ಮುದ್ದು-ಮುದ್ದಾಗಿ ಬೆಳೆಯುತ್ತಿರುವ ಜ್ಯೂನಿಯರ್ ಚಿರು ದರ್ಶನ್ ಕ್ಕೆ ಅಭಿಮಾನಿಗಳು ಕಾದಿರುವಾಗಲೇ ನಟಿ ಮೇಘನಾ ಮಗನ ಕೈಗೆ ಇಂಕ್ ಬಿದ್ದಿರೋ ಪೋಟೋ ಶೇರ್ ಮಾಡಿದ್ದಾರೆ.

ಇಷ್ಟಕ್ಕೂ ಮೂರು ತಿಂಗಳ ಕಂದ ಜ್ಯೂನಿಯರ್ ಚಿರು ಕೈಗೆ ಇಂಕ್ ಯಾಕೆ ಬಿತ್ತು ಅಂತ ಕನ್ ಪ್ಯೂಸ್ ಆದ್ರಾ ಕೈಗೆ ಇಂಕ್ ಬಿದ್ದಿರೋದು ನಿಜ.ಆದರೆ ಅದು ಕಲೆಯಲ್ಲ ಬದಲಾಗಿ ಪೊಲೀಯೋ ಹನಿ ಗುರುತು.

ರಾಜ್ಯ ಸರ್ಕಾರದ ಪೊಲೀಯೋ ಲಸಿಕೆ ಅಭಿಯಾನದ ಅಂಗವಾಗಿ ರಾಜ್ಯದಾದ್ಯಂತ ಪೊಲೀಯೋ ಲಸಿಕೆ ವಿತರಿಸಲಾಗುತ್ತಿದೆ.ಹೀಗಾಗಿ ನಟಿ ಮೇಘನಾ ಸರ್ಜಾ ಮನೆಗೆ ಭೇಟಿ ನೀಡಿದ ಆರೋಗ್ಯ ಕಾರ್ಯಕರ್ತರು ಜ್ಯೂನಿಯರ್ ಚಿರುಗೆ ನಾಲ್ಕು ಹನಿ ಪೊಲೀಯೋ ಲಸಿಕೆಯ ಹನಿ ಹಾಕಿ ಸಂಭ್ರಮಿಸಿದ್ದಾರೆ.

ತಮ್ಮ ಮಗನಿಗೆ ಪೋಲಿಯೋ ಹನಿ ಹಾಕುತ್ತಿರುವ ಹಾಗೂ ಶಾಹಿ ಹಾಕಲಾದ ಪೋಟೋ ಹಂಚಿಕೊಂಡಿರುವ ಮೇಘನಾ ಮಕ್ಕಳ ಆರೋಗ್ಯಕ್ಕೆ ಕಾಳಜಿ ವಹಿಸಬೇಕು. ಪೊಲೀಯೋ ಹನಿಯನ್ನು ೫ ವರ್ಷ ದೊಳಗೆ ಮಕ್ಕಳಿಗೆ ಹಾಕಿಸಿ ದೇಶವನ್ನು ಕೊರೋನಾ ಮುಕ್ತಗೊಳಿಸೋಣ ಎಂದಿದ್ದಾರೆ.

ಕಳೆದ ಅಕ್ಟೋಬರ್ ೨೨ ರಂದು ಮೇಘನಾ ರಾಜ್ ಗಂಡುಮಗುವಿಗೆ ಜನ್ಮನೀಡಿದ್ದು ಸುಂದರ್ ರಾಜ್ ಮೊಮ್ಮಗಲಿಗೆ ಚಿಂಟು ಎಂದುಕರೆಯುತ್ತಿದ್ದಾರೆ. ಸದ್ಯದಲ್ಲೇ ಅದ್ದೂರಿ ನಾಮಕರಣ ನಡೆಯಲಿದ್ದು. ಮೇಘನಾರಾಜ್ ಅಧಿಕೃತವಾಗಿ ನಾಮಕರಣ ದ ದಿನಾಂಕ ಅನೌನ್ಸ್ ಮಾಡಲಿದ್ದಾರೆ.