ಬೆಂಗಳೂರು : ಬ್ಯಾಂಕ್ ಸಾಲ ಕಟ್ಟುವ ಸಲುವಾಗಿ ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಒತ್ತೆ ಇಟ್ಟು ಆಟೋ ಚಾಲಕರೊಬ್ಬರು 2 ಲಕ್ಷ ರೂಪಾಯಿ ಸಾಲ ಪಡೆದುಕೊಂಡಿದ್ದರು. ದಾರಿ ಮಧ್ಯೆ ಬರುತ್ತಿರುವಾಗ ಬಿರಿಯಾನಿ ತಿನ್ನುವ ಆಸೆಯಿಂದ ಹೋಟೆಲ್‌ಗೆ ಹೋಗಿದ್ದಾರೆ. ಈ ವೇಳೆಯಲ್ಲಿ ಹಣವನ್ನು ಬೈಕಿನಲ್ಲಿಟ್ಟು ಬಿರಿಯಾನಿ ತಿಂದು ವಾಪಾಸ್ ಬಂದಿದ್ದಾರೆ. ಬೈಕಿನಲ್ಲಿದ್ದ ಹಣ ಕಳವಾಗಿತ್ತು.
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಆಟೋ ಚಾಲಕರಾಗಿರುವ ಹನುಮಂತರಾಯ ಬ್ಯಾಂಕ್‍ನಲ್ಲಿ ಸಾಲ ಮಾಡಿಕೊಂಡಿದ್ದರು. ಕೊರೊನಾ ಹಿನ್ನೆಲೆಯಲ್ಲಿ ಸಾಲದ ಕಂತು ಪಾವತಿ ಮಾಡೋದಕ್ಕೆ ಹನುಮಂತ ರಾಯ ಅವರಿಂದ ಸಾಧ್ಯವಾಗಿರಲಿಲ್ಲ. ಇದಕ್ಕಾಗಿಯೇ ಮನೆಯಲ್ಲಿದ್ದ ಎಲ್ಲಾ ಚಿನ್ನಾಭರಣವನ್ನು ಅಡವಿಟ್ಟು ಎರಡು ಲಕ್ಷ ರೂಪಾಯಿ ಸಾಲ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: Wife sale for mobile : ಪತ್ನಿಯನ್ನೇ ಮಾರಾಟ ಮಾಡಿ ಮೊಬೈಲ್ ಖರೀದಿಸಿದ ಪತಿ !
ಬಿರಿಯಾನಿ ತಿಂದ ಬಳಿಕ ಬೈಕಿನಲ್ಲಿದ್ದ ಹಣವನ್ನು ಪರಿಶೀಲಿಸಿದ ವೇಳೆಯಲ್ಲಿ ಹಣ ನಾಪತ್ತೆಯಾಗಿರೋದು ಬೆಳಕಿಗೆ ಬಂದಿದೆ. ಕೂಡಲೇ ಅಕ್ಕಪಕ್ಕದ ಅಂಗಡಿಯಲ್ಲಿರುವ ಸಿಸಿ ಕ್ಯಾಮರಾ ಪರಿಶೀಲನೆ ಮಾಡಿದ ವೇಳೆಯಲ್ಲಿ ಕಳವು ಮಾಡಿರುವುದು ಖಚಿತವಾಗಿತ್ತು. ಈ ಕುರಿತು ಬ್ಯಾಡರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಆಧರಿಸಿ ತನಿಖೆಯನ್ನು ಆರಂಭಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಇಂತಹ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದರೂ ಕೂಡ ಜನರು ಮಾತ್ರ ಮೈಮರೆಯುತ್ತಿದ್ದಾರೆ. ಇನ್ನಾದ್ರೂ ಹಣವನ್ನು ವ್ಯವಹೃಿಸುವ ವೇಳೆಯಲ್ಲಿ ಎಚ್ಚರವಾಗಿರೋದು ಒಳಿತು.
ಇದನ್ನೂ ಓದಿ: Namma Metro : ನಮ್ಮ ಮೆಟ್ರೋಗೆ ದಶಕದ ಸಂಭ್ರಮ : 60 ಕೋಟಿ ಜನರ ಪ್ರಯಾಣ, 1286.6 ಕೋಟಿ ರೂ. ಆದಾಯ
(Auto driver loses Rs 2 lakh for Biryani’s wish!)