ಬೆಂಗಳೂರು : ಕೊರೊನಾ ಭೀತಿಯಿಂದ ರಾಜ್ಯದಾದ್ಯಂತ ಖಾಸಗಿ ಕ್ಲಿನಿಕ್ ಗಳು ಬಾಗಿಲು ಮುಚ್ಚಿವೆ. ಇದರಿಂದಾಗಿ ಸರಕಾರಿ ಆಸ್ಪತ್ರೆಗಳ ಮೇಲೆ ಒತ್ತಡ ಹೆಚ್ಚಾಗಿದ್ದು, ಬಂದ್ ಮಾಡಿರುವ ಖಾಸಗಿ ಕ್ಲಿನಿಕ್ ಗಳನ್ನು ತೆರೆಯದಿದ್ದಲ್ಲಿ ದಂಡದ ಜೊತೆಗೆ ಲೈಸೆನ್ಸ್ ರದ್ದು ಮಾಡಲಾಗುವುದು ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಎಚ್ಚರಿಸಿದ್ದಾರೆ.

ಖಾಸಗಿ ವೈದ್ಯರು ಕಮರ್ಷಿಯಲ್ ಆಗಿ ಕ್ಲಿನಿಕ್ ನಡೆಸಿಕೊಂಡು ಬಂದಿದ್ದಾರೆ. ಆವರು ಏನೇ ಮಾಡಿದ್ರೂ ಕೇಳಿಲ್ಲ. ಆದರೆ ಇದೀಗ ಸರಕಾರದ ಜೊತೆಗೆ ಕೈ ಜೋಡಿಸಲೇ ಬೇಕು ಎಂದು ಮನವಿ ಮಾಡಿದ್ದಾರೆ.

ರಾಜ್ದದಲ್ಲಿ ಇದುವರೆಗೆ 181 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. 5 ಮಂದಿ ಮೃತಪಟ್ಟಿದ್ದು, 28 ಮಂದಿ ಗುಣಮುಖರಾಗಿದ್ದಾರೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ತಿಳಿಸಿದರು.