ಚೆನ್ನೈ: ಕೊನೆಗೂ ಲಕ್ಷಾಂತರ ಅಭಿಮಾನಿಗಳ ಹರಿಕೆ ಫಲಿಸಿದೆ. ಕೊರೊನಾ ವೈರಸ್ ಸೋಂಕಿಗೆ ತುತ್ತಾಗಿರುವ ಗಾನಗಂಧರ್ವ ಎಸ್.ಪಿ.ಬಿ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ.

ವಾರಾಂತ್ಯ ಅಥವಾ ಮುಂದಿನ ವಾರ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿಲಿದ್ದಾರೆ ಎಂದು ಎಸ್.ಪಿ.ಬಿ ಅವರ ಪುತ್ರ ಎಸ್.ಚರಣ್ ತಿಳಿಸಿದ್ದಾರೆ.

ಅನಾರೋಗ್ಯದ ಹಿನ್ನೆಲೆಯಲ್ಲಿ ಎಸ್ ಪಿ ಬಿ ಅವರನ್ನು ಚೆನ್ಮೈನ ಎಂಜಿಎಂ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಅಗಸ್ಟ್ 5ರಂದು ಅವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ನಂತರದಲ್ಲಿ ಆರೋಗ್ಯ ಸ್ಥಿತಿಯಲ್ಲಿ ಸಾಕಷ್ಟು ಏರು ಪೇರು ಆಗಿತ್ತು. ಆದರೀಗ ಎಸ್ ಪಿ. ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ.

ಆಸ್ಪತ್ರೆಯ ವೈದ್ಯರು ಕೂಡ ವಾರಾಂತ್ಯ ಅಥವಾ ಮುಂದಿನ ವಾರ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸುತ್ತೇವೆ ಎಂದು ತಿಳಿಸಿದ್ದಾರೆ ಎಂದು ಎಸ್ ಪಿಬಿ ಅವರ ಪುತ್ರ ಹೇಳಿದ್ದಾರೆ.