಮ ಪಿಲಿಸುತುಂದಿ ಹಾಗೂ ಸುಭದ್ರಾ ಸಿನಿಮಾದಲ್ಲಿ ನಟಿಸಿದ್ದರು.

ಕನ್ನಡದ ನಂದಿ,ಧರ್ಮ,ಯಾರೇ ನೀ ಹುಡುಗಿ ಸೇರಿದಂತೆ ಹಲವು ಚಿತ್ರದಲ್ಲಿ ನಟಿಸಿದ್ದ ಸಿಂಧುಗೆ ಯಶಸ್ಸು ಸಿಕ್ಕಿದ್ದು ಮಲೆಯಾಳಂ ಚಿತ್ರರಂಗದಲ್ಲಿ.

2010 ರಲ್ಲಿ ಉದ್ಯಮಿ ಪ್ರಭು ಅವರೊಂದಿಗೆ ಸಪ್ತಪದಿ ತುಳಿದ ಸಿಂಧು ಮದುವೆಯಾದ ಎರಡು ವರ್ಷಗಳ  ಬಳಿಕ ನಟನೆಗೆ ವಿದಾಯ ಹೇಳಿ ಅಮೇರಿಕಾದಲ್ಲಿ ನೆಲೆಸಿದ್ದಾರೆ.

ಸಿನಿಮಾ ನಟನೆಯ ಜೊತೆಗೆ ಉತ್ತಮ ಭರತನಾಟ್ಯ ಕಲಾವಿದೆಯಾಗಿರುವ ಸಿಂಧು ಮೆನನ್ ಹಲವು ಟಿವಿ ಆಂಕ್ಯರ್ ಶೋಗಳಲ್ಲಿಯೂ ನಿರೂಪಕಿಯಾಗಿಯೂ ಗುರುತಿಸಿಕೊಂಡಿದ್ದಾರೆ.

RELATED ARTICLES

Most Popular